BigBoss Kannada Ott : ಮೊದಲ ಕ್ಯಾಪ್ಟನ್ ಅರ್ಜುನ್
Big Boss Ott ಸೀಸನ್ ಒಂದರಲ್ಲಿ ಸಾಕಷ್ಟು ಹೊಸತನ ವಿಶೇಷತೆಗಳಿದೆ.. ಮನೆಗೆ ಭಿನ್ನ ಭಿನ್ನ ಅಭಿಪ್ರಾಯ ಹೊಂದಿರುವ ವ್ಯಕ್ತಿಗಳ ಎಂಟ್ರಿಯಾಗಿದೆ..
ಬಿಗ್ ಬಾಸ್ ನಲ್ಲಿ ಬಾರಿ ಸಿನಿಮಾ ನಟರು , ಕಾಂಟ್ರವರ್ಸಿ ಮಾಡಿಕೊಂಡಿದ್ದರು , ಸೋಷಿಯಲ್ ಮೀಡಿಯಾ ಸ್ಟಾರ್ ಗಳು , ಪತ್ರಕರ್ತರು , ಉದ್ಯಮಿಗಳು ಎಲ್ಲರೂ ಇದ್ದಾರೆ..
ಮೊದಲನೇ ವಾರವೇ ಎಲಿಮಿನೇಷನ್ ಗೆ 8 ಮಂದಿ ನಾಮಿನೇಟ್ ಆಗಿದ್ದಾರೆ.. ಇದೀಗ ಮನೆಯಲ್ಲಿ ಕ್ಯಾಪ್ಟನ್ಸಿ ಆಯ್ಕೆ ಪ್ರಕ್ರಿಯೆಯೂ ನಡೆದಿದೆ..
ಕ್ಯಾಪ್ಟನ್ಸಿ ಆಯ್ಕೆ ಪ್ರಕ್ರಿಯೆ ನಡೆದಿದೆ.. ಬಿಗ್ ಬಾಸ್ ಕೊಟ್ಟಿದ್ದ ಕಠಿಣ ಟಾಸ್ಕ್ ನಲ್ಲಿ ಎಲ್ಲರೂ ಶಕ್ತಿ ಮೀರಿ ಪೈಪೋಟಿ ನೀಡಿದ್ದಾರೆ.. ಕ್ಯಾಪ್ಟನ್ ಆಗಲೇಬೇಕೆಂಬ ಜಿದ್ದಿಗೆ ಎಲ್ಲರೂ ಬಿದ್ದಿದ್ದರು.. ಈ ಟಾಸ್ಕ್ ನಲ್ಲಿ ಗೆದ್ದ ತಂಡದಲ್ಲಿ ಹೆಚ್ಚು ವೋಟ್ ಪಡೆದವರಿಗೆ ಕ್ಯಾಪ್ಟನ್ಸಿ ಟಾಸ್ಕ್ ಗಾಗಿ ಫೈಟ್ ಮಾಡುವ ಅರ್ಹತೆ ಇತ್ತು.. ಕ್ಯಾಪ್ಟನ್ಸಿ ಟಾಸ್ಕ್ ನಲ್ಲಿ ಹೆಚ್ಚು ಜನರು ಅರ್ಜುನ್ ಮತ್ತು , ಚೈತ್ರಾಗೆ ಓಟ್ ಮಾಡಿದ್ದರು.. ಇಬ್ಬರಿಗೂ ತಲಾ 11 – 11 ಓಟ್ ಗಳು ಸಿಕ್ಕಿತ್ತು..
ಮತ್ತೊಂದೆಡೆ ನಂದಿನಿ ಹಾಗೂ ಸೋಮಣ್ಣಗೆ ತಲಾ 7 -7 ವೋಟ್ ಗಳು ಸಿಕ್ಕಿತ್ತು..
https://www.youtube.com/watch?v=VG_EnuEL5Cc
ಕ್ಯಾಪ್ಟನ್ ರೇಸ್ ನಲ್ಲಿ ಅರ್ಜುನ್ ಹಾಗೂ ಚೈತ್ರ ಇದ್ದಾರು.. ಇಬ್ಬರ ಪೈಕಿ ಯಾರು ಕ್ಯಾಪ್ಟನ್ ಆಗಲಿದ್ದಾರೆ ಅನ್ನೋ ಕುತೂಹಲ ಇಲ್ಲರಲ್ಲೂ ಇತ್ತು.. ಆದ್ರೆ ಟಾಸ್ಕ್ ನಲ್ಲಿ ಅರ್ಜುನ್ ವಿನ್ ಆಗಿದ್ದು , ಬಿಗ್ ಬಾಸ್ ಒಟಿಟಿ ಕನ್ನಡ ಸೀಸನ್ ಒಂದರ ಮೊದಲ ಕ್ಯಾಪ್ಟನ್ ಆಗಿ ಹೊರಹೊಮ್ಮಿದ್ದಾರೆ..
ಇವರು ಯಾವ ರೀತಿಯಾಗಿ ಕ್ಯಾಪ್ಟನ್ಸಿ ನಿಭಾಯಿಸುತ್ತಾರೆ ಅನ್ನೋದನ್ನ ಕಾದುನೋಡ್ಬೇಕಿದೆ..