Nayanatara : ಮದುವೆಯಾಗಿ ಕೆಲವೇ ದಿನಗಳಲ್ಲಿ ಆಸ್ಪತ್ರೆಗೆ ದಾಖಲಾದ ಲೇಡಿ ಸೂಪರ್ ಸ್ಟಾರ್
ಲೇಡಿ ಸೂಪರ್ ಸ್ಟಾರ್ ನಯನತಾರ ಹಾಗೂ ನಿರ್ದೇಶ ವಿಘ್ನೇಶ್ ಅದ್ಧೂರಿಯಾಗಿ ಮದುವೆಯಾಗಿದ್ದರು.. ಇಬ್ಬರೂ ಮದುವೆಯಾಗಿ ಬಹಳ ದಿನಗಳೇನೂ ಆಗಿಲ್ಲ.. ಅಷ್ಟ್ರಲ್ಲೇ ಪತಿ ಮಾಡಿದ ಒಂದು ಎಡವಟ್ಟಿನಿಂದ ನಯನತಾರಾ ಆಸ್ಪತ್ರೆಗೆ ದಾಖಲಾಗಿದ್ದಾರೆ..
ನಯನತಾರಾಗಾಗಿ ಪತಿ ವಿಘ್ನೇಶ್ ಶಿವನ್ ಪ್ರೀತಿಯಿಂದ ಅಡುಗೆ ಮಾಡಿದ್ದಾರೆ. ಇದನ್ನು ತಿಂದ ನಯನತಾರಾ ಆರೋಗ್ಯ ಹದಗೆಟ್ಟಿದೆ ಎನ್ನಲಾಗ್ತಿದೆ. ನಂತರ ಅವರನ್ನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.. ಕೆಲ ಗಂಟೆಗಳು ಆಸ್ಪತ್ರೆಯಲ್ಲಿದ್ದ ನಯನತಾರಾ ಆ ನಂತರ ಡಿಶ್ಚಾರ್ಜ್ ಆಗಿದ್ದಾರೆ ಎನ್ನಲಾಗ್ತಿದೆ..