Bigboss Kannada Ott ಸೀಸನ್ 1 ಸಾಕಷ್ಟು ಹೊಸತನದೊಂದಿಗೆ ಪ್ರಸಾರವಾಗ್ತಿದೆ.. 16 ಕಂಟೆಸ್ಟೆಂಟ್ ಗಳು ಮನೆ ಪ್ರವೇಶ ಮಾಡಿದ್ದಾರೆ.. ಸಿನಿಮಾ ನಟರು , ಕಾಂಟ್ರವರ್ಸಿ ಮಾಡಿಕೊಂಡಿದ್ದರು , ಸೋಷಿಯಲ್ ಮೀಡಿಯಾ ಸ್ಟಾರ್ ಗಳು , ಪತ್ರಕರ್ತರು , ಉದ್ಯಮಿಗಳು ಲ್ಲರೂ ಇದ್ದಾರೆ.. ಭಿನ್ನ ಭಿನ್ನ ವ್ಯಕ್ತಿತ್ವದವರಿದ್ದಾರೆ.. ಮೊದಲನೇ ವಾರದಲ್ಲಿ ಮನೆಯಲ್ಲಿ ಈಗಾಘಲೇ ಸಾಕಷ್ಟು ವಿಚಾರಗಳು ಗಮನ ಸೆಳೆದಿದೆ.. ಸ್ಪರ್ಧಿಗಳು ನಡುವೆ ಈಗಾಗಲೇ ಅಸಮಾಧಾನ ಮೂಡಿದೆ.. ಮತ್ತೊಂದಡೆ 8 ಮಂದಿ ನಾಮಿನೇಟ್ ಆಗಿದ್ದಾರೆ..
ಅಂದ್ಹಾಗೆ ಪ್ರತಿ ಬಾರಿ ಬಿಗ್ ಬಾಸ್ ನಲ್ಲಿ ಯಾವುದಾದರೂ ಒಂದು ಲವ್ ಗಾಸಿಪ್ ಹರಿದಾಡುತ್ತಲೇ ಇರುತ್ತೆ.. ಇದೇ ಬಿಗ್ ಬಾಸ್ ನಿಂದ ಅನೇಕರು ಪ್ರೀತಿಯ ಬಂಧನದಲ್ಲಿ ಒಂದಾಗಿ ಅಷ್ಟೇ ಬೇಗ ಮುಗಿದ್ದಿದ್ದೂ ಇದೆ, ಮದುವೆ ಹಂತಕ್ಕೆ ತಲುಪಿದ ದಾಹರಣೆಯೂ ಇದೆ.. ಬಿಗ್ ಬಾಸ್ ಸೀಸನ್ 8 ರಲ್ಲಿ ಹೈಲೇಟ್ ಆಗಿದ್ದು ಅಂದ್ರೆ ಅರವಿಂದ್ ದಿವ್ಯ ಉರುಡುಗ ಜೋಡಿ.. ಮನೆಯಿಂದ ಹೊರ ಬಂದ ನಂತರವೂ ಈ ಜೋಡಿ ಈಗಲೂ ಒಟ್ಟಿಗೆ ಕಾಣಿಸಿಕೊಳ್ತಿರುತ್ತಾರೆ..
ಇದೀಗ ಬಿಗ್ ಬಾಸ್ ಒಟಿಟಿಯಲ್ಲಿಯೂ ಒಂದು ಹೊಸ ಲವ್ ಕಹಾನಿ ಶುರುವಾಗುವ ಎಲ್ಲಾ ಲಕ್ಷಣಗಳು ಕಾಣ್ತಿದೆ.. ರಾಕೇಶ್ ಹಾಗೂ ಸ್ಫೂರ್ತಿ ನಡುವೆ ಕೊಂಚ ಆತ್ಮೀಯತೆ ಬೆಳೆಯುತ್ತಿರುವಂತೆ ಕಾಣುತ್ತಿದೆ..
ಇತ್ತೀಚೆಗೆ ರಾಕಿ ಸ್ಪೂರ್ತಿಗೆ ಪ್ರೀತಿಯಿಂದ ಚಪಾತಿ ತಿನ್ನಿಸಿದ್ದರು.. ಸ್ಪೂರ್ತಿ ತಮ್ಮ ಜೋಡಿ ಹೇಗಿದೆ ಅಂತ ಸಹ ಗುರೂಜಿ ಬಳಿ ಕೇಳಿದ್ದರು.. ಅಲ್ಲದೇ ಸ್ಪೂರ್ತಿ ರಾಕಿ ಕೈ ಹಿಡಿದು ಭವಿಷ್ಯ ಹೇಳುತ್ತಿರುವಾಗ ನಿಮಗೆ ಯಾರ ಮೇಲಾದರೂ ಲವ್ ಆದರೆ ಹೇಳ್ತೀರಾ ಎಂದು ಸ್ಫೂರ್ತಿಗೆ ರಾಕಿ ಪ್ರಶ್ನೆ ಮಾಡಿದ್ದಾರೆ..
ಅದಕ್ಕೆ ಸ್ಪೂರ್ತಿ ಉತ್ತರಿಸಿದ್ದು ನಾನಾಗಿ ಯಾರಿಗೂ ಪ್ರಪೋಸ್ ಮಾಡಲ್ಲ. ಹುಡುಗನೇ ನನ್ನ ಬಳಿ ಬಂದು ಪ್ರೀತಿ ಹೇಳಿಕೊಳ್ಳಬೇಕು. ಆ ರೀತಿ ಮಾಡ್ತೀನಿ ಎಂದಿದ್ಧಾರೆ..
ಆಗ ರಾಕಿ ನೀವು ಟಿಪಿಕಲ್ ಹುಡುಗಿ ತರ ಆಡ್ತೀರಲ್ಲ. ಲವ್ ಆದ್ರೆ ಲವ್ ಆಗಿದೆ ಎಂದು ಹೇಳಿಕೊಳ್ಳಬೇಕು. ಅಟ್ಲೀಸ್ಟ್ ಇಷ್ಟ ಇದೆ ಎಂದ್ರೆ ಇಷ್ಟ ಇದೆ ಅಂತ ಹೇಳಿ ಎಂದರು. ಇಲ್ಲಿ ಯಾರೂ ಇಷ್ಟ ಆಗಿಲ್ಲ. ಮನೆ ಹೊರಗೆ ಹೋಗಿ ಯಾರಾದರೂ ಇಷ್ಟ ಆದರೆ, ಇಷ್ಟ ಆಗಿದೆ ಅಂತ ಹೇಳ್ತೀನಿ ಎಂದಿದ್ದಾರೆ..
ಹೊರಗಡೆ ಪ್ರೇಕ್ಷಕರು ಮಾತ್ರ ಬ್ಬರ ನಡುವೆ ಏನೋ ಸಮ್ ಥಿಂಗ್ ಸಮ್ ಥಿಂಗ್ ನಡೆಯುತ್ತಿದೆ ಅಂತ ಮಾನಾಡಿಕೊಳ್ತಿದ್ದಾರೆ.. ಇನ್ನೂ ಕೆಲವರು ಪ್ರತಿ ಬಾರಿ ಬಿಗ್ ಬಾಸ್ ನಲ್ಲಿ ಲವ್ ಅನ್ನೋದು ಗಿಮಿಕ್ ಅಷ್ಟೇ ಪ್ರೇಕ್ಷಕರ ಗಮನ ಸೆಳೆಯೋಕೆ ಎಂದು ನೆಗೆಟಿವ್ ಆಗಿಯೂ ಮಾತನಾಡ್ತಿರುವುದು ಉಂಟು..