ಒಂದೆಡೆ ರಾಜ್ಯಾದ್ಯಂತ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳು ಕ್ರಾಂತಿ ಜಾತ್ರೆ ಶುರು ಮಾಡಿದ್ದಾರೆ.. ಕ್ರಾಂತಿ ಸಿನಿಮಾದ ಶೂಟಿಂಗ್ ಮುಗಿದು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಸಿನಿಮಾದ ಪ್ರಚಾರದಲ್ಲಿ ಸಿನಿಮಾ ತಂಡ ಬ್ಯುಸಿಯಾಗಿದೆ..
ಈ ನಡುವೆ ಡಿ ಬಾಸ್ ಹಾಗೂ ಅಪ್ಪು ಅಭಿಮಾನಿಗಳ ನಡುವೆ ಕೊಂಚ ಅಸಮಾಧಾನ ಮೂಡಿದೆ.. ಹೌದು..! ಸೋಷಿಯಲ್ ಮೀಡಿಯಾದಲ್ಲಿ ಡಿ ಬಾಸ್ ಹಾಗೂ ಅಪ್ಪು ಅಭಿಮಾನಿಗಳ ನಡುವೆ ಕಿತ್ತಾಟ ಹೆಚ್ಚಾಗ್ತಲೇ ಇದೆ..
ದರ್ಶನ್ ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಪುನೀತ್ ರಾಜ್ ಕುಮಾರ್ ಅವರ ಬಗ್ಗೆ ಮಾತಾಡಿದ್ದರು. “ಸಹಜವಾಗಿ ನಾವು ಸತ್ತಮೇಲೆ ನೋಡಿದ್ದೇವೆ. ಫ್ಯಾನ್ಸ್ ಗಳು ಅಂದ್ರೆ ಹೇಗೆ ಎಂದು ಪುನೀತ್ ರಾಜ್ ಕುಮಾರ್ ಒಬ್ಬರದ್ದೇ ಸಾಕು. ಆದರೆ, ನಾನು ಬದುಕಿದ್ದಾಗಲೇ ಫ್ಯಾನ್ಸ್ ಗಳು ತೋರಿಸಿ ಬಿಟ್ಟರಲ್ಲ ನನಗೆ ಅಷ್ಟೇ ಸಾಕು ಎಂದು ದರ್ಶನ್ ಹೇಳಿದ್ದರು.
ದರ್ಶನ್ ಅವರ ಈ ಹೇಳಿಕೆ ಅಪ್ಪು ಅಭಿಮಾನಿಗಳನ್ನ ಕೊಂಚ ಕೆರಳಿಸಿಬಿಟ್ಟಿದೆ. ದರ್ಶನ್ ಕ್ಷಮೆ ಕೇಳ ಬೇಕೆಂದು ಪುನೀತ್ ರಾಜ್ ಕುಮಾರ್ ಫ್ಯಾನ್ಸ್ ಪಟ್ಟುಹಿಡಿದಿದ್ದಾರೆ.. ಹೀಗೆ ಪರಸ್ಪರ ಇಬ್ಬರೂ ಸ್ಟಾರ್ ಗಳ ಫ್ಯಾನ್ ಗಳ ವಾರ್ ಮುಂದುವರೆದಿದೆ.. ಡಿ ಬಾಸ್ ಸೋಲ್ಜರ್ ಅನ್ನೋ ಫ್ಯಾನ್ ಪೇಜ್ ನಲ್ಲಿ ಪುನೀತ್ ರಾಜ್‌ಕುಮಾರ್ ಫ್ಯಾನ್ಸ್ ಬಗ್ಗೆ ಅವಹೇಳಕಾರಿಯಾಗಿ ನಿಂದಿಸಲಾಗಿತ್ತು. ಈ ಫ್ಯಾನ್ ಪೇಜ್ ವಿರುದ್ಧ ಪುನೀತ್ ಅಭಿಮಾನಿಗಳು ತಿರುಗಿಬಿದ್ದಿದ್ದರು. ಇದೀಗ ಡಿ ಬಾಸ್ ಸೋಲ್ಜರ್ ಪೇಜ್ ಡಿಲೀಟ್ ಆಗಿದೆ ಎಂದು ಪುನೀತ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಹೇಳುತ್ತಿದ್ದಾರೆ..
ಇತ್ತ ದಾಸನ ಅಭಿಮಾನಿಗಳು ದರ್ಶನ್ ಅವರ ಹೇಳಿಕೆಯನ್ನ ತಿರುಚಲಾಗಿದೆ ಎಂದು ವಾದ ಮಾಡುತ್ತಾ ತಮ್ಮ ನೆಚ್ಚಿನ ನಟನ ಬೆಂಬಲಕ್ಕೆ ನಿಂತಿದ್ದಾರೆ.. ಅಲ್ದೇ ಅಪ್ಪು ಬಗ್ಗೆ ದರ್ಶನ್ ಮಾತನಾಡಿರುವ ವಿಡಿಯೋವನ್ನ ಸಹ ವೈರಲ್ ಮಾಡಿದ್ಧಾರೆ.. ಈ ವಿಡಿಯೋದಲ್ಲಿ ಸಂದರ್ಶನದಲ್ಲಿ ಭಾಗಿಯಾಗಿರುವ ದರ್ಶನ್ , ಪುನೀತ್ ರಾಜ್‌ಕುಮಾರ್ ಬಗ್ಗೆ ಮಾತಾಡಿದ್ದಾರೆ.. ಕ್ರಾಂತಿ ಸಿನಿಮಾ ರಿಲೀಸ್ ಆಗಿಬಿಡಬೇಕಾಗಿತ್ತು. ಸೆಟ್ ಹಾಕಿದಾಗ ಮಳೆ ಬಂತು. ಆಮೇಲೆ ಪುನೀತ್ ಅವರದ್ದು ಹಂಗಾಯ್ತು. ಪುನೀತ್ ಅವರದ್ದು ಆ ತರ ಆದಾಗ ನಾನು ಒಬ್ಬ ಕಲಾವಿದ. ಅವರ ಜೊತೆ ತುಂಬಾ ಒಡನಾಟ ಇಟ್ಟುಕೊಂಡಿದ್ವಿ. ದೊಡ್ಮನೆಯಿಂದ ನಾವೆಲ್ಲಾ ಬಂದವರು.
ಹಂಗೆ ಆದ ತಕ್ಷಣ 11 ದಿನ ಮಾಡೋದು ಬೇಡ ಕಣಯ್ಯಾ. ನಮಗೂ ಸೂತಕ ಅದು ಎಂದು ನಾನೇ ಶೂಟಿಂಗ್ ನಿಲ್ಲಿಸಿಬಿಟ್ಟೆ ಎಂದಿರುವ ವಿಡಿಯೋ ಇದಾಗಿದೆ.. ಒಟ್ನಲ್ಲಿ ಈ ಫ್ಯಾನ್ ವಾರ್ ಎಲ್ಲಿಗೆ ಹೋಗಿ ನಿಲ್ಲುತ್ತೋ ಕಾದು ನೋಡ್ಬೇಕಿದೆ..