Chakde India : ಕೆಟ್ಟ ಸಿನಿಮಾವೆಂದು ಭಾವಿಸಿದ್ದರಂತೆ ಶಾರುಖ್ , ಸಿನಿಮಾ ತಿರಸ್ಕರಿಸಿದ್ದ ಸಲ್ಮಾನ್
15 ವರ್ಷಗಳ ಹಿಂದೆ ದೇಶಾದ್ಯಂತ ಸಂಚಲನ ಸೃಷ್ಟಿ ಮಾಡಿದ್ದ ಚಕ್ ದೇ ಇಂಡಿಯಾ ಸಿನಿಮಾ ದೇಶದಲ್ಲಿ ಒಂದು ಹೊಸ ಅಲೆಯನ್ನೇ ಸೃಷ್ಟಿ ಮಾಡಿತ್ತು.. ಮಹಿಳೆಯರ ಕ್ರೀಡಾ ಪ್ರಧಾನ ಸಿನಿಮಾ ಇದಾಗಿತ್ತು.. ಶಾರುಕ್ ಖಾನ್ ಸಿನಿಮಾದಲ್ಲಿ ಕೋಚ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು..
ಈ ಸಿನಿಮಾ ಬಂದು ಇದೀಗ 15 ವರ್ಷ ಕಳೆದಿದೆ.. ಈ ಸಿನಿಮಾ ಕಮರ್ಷಿಯಲ್ ಹಿಟ್ ಆಗಿತ್ತು.. ಬಾಕ್ಸ್ ಆಫೀಸ್ ನಲ್ಲಿ ಸಿನಿಮಾ ಮ್ಯಾಜಿಕ್ ಮಾಡಿತ್ತು..
ಶಿಮಿತ್ ಅಮೀನ್ ನಿರ್ದೇಶನದ ಚಕ್ ದೇ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ವಿಶ್ವದಾದ್ಯಂತ 108 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು.. ಗಮನಿಸಬೇಕಾದ ವಿಚಾರ ಅಂದ್ರೆ ಸಿನಿಮಾ 20 ಕೋಟಿ ಬಜೆಟ್ ನಲ್ಲಿ ತಯಾರಾಗಿತ್ತು.. ಸಿನಿಮಾ ಇಂಡಸ್ಟ್ರಿಯಲ್ ಹಿಟ್ ಆಗಿತ್ತು..
ಈ ಸಿನಿಮಾ ಶಾರುಕ್ ಖಾನ್ ಅವರ ಅತ್ಯುತ್ತಮ ಸಿನಿಮಾಗಳ ಪೈಕಿ ಒಂದು.. ಆದ್ರೆ ಶಾರುಖ್ ಖಾನ್ ಅವರು ಈ ಸಿನಿಮಾ ಮಾಡೋದಕ್ಕೆ ಮೊದ ಮೊದಲು ಹಿಂದೇಟು ಹಾಕಿದ್ದರಂತೆ… ಅಲ್ಲದೇ ಈ ಸಿನಿಮಾವನ್ನ ಮೊದಲಿಗೆ ಸಲ್ಮಾನ್ ಖಾನ್ ಅವರು ತಿರಸ್ಕರಿಸಿದ್ದರಂತೆ..
ಹೌದು ಈ ಸಿನಿಮಾದ ಬಗ್ಗೆ ಅಭಿಪ್ರಾಯ ಹಂಚಿಕೊಂಡಿರುವ ಶಾರುಖ್ ಖಾನ್ ನಾನು ಸಿನಿಮಾದ ಮೊದಲ ಪ್ರದರ್ಶನ ನೋಡಿದಾಗ ಇದು ನಮ್ಮ ಜೀವನದಲ್ಲಿ ನಾವು ಮಾಡಿದ ಕೆಟ್ಟ ಚಿತ್ರ ಎಂದು ಭಾವಿಸಿದ್ದೆವು. ಹುಡುಗಿಯರಿಗೆ ಇದು ತಿಳಿದಿರಲಿಲ್ಲ ಏಕೆಂದರೆ ಅವರಿಗೆ ಮೊದಲ ಬಾರಿಗೆ ತೆರೆಯ ಮೇಲೆ ನೋಡುವುದು ದೊಡ್ಡ ವಿಷಯವಾಗಿತ್ತು. ಹಾಗಾಗಿ ನಾವು ನಾಲ್ವರು ಅಲ್ಲಿ ಕುಳಿತು ಬೇಸರದಲ್ಲಿರುವಾಗ ಅವರು ಕಿರಿಕಿರಿಯಿಂದ ಕಿರುಚುತ್ತಾ ನೃತ್ಯ ಮಾಡುತ್ತಿದ್ದರು ದು ನೆನಪು ಮಾಡಿಕೊಂಡಿದ್ದಾರೆ..
ಅಂದ್ಹಾಗೆ ಈ ಸಿನಿಮಾದ ಆಫರ್ ಮೊದಲಿಗೆ ಸಲ್ಮಾನ್ ಖಾನ್ ಗೆ ಸಿಕ್ಕಿತ್ತಂತೆ.. ಆದ್ರೆ ಈ ಸಿನಿಮಾವನ್ನ ಅವರು ತಿರಸ್ಕರಿಸಿದ್ದರು.. ಅಲ್ದೇ ಈ ಬಗ್ಗೆ ಸಲ್ಮಾನ್ ಖಾನ್ ಅವರು ಸಂದರ್ಶನವೊಂದ್ರಲ್ಲಿ ಮಾತನಾಡ್ತಾ ಚಕ್ ದೇ ಇಂಡಿಯಾ ಸಿನಿಮಾವನ್ನ ನನಗೆ ನೀಡಲಾಗಿತ್ತು… ಆದ್ರೆ ಶಾರುಖ್ ಖಾನ್ ಸಹ ಕೆಲವು ಉತ್ತಮ ಚಿತ್ರಗಳ ಭಾಗವಾಗಬೇಕು ಎಂಬ ಕಾರಣದಿಂದ ನಾನು ಅದನ್ನು ತೊರೆದಿದ್ದೇನೆ ಎಂದಿದ್ದರು.. ಅವರು ಅದನ್ನ ತಮಾಷೆಯ ರೀತಿಯಲ್ಲಿ ಹೇಳಿದ್ದರಾದ್ರೂ ಕೆಲವರು ಅವರ ಹೇಳಿಕೆಯನ್ನ ಗ ವಿರೋಧಿಸಿದ್ದೂ ಉಂಟು..