ಚಾಲೆಂಜಿಂಗ್ ದರ್ಶನ್ ಅವರ ಮೇಲೆ ಅಪ್ಪು ಅಭಿಮಾನಿಗಳು ಬೇಸರಗೊಂಡಿದ್ದಾರೆ… ಸೋಷಿಯಲ್ ಮೀಡಿಯಾದಲ್ಲಿ ಅಪ್ಪು ಹಾಗೂ ಡಿ ಬಾಸ್ ಫ್ಯಾನ್ಸ್ ನಡುವೆ ಕಿತ್ತಾಟ ನಡೆಯುತ್ತಿದೆ.. ಅಪ್ಪು ಅಭಿಮಾಣಿಗಳು ದರ್ಶನ್ ಕ್ಷಮೆಯಾಚಿಸುವಂತೆ ಪಟ್ಟುಹಿಡಿದಿದ್ದಾರೆ.. ಈ ನಡುವೆ ದಾಸನಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ..
ದರ್ಶನ್ ಬೆದರಿಕೆ ಹಾಕಿರುವುದಾಗಿ ಆರೋಪಿಸಿ ನಿರ್ಮಾಪಕ ಭರತ್ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಭಗವಾನ್ ಶ್ರೀಕೃಷ್ಣ ಪರಮಾತ್ಮ ಹೆಸರಿನ ಸಿನಿಮಾವನ್ನು ಎರಡು ವರ್ಷದ ಹಿಂದೆ ಮುಹೂರ್ತ ಮಾಡಿ ಪ್ರಾರಂಭಿಸಿದ್ದರು. ಆ ಸಿನಿಮಾಕ್ಕೆ ಧೃವನ್ ನಾಯಕ ನಟರಾಗಿದ್ದರು. ಆದರೆ ಅನಿವಾರ್ಯ ಕಾರಣಗಳಿಂದ ಸಿನಿಮಾ ಚಿತ್ರೀಕರಣ ತಡವಾಗಿತ್ತು.
ಸಿನಿಮಾಕ್ಕೆ ಹಣಕಾಸಿನ ಸಮಸ್ಯೆ ಎದುರಾಗಿದ್ದಕ್ಕೆ ಚಿತ್ರೀಕರಣ ತಡವಾಗಿದೆ ಎಂದು ನಿರ್ಮಾಪಕ ಭರತ್, ನಟ ಧ್ರುವನ್ ಬಳಿ ಹೇಳಿದಾಗ, ಧ್ರುವನ್, ದರ್ಶನ್ ಅವರಿಂದ ನಿರ್ಮಾಪಕರಿಗೆ ಕರೆ ಮಾಡಿಸಿದ್ದರು ಎನ್ನಲಾಗಿದೆ.. ಆಗ ದರ್ಶನ್, ನಿರ್ಮಾಪಕರಿಗೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.. ದೂರಿಗೆ ಸಂಬಂಧಿಸಿದಂತೆ ದರ್ಶನ್ ಅವರದ್ದು ಎನ್ನಲಾಗುತ್ತಿರುವ ಆಡಿಯೋ ಕೂಡ ವೈರಲ್ ಆಗ್ತಿದೆ.. ನೀನು ಇರಲ್ಲ, ಏನಾದರೂ ಮಾಡುವ ಮುಂಚೆ ಹೇಳಿಯೇ ಮಾಡ್ತೀನಿ ರೆಡಿ ಇರು. ನೀನೆ ಕಾಣಿಸದಂತೆ ಮಾಡಿಬಿಡ್ತೀನಿ ಹುಷಾರಾಗಿರು ಎಂದು ಹೇಳಿರುವುದು ಆಡಿಯೋದಲ್ಲಿ ದಾಖಲಾಗಿದೆ.