ಸದ್ಯಕ್ಕೆ ಸೌತ್ ಇಂಡಸ್ಟ್ರಿಯಲ್ಲಿ ಒನ್ ಆಫ್ ದ ಬ್ಯುಸಿಯೆಸ್ಟ್ ನಟಿಯರ ಪೈಕಿ ಒಬ್ಬರು ‘ಮಹಾನಟಿ’ ಖ್ಯಾತಿಯ ಕೀರ್ತಿ ಸುರೇಶ್.. ಮಹೇಶ್ ಬಾಬು ಅವರ ಜೊತೆಗೆ ಸರ್ಜಾರಿ ವಾರು ಪಾಟ ಸಿನಿಮಾದಲ್ಲಿ ಕೀರ್ತಿ ಸುರೇಶ್ ಕಾಣಿಸಿಕೊಂಡಿದ್ದರು.. ಈ ಸಿನಿಮಾ ಸೂಪರ್ ಸಕ್ಸಸ್ ಕಂಡಿತ್ತು..
ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿರೋ ಕೀರ್ತಿ ಇದೀಗ ಶೀಘ್ರವೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಸೌತ್ ನಲ್ಲಿ ಸಖತ್ ಸೌಂಡ್ ಮಾಡ್ತಿದೆ..
‘ಮಹಾನಟಿ’ ಖ್ಯಾತಿಯ ಕೀರ್ತಿ ಸುರೇಶ್ ಮದುವೆಯಾಗಲಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ವೈರಲ್ ಆಗ್ತಿದೆ..
ಅಂದ್ಹಾಗೆ ಇದೇ ರೀತಿ ಹಲವು ಬಾರಿ ಕೀರ್ತಿ ಸುರೇಶ್ ಮದುವೆ ಗಾಸಿಪ್ ಗಳು ಹರಿದಾಡಿದ್ದವು.. ಕೀರ್ತಿ ಮನೆಯವರು ಮೆಚ್ಚಿದ ಹುಡುಗನ ಕೈ ಹಿಡಿಯಲಿದ್ದಾರೆ ಎನ್ನಲಾಗ್ತಿದೆ.. ಈ ಬಗ್ಗೆ ಅಧಿಕೃತವಾಗಿ ನಟಿ ಹೇಳಿಕೊಂಡಿಲ್ಲ.. ಆದ್ರೆ ಶೀಘ್ರವೇ ಈ ಬಗ್ಗೆ ಅಧಿಕೃತವಾಗಿ ತಿಳಿಸುವ ನಿರೀಕ್ಷೆಯಿದೆ.. ಅಂದ್ಹಾಗೆ ಉದ್ಯಮಿಯೊಬ್ಬರ ಕೈಹಿಡಿಯಲಿದ್ದಾರಂತೆ ಕೀರ್ತಿ..