Bimbisara : 5 ನೇ ದಿನದ ‘ಬಿಂಬಿಸಾರ’ ಬಾಕ್ಸ್ ಆಫೀಸ್ ಕಲೆಕ್ಷನ್ ..!! 40 ಕೋಟಿ
ನಂದಮೂರಿ ಕಲ್ಯಾಣ್ ರಾಮ್ ನಟನೆಯ ‘ಬಿಂಬಿಸಾರ’ ಸಿನಿಮಾ ಥಿಯೇಟರ್ ಗಳಲ್ಲಿ ಉತ್ತಮ ಪ್ರದರ್ಶನ ಕಂಡಿದೆ.. ಈ ಸಿನಿಮಾವನ್ನ ಮಲ್ಲಿಡಿ ವಸಿಷ್ಟ ಅವರು ನಿರ್ದೇಶನ ಮಾಡಿದ್ದಾರೆ,.. ಈ ಸಿನಿಮಾ ಅವರ ನಿರ್ದೇಶನದ ಚೊಚ್ಚಲ ಸಿನಿಮಾವಾಗಿದೆ..
ಸಿನಿಮಾ ತೆಲುಗು ರಾಜ್ಯಗಳಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ..
ನಿಜಾಮ್ – 90 ಎಲ್
ವೈಜಾಗ್ – 38 ಲಕ್ಷ
ಸೀಡೆಡ್ – 63 ಲಕ್ಷ
ಕೃಷ್ಣ – 14 ಲಕ್ಷ
ಗುಂಟೂರು – 17.5 ಲಕ್ಷ
ನೆಲ್ಲೂರು – 5.5 ಲಕ್ಷ
ಪೂರ್ವ ಗೋದಾವರಿ – 15.5 ಲಕ್ಷ
ಪಶ್ಚಿಮ ಗೋದಾವರಿ – 12 ಲಕ್ಷ
ಸಾಗರೋತ್ತರ ಕಲೆಕ್ಷನ್‌ಗಳ ಜೊತೆಗೆ, ಚಿತ್ರವು ತನ್ನ 5 ನೇ ದಿನಕ್ಕೆ 3.75 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ ಎಂದು ವರದಿಯಾಗಿದೆ. ಇದರೊಂದಿಗೆ ಚಿತ್ರ 5 ದಿನದಲ್ಲಿ 38 ಕೋಟಿ ರೂ.ಗೂ ಅಧಿಕ ಗಳಿಕೆ ಮಾಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ.
‘ಬಿಂಬಿಸಾರ’ ತೆಲುಗಿನ ಫ್ಯಾಂಟಸಿ ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು, ಎನ್‌ಟಿಆರ್ ಆರ್ಟ್ಸ್ ನಿರ್ಮಾಣದಲ್ಲಿ ಕಲ್ಯಾಣ್ ರಾಮ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಕ್ಯಾಥರೀನ್ ತ್ರೇಸಾ, ಸಂಯುಕ್ತಾ ಮೆನನ್ ಮತ್ತು ಪ್ರಕಾಶ್ ರಾಜ್ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.