Big Boss Ott ಸೀಸನ್ ಒಂದರಲ್ಲಿ ಸಾಕಷ್ಟು ಹೊಸತನ ವಿಶೇಷತೆಗಳಿದೆ.. ಮನೆಗೆ ಭಿನ್ನ ಭಿನ್ನ ಅಭಿಪ್ರಾಯ ಹೊಂದಿರುವ ವ್ಯಕ್ತಿಗಳ ಎಂಟ್ರಿಯಾಗಿದೆ..
ಬಿಗ್ ಬಾಸ್ ನಲ್ಲಿ ಬಾರಿ ಸಿನಿಮಾ ನಟರು , ಕಾಂಟ್ರವರ್ಸಿ ಮಾಡಿಕೊಂಡಿದ್ದರು , ಸೋಷಿಯಲ್ ಮೀಡಿಯಾ ಸ್ಟಾರ್ ಗಳು , ಪತ್ರಕರ್ತರು , ಉದ್ಯಮಿಗಳು ಎಲ್ಲರೂ ಇದ್ದಾರೆ.. ಈ ಪೈಕಿ ಒಬ್ಬರು ರಾಕೇಶ್ ಅಡಿಗ..
ರಾಕೇಶ್ ಅಡಿಗ ನಟನ ಜೊತೆಗೆ ಒಳ್ಳೆ ರ್ಯಾಪರ್ ಕೂಡ.. ಜೋಷ್ ಸಿನಿಮಾ ಮೂಲಕ ಕನ್ನಡದಲ್ಲಿ ಖ್ಯಾತಿ ಪಡೆದಿರುವ ನಟ ಬಿಗ್ ಬಾಸ್ ನಲ್ಲಿ ತಮ್ಮ ಪ್ರತಿಭೆ ತೋರಿಸಲು ಬಂದಿದ್ದಾರೆ..
ಅಂದ್ಹಾಗೆ ಇತ್ತೀಚೆಗೆ ರಾಕೇಶ್ ಮನೆಯಲ್ಲಿ ರ್ಯಾಪ್ ( Rap) ಹಾಡಿ ಎಲ್ಲರ ಗಮನ ಸೆಳೆದಿದ್ದಾರೆ.. ಅವರ ರ್ಯಾಪ್ ಗೆ ಮನೆಯವರು ಚಪ್ಪಾಳೆ ತಟ್ಟುತ್ತಾ ಅಪ್ರಿಶಿಯೇಟ್ ಮಾಡಿದ್ದಾರೆ..
ಇತ್ತ ರಾಕಿನ ನೋಡಿ ನಂದಿನಿ ಸಹ ರ್ಯಾಪ್ ಮಾಡಿ ಗಮನ ಸೆಳೆದಿದ್ದಾರೆ.. ಅಂದ್ಹಾಗೆ ಬೆಂಗಳೂರಿನ ನಂದಿನಿ ಅವರು ಹಿಂದಿಯ ಖ್ಯಾತ ರಿಯಾಲಿಟಿ ಶೋ ರೋಡೀಸ್ ನ ವಿನ್ನರ್ ಆಗಿದ್ದರು.. ಆ ನಂತರದಿಂದ ಅವರಿಗೆ ಫ್ಯಾನ್ಸ್ ಸಂಖ್ಯೆ ಹೆಚ್ಚಾಗ ತೊಡಗಿದ್ದು , ಸೋಷಿಯಲ್ ಮೀಡಿಯಾದಲ್ಲಿ ಅವರನ್ನ ಜನರು ದೊಡ್ಡ ಮಟ್ಟದಲ್ಲಿ ಫಾಲೋ ಮಾಡ್ತಿದ್ದಾರೆ..
ರೋಡೀಸ್ ನಲ್ಲಿ ನಂದಿನಿ ಗೆದ್ದು ಬೀಗಿದ್ದರು.. ಜಶ್ವಂತ್ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು.. ಇಬ್ಬರು ಸದ್ಯ ಡೇಟಿಂಗ್ ಮಾಡ್ತಿದ್ದಾರೆ.. ಜಶ್ವಂತ್ ಸಹ ಬಿಗ್ ಬಾಸ್ ಪ್ರವೇಶಿಸಿದ್ದಾರೆ.. ಅಂದ್ಹಾಗೆ ನಂದಿನಿ ಚಿನಕುರಳಿ ನಂದು ಅಂತಲೇ ಫೇಮಸ್.. 25 ವರ್ಷದ ನಂದಿನಿ ಡ್ಯಾನ್ಸರ್ , ಫುಟ್ಬಾಲರ್, ಅಥ್ಲೆಟ್ ಆಗಿದ್ದಾರೆ.. ಜೊತೆಗೆ ಫಿಟ್ನೆಸ್ ಮಾಡೆಲ್ ಕೂಡ ಆಗಿದ್ದಾರೆ..