Rashmika – Naga chaithanya : ರಶ್ಮಿಕಾ ಜೊತೆಗೆ ಸಮಂತಾ ಮಾಜಿ ಪತಿ ರೋಮ್ಯಾನ್ಸ್..!!
ಟಾಲಿವುಡ್ ನಲ್ಲಿ ಬಹುಬೇಡಿಕೆಯ ನಟಿಯಾಗಿ ಮೆರೆಯುತ್ತಿರುವ ರಶ್ಮಿಕಾಗೆ ಟಾಲಿವುಡ್ ನಲ್ಲೂ ಬೇಡಿಕೆ ಕಮ್ಮಿಯಿಲ್ಲ.. ಕನ್ನಡದಿಂದ ಔಟ್ ಡೇಟೆಡ್ ಆಗಿದ್ದರೂ ಬಾಲಿವುಡ್ ನಲ್ಲಿಯೂ ಮಿಂಚುತ್ತಿದ್ದಾರೆ..
ಬಾಲಿವುಡ್ ನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನ ಮಾಡ್ತಿದ್ಧಾರೆ.. ಕನ್ನಡ ಸಿನಿಮಾರಂಗದಿಂದ ಹಿಟ್ ಆದವರು.. ಸದ್ಯ ಕನ್ನಡ ಸಿನಿಮಾರಂಗದಿಂದ ದೂರವಿದ್ದಾರೆ..
ಅಂದ್ಹಾಗೆ ತಮಿಳಿನಲ್ಲಿ ವಿಜಯ್ ಅವರ 66 ನೇ ಸಿನಿಮಾದಲ್ಲಿ ರಶ್ಮಿಕಾ ನಾಯಕಿ ಅನ್ನೋದು ಎಲ್ರಿಗೂ ಗೊತ್ತಿದೆ..
ನಟಿ ರಷ್ಮಿಕಾ ಮಂದಣ್ಣ ಪ್ರಸ್ತುತ ಸಾಲು ಸಾಲು ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ.
ತೆಲುಗು, ತಮಿಳು ಸಿನಿಮಾಗಳಲ್ಲಿ ಅಲ್ಲದೇ ಹಿಂದಿಯಲ್ಲೂ ಕೂಡ ಸಿನಿಮಾಗಳನ್ನು ಮಾಡುತ್ತಿದ್ದಾರೆ.
ಇಲ್ಲಿಯವರಗೆ ಆಕೆ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಸಿನಿಮಾದಲ್ಲಿ ನಟಿಸಿದ್ದು, ಮಿಷನ್ ಮಜ್ನು ರಿಲೀಸ್ ಗೆ ಸಿದ್ಧವಾಗಿದೆ.
ಶೀಘ್ರದಲ್ಲಿಯೇ ಮತ್ತೊಂದು ಸಿನಿಮಾ ಗುಡ್ ಬೈ ಪ್ರೇಕ್ಷಕರ ಮುಂದೆ ಬರಲಿದೆ.
ಇದರ ಜೊತೆಗೆ ತಮಿಳಿನ ಸ್ಟಾರ್ ನಟ ಚಿಯಾನ್ ವಿಜಯ್ ಜೊತೆಗೂ ಮುಂದಿನ ಸಿನಿಮಾದಲ್ಲಿ ನಟಿಸಿದ್ದಾರೆ.. ಇದೀಗ ಅವರಿಗೆ ಮತ್ತೊಂದು ಆಫರ್ ಸಿಕ್ಕಿದೆ… ಟಾಲಿವುಡ್ ನಟ ನಾಗ ಚೈತನ್ಯ ಜೊತೆಗೆ ತೆರೆ ಹಂಚಿಕೊಳ್ಳಲಿದ್ದಾರೆ..
ಹೌದು.. ಸದ್ಯ ಸಮಂತಾ ಜೊತೆಗೆ ಡಿವೋರ್ಸ್ ನಂತರ ಸಿನಿಮಾರಂಗದಲ್ಲಿ ಬ್ಯುಸಿಯಾಗಿರೋ ನಾಗಚೈತನ್ಯ , ಸಾಲು ಸಾಳು ಸಿನಿಮಾಗಳು ಫ್ಲಾಪ್ ಆಗ್ತಿವೆ.. ಅಂದ್ಹಾಗೆ ಅವರ ಮೊದಲ ಬಾಲಿವುಡ್ ಸಿನಿಮಾ ಅಮಿರ್ ಖಾನ್ ನಾಯಕನಾಗಿರುವ ಲಾಲ್ ಸಿಂಗ್ ಚಡ್ಡಾ ಸಿನಿಮಾ ಆಗಸ್ಟ್ 11 ರಂದು ರಿಲೀಸ್ ಆಗಬೇಕಿದೆ..
ನಾಗಚೈತನ್ಯ ಜೊತೆಗೆ ರಶ್ಮಿಕಾ ತೆರೆ ಹಂಚಿಕೊಳ್ಳಲಿದ್ದಾರೆ ಎನ್ನಲಾಗ್ತಿದೆ.. ಅಂದ್ಹಾಗೆ ರಶ್ಮಿಕಾ ನಟನೆಯ ಸೀತಾ ರಾಮಂ ಸಿನಿಮಾ ಸೂಪರ್ ಪ್ರದರ್ಶನ ಕಾಣ್ತಿದೆ..
ಪರಶುರಾಮ್ ನಿರ್ದೇಶನದ ಚಿತ್ರದಲ್ಲಿ ನಾಗಚೈತನ್ಯ ಮತ್ತು ರಶ್ಮಿಕಾ ಒಂದಾಗ್ತಿದ್ದಾರೆ.