Lalsingh chadda : ಅಭಿಮಾನಿಗಳ ಬಳಿ ಕ್ಷಮೆಯಾಚಿಸಿದ ‘ಅಮಿರ್ ಖಾನ್’
ಬಾಲಿವುಡ್ ನ ಬಹುನಿರೀಕ್ಷಿತ ಸಿನಿಮಾಗಳ ಪೈಕಿ ಒಂದಾಗಿರೋ ಲಾಲ್ ಸಿಂಗ್ ಚಡ್ಡಾ ಸಿನಿಮಾದ ಪ್ರಚಾರದಲ್ಲಿ ಅಮಿರ್ ಖಾನ್ ಬ್ಯುಸಿಯಾಗಿದ್ದಾರೆ.. ಸಿನಿಮಾಗೆ ಇದೀಗ ಸೋಲಿನ ಆತಂಕ ಎದುರಾಗಿದೆ..
ಆಗಸ್ಟ್ 11 ಅಂದ್ರೆ ನಾಳೆ ಸಿನಿಮಾ ವಿಶ್ವಾದ್ಯಂತ ರಿಲೀಸ್ ಆಗಲಿದೆ… ಸಿನಿಮಾ ಅಡ್ವಾನ್ಸ್ ಬುಕಿಂಗ್ ನಲ್ಲೂ ಯಶಸ್ಸು ಕಂಡಿದೆ.. ಆದ್ರೆ ಸಿನಿಮಾ ಬಹಿಷ್ಕಾರಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಕೂಗು ಇದೆ.. #Boycott Bollywood , #Boycott Amir khan , #Boycott Lal singh chadda ಸಿಕ್ಕಾಪಟ್ಟೆ ಟ್ರೆಂಡ್ ಆಗ್ತಿದೆ..
ಲಾಲ್ ಸಿಂಗ್ ಚಡ್ಡಾ ಸಿನಿಮಾವನ್ನು ಬಹಿಷ್ಕರಿಸಬೇಕು ಎನ್ನುವ ಕೂಗು ಮತ್ತೆ ಕೇಳಿ ಬರುತ್ತಿದೆ. ಈ ಹಿಂದೆ ಅಮೀರ್ ಖಾನ್ ಮತ್ತು ಕರೀನಾ ಕಪೂರ್ ಕೊಟ್ಟ ಹೇಳಿಕೆಗಳು ಸಿನಿಮಾಗೆ ಕಂಟಕವಾಗುವಂತೆ ಕಾಣ್ತಿವೆ..
ಅಮೀರ್ ಖಾನ್ ಈ ಹಿಂದೆ ಸಂದರ್ಶನವೊಂದರಲ್ಲಿ ಶಿವಲಿಂಗಕ್ಕೆ ಹಾಲಿನ ಅಭಿಷೇಕ ಮಾಡುವುದು ವ್ಯರ್ಥ. ಈ ಆಚರಣೆ ಅಪ್ರಯೋಜಕ. ಇದರ ಬದಲು ಬಡ ಮಕ್ಕಳಿಗೆ ಅದೇ ದುಡ್ಡಿನಲ್ಲಿ ಸಹಾಯ ಮಾಡಬಹುದು ಎಂದಿದ್ದರು. ಇದೇ ಹೇಳಿಕೆ ಈಗ ಮತ್ತೆ ವೈರಲ್ ಆಗ್ತಿದೆ.. ಅಷ್ಟೇ ಅಲ್ಲ ಲಾಲ್ ಸಿಂಗ್ ಚಡ್ಡಾ ಸಿನಿಮಾವನ್ನು ನೋಡುವುದು ವ್ಯರ್ಥ. ಈ ಸಿನಿಮಾದ ನೋಡುವುದರ ಬದಲಾಗಿ ಅದೇ ದುಡ್ಡಿನಲ್ಲಿ ಬಡ ಮಕ್ಕಳಿಗೆ ಸಹಾಯ ಮಾಡಬಹುದು ಎನ್ನುವ ಅಭಿಪ್ರಾಯ ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತವಾಗುತ್ತಿದೆ.
ಆದ್ರೆ ಈ ಬಗ್ಗೆ ಇತ್ತೀಚೆಗೆ ಮಾತನಾಡ್ತಾ ಅಮಿರ್ ಖಾನ್ ಅವರು ನಾನು ಭಾರತವನ್ನ ದ್ವೇಷಿಸುವಂತೆ ಬಿಂಬಿಸಲಾಗ್ತಿದೆ.. ಇದು ಸುಳ್ಳು ನಾನೂ ಸಹ ಭಾರತೀಯನೇ ದಯಮಾಡಿ ಸಿನಿಮಾ ವೀಕ್ಷಿಸಿ ಎಂದು ಮನವಿ ಮಾಡಿಕೊಂಡಿದ್ದರು..
ಈ ಸಿನಿಮಾ ಬಹಿಷ್ಕಾರದ ಅಭಿಯಾನವನ್ನ ನಟಿ ಕಂಗನಾ , ವಿಜಯಶಾಂತಿ ಸೇರಿದಂತೆ ಅನೇಕರು ಬೆಂಬಲಿಸಿದ್ದರು.. ಇದೀಗ ಅಮಿರ್ ಖಾನ್ ಸಿನಿಮಾ ರಿಲೀಸ್ ಬೆನ್ನಲ್ಲೇ ಅಭಿಮಾನಿಗಳ ಬಳಿ ಕ್ಷಮೆಯಾಚಿಸಿದ್ದಾರೆ..
ಅಮಿರ್ ಖಾನ್ ನಾನು ಯಾರಿಗಾದರೂ ನೋವುಂಟು ಮಾಡಿದ್ದರೆ, ನಾನು ವಿಷಾದಿಸುತ್ತೇನೆ, ನಾನು ಯಾರನ್ನೂ ನೋಯಿಸಲು ಬಯಸುವುದಿಲ್ಲ, ಯಾರಾದರೂ ಸಿನಿಮಾ ವೀಕ್ಷಿಸಲು ಬಯಸದಿದ್ದರೆ, ನಾನು ಅವರ ಭಾವನೆಯನ್ನು ಗೌರವಿಸುತ್ತೇನೆ ಎಂದು ಹೇಳಿದ್ದಾರೆ.