Adah sharma : ಆಟೋ ಚಾಲಕರಿಗೆ ರಾಖಿ ಕಟ್ಟಿದ ಅದಾ ಶರ್ಮಾ..!!
ಸಹೋದರ ಸಹೋದರಿಯರ ಹಬ್ಬ ರಕ್ಷಾಬಂಧನವನ್ನು ಇಂದು (ಆಗಸ್ಟ್ 11) ದೇಶಾದ್ಯಂತ ಸಡಗರದಿಂದ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ, ಸಹೋದರಿಯರು ತಮ್ಮ ಸಹೋದರರಿಗೆ ರಾಖಿ ಕಟ್ಟುವ ಮೂಲಕ ಅವರನ್ನು ರಕ್ಷಿಸುವ ಭರವಸೆಯನ್ನು ತೆಗೆದುಕೊಳ್ಳುತ್ತಾರೆ. ಈ ವಿಶೇಷ ದಿನದಂದು ಬಾಲಿವುಡ್ ನಟಿ ಅದಾ ಶರ್ಮಾ ಕೂಡ ಗಮನ ಸೆಳೆದಿದ್ದಾರೆ.
ನಟಿ ಅದಾ ಶರ್ಮಾ ರಸ್ತೆಯಲ್ಲಿದ್ದ ಜನರಿಗೆ ರಾಖಿ ಕಟ್ಟಿ ಕಟ್ಟುವ ಮೂಲಕ ಹಬ್ಬ ಆಚರಿಸಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ನಟಿ ಮಾಡಿರುವ ಪೋಸ್ಟ್ನಲ್ಲಿ ಅದಾ ಶರ್ಮಾ ಆಟೋ ಚಾಲಕರಿಗೆ ರಾಖಿ ಕಟ್ಟುತ್ತಿರುವ ಹಲವು ಪೋಟೋ ಮತ್ತು ವಿಡಿಯೋಗನ್ನ ನೋಡಬಹುದು. ಅದಾ ಆಟೋ ಚಾಲಕರಿಗೆ ರಾಖಿ ಕಟ್ಟಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ವೀಡಿಯೋದಲ್ಲಿ ಅದಾ ಅವರು, ‘ಇಂತಹ ಜನರಿಂದಾಗಿಯೇ ನಾವು ಮುಂಬೈನ ಬೀದಿಗಳಲ್ಲಿ ಸುರಕ್ಷಿತವಾಗಿ ಪ್ರಯಾಣಿಸಲು ಸಾಧ್ಯವಾಗುತ್ತಿದೆ. ನಾವು ತುಂಬಾ ಅದೃಷ್ಟವಂತರು, ಇದಕ್ಕಾಗಿ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.
ಅದಾ ಅವರ ಈ ವಿಡಿಯೋ ವೈರಲ್ ಆದ ನಂತರ ಅಭಿಮಾನಿಗಳು ಕೂಡ ಮೆಚ್ಚುಗೆಯಿಂದ ಪ್ರತಿಕ್ರಿಯಿಸುತ್ತಿದ್ದಾರೆ. ನಟಿಯ ಈ ನಡೆಯನ್ನ ಕೊಂಡಾಡುತ್ತಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಬಳಕೆದಾರರು ‘ಅದಾ ಕಿ ಅದಾ ಅನನ್ಯವಾಗಿದೆ’ ಎಂದು ಕಾಮೆಂಟ್ ಮಾಡಿದ್ದಾರೆ. ಅದಾ ಡೌನ್ ಟು ಅರ್ಥ ಮಹಿಳೆ ಎಂದು ಹೃದಯ ಎಮೋಜಿಗಳನ್ನ ಹಂಚಿಕೊಳ್ಳುತ್ತಿದ್ದಾರೆ.