ಪ್ರಶಾಂತ್ ನೀಲ್ ಅವರು KGF ಸರಣಿ ಮೂಲಕ ಇಡೀ ವಿಶ್ವಕ್ಕೆ ಕನ್ನಡ ಇಂಡಸ್ಟ್ರಿ ಪವರ್ ತೋರಿಸಿಕೊಟ್ಟರು.. ಪ್ರಸ್ತುತ ತಮ್ಮ ನಾಲ್ಕನೇ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.. ಮಾಡಿರೋದು ಮೂರೇ ಸಿನಿಮಾ.. ಆದ್ರೆ ಮೂರು ಸಿನಿಮಾಗಳು ಕೂಡ ಆಲ್ ಓವರ್ ಇಂಡಿಯಾ ಸಂಚಲನ ಸೃಷ್ಟಿ ಮಾಡಿದಂತಹ ಸಿನಿಮಾಗಳು.. ಪ್ರಸ್ತುತ ಪ್ಯಾನ್ ಇಂಡಿಯಾ ಸಿನಿಮಾ ಪ್ರಭಾಸ್ ಜೊತೆಗೆ ಸಲಾರ್ ನಲ್ಲಿ ಬ್ಯುಸಿಯಿದ್ದಾರೆ,..
ಅಂದ್ಹಾಗೆ ಸಿನಿಮಾ ಇಂಡಸ್ಟ್ರಿಯಲ್ಲಿ ‘ಉಗ್ರಂ’ ಅಲೆ ಎಬ್ಬಿಸಿದ ಪ್ರಶಾಂತ್ ನೀಲ್ ಅವರಿಗೆ ಇದು ಮೊದಲನೇ ಸಿನಿಮಾವಾಗಿತ್ತು.. ಈ ಸಿನಿಮಾ ಮೂಲಕ ಮತ್ತೆ ಪವರ್ ಫುಲ್ ಆಗಿ ಕಮ್ ಬ್ಯಾಕ್ ಮಾಡಿದ್ದು ರೋರಿಂಗ್ ಸ್ಟಾರ್ ಶ್ರೀಮುರುಳಿ..
‘ಉಗ್ರಂ’ ಸಿನಿಮಾ ರಿಲೀಸ್ ಗೂ ಮುನ್ನ ಅಷ್ಟಾಗಿ ಸದ್ದು ಮಾಡಲಿಲ್ಲ.. ಅದ್ಯಾವಾಗ ಬಿಗ್ ಸ್ಕ್ರೀನ್ ಗೆ ಅಪ್ಪಳಿಸಿತೋ , ಸಿನಿಮಾ ಸೂಪರ್ ಹಿಟ್ ಆಯ್ತು.. ಇದು ಪ್ರಶಾಂತ್ ನೀಲ್ ಅವರ ನಿರ್ದೇಶನದ ಮೊದಲ ಸಿನಿಮಾವಾಗಿತ್ತು.. 2014 ರಲ್ಲಿ ಸಿನಿಮಾ ರಿಲೀಸ್ ಆಗಿತ್ತು.. ಇದೀಗ ಸುಮಾರು 8 ವರ್ಷಗಳೇ ಕಳೆದಿದೆ.. ಆದ್ರೆ ಈಗಲೂ ಈ ಸಿನಿಮಾವನ್ನ ಯಾರೂ ಮರೆತಿಲ್ಲ , ಮರೆಯೋದೂ ಇಲ್ಲ..
ಅಂದ್ಹಾಗೆ ಈ ಸಿನಿಮಾ ಈಗ ಮರಾಠಿಗೆ ರೀಮೇಕ್್ ಆಗ್ತಿದೆ..
ಹೌದು..! ಮರಾಠಿಯಲ್ಲಿ ಉಗ್ರಂ ಸಿನಿಮಾ ರೀಮೇಕ್ ಆಗುತ್ತಿದೆ. ಮರಾಠಿಯಲ್ಲಿ ಈ ಸಿನಿಮಾವನ್ನ ಸುಮಿತ್ ಕಕ್ಕಡ್ ಎನ್ನುವವರು ನಿರ್ದೇಶನ ಮಾಡುತ್ತಿದ್ದಾರೆ.
ಕನ್ನಡದಲ್ಲಿ ತುಂಬಾ ಮುದ್ದಾಗಿ ಮುಗ್ಧಳ ಪಾತ್ರದಲ್ಲಿ ಹರಿಪ್ರಿಯ ನಟಿಸಿದ್ದರು.. ಅವರ ಪಾತ್ರವನ್ನ ಮರಾಠಿಯಲ್ಲಿ ಶಾನ್ವಿ ಶ್ರೀವತ್ಸವ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಇನ್ನು ನಾಯಕನಾಗಿ ಶರದ್ ಖೇಳ್ಕರ್ ನಟಿಸುತ್ತಿದ್ದಾರೆ ಎನ್ನಲಾಗಿದೆ..