ಒಂದು ಮೊಟ್ಟೆಯ ಕಥೆ , ಗರುಡ ಗಮನ ವೃಷಧ ವಾಹನ ಸಿನಿಮಾಗಳ ಮೂಲಕ ನಟ ಹಾಗೂ ನಿರ್ದೇಶಕನಾಗಿ ಯಶಸ್ಸು ಕಂಡ ರಾಜ್ ಬಿ ಶೆಟ್ಟಿ ಅವರು ಇದೀಗ ಸ್ಯಾಂಡಲ್ ವುಡ್ ನ ಮೋಹಕ ತಾರೆಗೆ ಆಕ್ಷನ್ ಕಟ್ ಹೇಳಲಿದ್ಧಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಭಾರೀ ಸದ್ದು ಮಾಡ್ತಿದೆ..
ಸ್ಯಾಂಡಲ್ ವುಡ್ ನ ಮೋಹಕ ತಾರೆ ರಮ್ಯಾ ಸಿನಿಮಾರಂಗದಿಂದ ದೂರಾಗಿ ಸುಮಾರು ವರ್ಷಗಳೇ ಕಳೆದ್ರೂ ಈಗಲೂ ಅವರ ಕ್ರೇಜ್ ಕಡಿಮೆಯಾಗಿಲ್ಲ.. ಅವರ ಕಮ್ ಬ್ಯಾಕ್ ಗಾಘಿ ಅಭಿಮಾನಿಗಳು ಕಾಯ್ತಿದ್ದಾರೆ.. ರಮ್ಯಾ ಸಹ ಮತ್ತೆ ಸ್ಯಾಂಡಲ್ ವುಡ್ ಗೆ ಶೀಘ್ರವೇ ಕಮ್ ಬ್ಯಾಕ್ ಮಾಡಲಿದ್ದಾರೆ ಎನ್ನಲಾಗ್ತಿದೆ…
ಅವರ ಕಮ್ ಬ್ಯಾಕ್ ಸಿನಿಮಾಗೆ ರಾಜ್ ಬಿ ಶೆಟ್ಟಿ ಆಕ್ಷನ್ ಕಟ್ ಹೇಳಲಿದ್ದಾರೆ ಎನ್ನಲಾಗ್ತಿದೆ..
ನಿರ್ದೇಶಕ ರಾಜ್ ಬಿ ಶೆಟ್ಟಿ ನಿರ್ದೇಶದ ಸಿನಿಮಾಗೆ ರಮ್ಯಾ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗ್ತಿದೆ. ಆದ್ರೆ ಅಧಿಕೃತವಾಗಿ ಮಾಹಿತಿ ಹೊರಬೀಳುವ ವರೆಗೂ ಇದು ಕೇವಲ ವದಂತಿಯಾಗಿರಲಿದೆ ಅಷ್ಟೇ.. ಆದ್ರೂ ಅಭಿಮಾನಿಗಳು ಇವರಿಬ್ಬರ ಕಾಂಬಿನೇಷನ್ ನಲ್ಲಿ ಸಿನಿಮಾ ನೋಡಲು ಕಾತರರಾಗಿದ್ದಾರೆ..
ಅಂದ್ಹಾಗೆ ರಾಜಕೀಯ ಸಿನಿಮಾರಂಗ ರಡರಿಂದಲೂ ರಮ್ಯಾ ದೂರವಿದ್ರೂ ಕೂಡ ಸೋಷಿಯಲ್ ಮೀಡಿಯಾದಲ್ಲಿ ನಟಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದು , ಅಭಿಮಾನಿಗಳ ಜೊತೆಗೆ ಸದಾ ಕನೆಕ್ಟ್ ಆಗಿರುತ್ತಾರೆ..