ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಿಧನರಾಗಿ ಹಲವು ತಿಂಗಳು ಕಳೆದಿವೆ. ಆದರೂ ಅವರ ಮೇಲೆ ಜನರು ಇಟ್ಟ ಅಭಿಮಾನ ಒಂದಿಂಚು ಕಮ್ಮಿ ಆಗುವುದಿಲ್ಲ. ಅದಕ್ಕೆ ಸಾಕ್ಷಿ ಎಂಬಂತೆ ಅನೇಕ ಉದಾಹರಣೆಗಳು ಸಿಗುತ್ತಲೇ ಇವೆ.
ರಕ್ಷಾ ಬಂಧನ ಹಬ್ಬದ ಸಂದರ್ಭದಲ್ಲೂ ಅದು ಮರುಕಳಿಸಿದೆ. ಮಾರುಕಟ್ಟೆಯಲ್ಲಿ ‘ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಫೋಟೋ ಇರುವ ‘ಅಪ್ಪು ರಾಖಿ’ ಲಭ್ಯವಾಗುತ್ತಿದೆ. ಅಪ್ಪು ಇರುವ ರಾಖಿ ಖರೀದಿಸಲು ಜನರು ಆಸಕ್ತಿ ತೋರಿಸುತ್ತಿದ್ದಾರೆ.
ಆಗಸ್ಟ್ 11ರಂದು ರಕ್ಷಾ ಬಂಧನ ಹಬ್ಬವನ್ನು ಆಚರಿಸಲಾಗುತ್ತಿದೆ. ಸಹೋದರ-ಸಹೋದರಿಯರ ನಡುವಿನ ಈ ಬಾಂಧವ್ಯ ಸಾರುವ ಹಬ್ಬದಲ್ಲಿ ನಾನ ವಿಧವ ವಿವಿಧ ಶೈಲಿಯ ರಾಖಿಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಅವುಗಳ ಜೊತೆಗೆ ಈ ಬಾರಿ ‘ಅಪ್ಪು ರಾಖಿ’ ಕೂಡ ಜನರನ್ನು ಸೆಳೆಯುತ್ತಿದೆ.
ಕೊಪ್ಪಳ ಸೇರಿದಂತೆ ರಾಜ್ಯದ ಅನೇಕ ಕಡೆಗಳಲ್ಲಿ ಪುನೀತ್ ರಾಜ್ಕುಮಾರ್ ಫೋಟೋ ಇರುವ ರಾಖಿಗಳನ್ನ ಮಾರಾಟ ಮಾಡಲಾಗುತ್ತಿದೆ. ಅಪ್ಪು ಮೇಲಿನ ಅಭಿಮಾನಕ್ಕೆ ಜನರು ಇವುಗಳನ್ನು ಕೊಂಡುಕೊಳ್ಳುತ್ತಿದ್ದಾರೆ. ಆ ಮೂಲಕ ರಕ್ಷಾ ಬಂಧನದಲ್ಲೂ ‘ಪವರ್ ಸ್ಟಾರ್’ ಅಭಿಮಾನ ಎದ್ದು ಕಾಣುತ್ತಿದೆ…