Biggboss Kannada Ott : ಐದು ಸಾವಿರ ಕೋಟಿ ಆಸ್ತಿಯ ಮಾಲೀಕ ರ್ಯವರ್ಧನ್ ಗುರೂಜಿ : ಸಿನಿಮಾರಂಗದವರಿಗೂ ಸಾಲ ನೀಡಿದ್ದಾರೆ..!!!
ಆಗಸ್ಟ್ 6 ರಂದು ಅದ್ಧೂರಿಯಾಗಿ ಶುರುವಾದ ಬಿಗ್ ಬಾಸ್ ಒಟಿಟಿ Voot ನಲ್ಲಿ ಪ್ರಸಾರವಾಗ್ತಿದೆ.. ಈ ಬಾರಿ 16 ಕಂಟೆಸ್ಟೆಂಟ್ ಗಳು ಮನೆ ಪ್ರವೇಶ ಮಾಡಿದ್ದಾರೆ.. ಇವರ ಪೈಕಿ ಸೋನು ಗೌಡ ಹಾಗೂ ಆರ್ಯವರ್ಧನ್ ಗುರೂಜಿ ಸಾಕಷ್ಟು ಟ್ರೋಲ್ ಗಳಿಂದಲೇ ಸುದ್ದಿಯಾದವರು…
ಈ ಇಬ್ಬರೂ ಪ್ರಸ್ತುತ ಮನೆಯ ಹೈಲೇಟ್.. ಅಂದ್ಹಾಗೆ ಇಬ್ಬರೂ ಆರಂಭದಲ್ಲೇ ಒಂದಷ್ಟು ಕಿರಿಕ್ ಮಾಡಿಕೊಂಡಿದ್ದಾರೆ.. ಇಬ್ಬರೂ ಈ ವಾರದ ಎಲಿಮಿನೇಷನ್ ಗೆ ನಾಮಿನೇಟ್ ಆಗಿದ್ದಾರೆ.. ಅಂದ್ಹಾಗೆ ಆರ್ಯ ವರ್ಧನ್ ಗುರೂಜಿ ಅವರು ತಮ್ಮನ್ನ ನಾಮಿನೇಟ್ ಮಾಡಿದ್ದಕ್ಕೆ ಪತ್ರಕರ್ತ ಸೋಮಣ್ಣ ಮಾಚಿಮಾಡ ಮೇಲೆ ಆರ್ಯವರ್ಧನ್ ಅಸಮಾಧಾನಗೊಂಡಿದ್ದರು..
ಅಂದ್ಹಾಗೆ ಮೊದಲನೇ ವಾಋದಲ್ಲಿ ಕಂಟೆಸ್ಟೆಂಟ್ ಗಳು ತಮ್ಮ ಕರಾಳ ಅನುಭವಗಳನ್ನ ಬಿಚ್ಚಿಡುತ್ತಾ , ಜೀವನದ ಬಗ್ಗೆ ಹೇಳಿಕೊಂಡಿದ್ದಾರೆ.. ಈ ವೇಳೆ ರ್ಯವರ್ಧನ್ ಅವರು ಕಂಟೆಸ್ಟೆಂಟ್ ಗಳು ಸಿಂಪತಿ ಗಿಟ್ಟಿಸಿಕೊಳ್ತಿದ್ದಾರೆ ಎಂಬರ್ಥದಲ್ಲಿ ಮಾತನಾಡಿದ್ದಾರೆ..
ತಂದೆ ತಾಯಿ ಗಲಾಟೆ, ಪ್ರೇಮ, ವಿರಹ, ಬ್ರೇಕ್ ಅಪ್ ಈ ರೀತಿಯ ವಿಷಯಗಳನ್ನು ಮನೆಯಲ್ಲಿ ಇದ್ದವರು ಹೇಳಿಕೊಂಡು ಸಿಂಪತಿ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಎಲ್ಲರ ಜೀವನದಲ್ಲೂ ಕಹಿ ಘಟನೆಗಳು ನಡೆದಿರುತ್ತವೆ. ಅವುಗಳನ್ನು ದಾಟಿಕೊಂಡು ಮುಂದೆ ಸಾಗಬೇಕು ಎಂದಿದ್ದಾರೆ. ಅಲ್ಲದೇ ಇದೇ ವೇಳೆ ತಾವು ಸಾವಿರಾರು ಕೋಟಿ ಒಡೆಯರು ಎಂದು ಆರ್ಯರ್ವಧನ್ ಗುರೂಜಿ ಹೇಳಿಕೊಂಡಿದ್ದಾರೆ.
ತಮ್ಮದು ಮೂಲತಃ ಹಳ್ಳಿ. ತಮ್ಮ ಹಿರಿಯರ ಆಸ್ತಿಯು ಸುಮಾರು ಐದು ಸಾವಿರ ಕೋಟಿಗೂ ಅಧಿಕ ಬೆಲೆ ಬಾಳುತ್ತದೆ. ನಾನಂತೂ ಕಷ್ಟದಲ್ಲಿ ಹುಟ್ಟಿಲ್ಲ. ಒಳ್ಳೆಯ ರೀತಿಯಲ್ಲೇ ಬದುಕಿದ್ದೇನೆ. ಅನೇಕರಿಗೆ ಸಹಾಯ ಮಾಡಿದ್ದೇನೆ. ಸಿನಿಮಾ ರಂಗಕ್ಕೂ ಸಾಲ ಕೊಟ್ಟಿದ್ದೇನೆ ಎಂದು ಹೇಳಿದ್ದಾರೆ…