Yash – Prabhas : ‘ಸಲಾರ್’ ನಲ್ಲಿ ರಾಖಿ ಭಾಯ್ ನಟನೆ..!!!
ಪ್ರಭಾಸ್… ಯಶ್.. ಇಬ್ಬರೂ ನ್ಯಾಷನಲ್ ಸ್ಟಾರ್ ಗಳು… ಸೌತ್ ಇಂಡಿಯನ್ ಸ್ಟಾರ್ ಗಳು… ಪ್ಯಾನ್ ಇಂಡಿಯನ್ ಲೆವೆಲ್ ನಲ್ಲಿ ಸೌಂಡ್ ಮಾಡಿರುವ ಸ್ಟಾರ್ ಗಳು.. ಬಾಹುಬಲಿ … KGF ಅನ್ನೋ ಬಿರುಗಾಳಿ ಎಬ್ಬಿಸಿ ಬಾಲಿವುಡ್ ಮಂದಿಗೆ ಶಾಕ್ ಕೊಟ್ಟ ನಟರು.. ಇಬ್ಬರ ನಡುವೆ ಸಾಕಷ್ಟು ಸಾಮ್ಯತೆ ಇದೆ..
ಹಾಗೆಯೇ ಯಶ್ ಅವರನ್ನ ಡಿಯನ್ ಸ್ಟಾರ್ ಮಾಡಿರುವ ಪ್ರಶಾಂತ್ ನೀಲ್ ಇದೀಗ ಪ್ರಭಾಸ್ ಸಲಾರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.. ಇವೆರೆಡೂ ಸಿನಿಮಾಗಳಿಗೂ ಹೊಂಬಾಳೆ ಫಿಲಮ್ಸ್ ಬಂಡವಾಳ ಹೂಡಿರುವುದು ಕೂಡ ಗೊತ್ತಿದೆ.. KGF ಹವಾ ಎಬ್ಬಿಸಾಗಿದೆ.. ಈಗ ಸಲಾರ್ ಸರದಿ..
ಅಂದ್ಹಾಗೆ ಸಲಾರ್ ಸಿನಿಮಾದ ಬಗ್ಗೆ ಹೀಗೊಂದು ಅಪ್ ಡೇಟ್ ಕೇವಲ ಸ್ಯಾಂಡಲ್ ವುಡ್ , ಟಾಲಿವುಡ್ ಅಷ್ಟೇ ಅಲ್ಲ ಇಡೀ ಇಂಡಿಯನ್ ಸಿನಿಮಾ ಇಂಡಸ್ಟ್ರಿಯಲ್ಲಿ ಸಂಚಲನ ಸೃಷ್ಟಿ ಮಾಡಿದೆ.. ಅಂದ್ಹಾಗೆ ಪ್ರಭಾಸ್ ಅವರ ಸಲಾರ್ ಸಿನಿಮಾದಲ್ಲಿ ರಾಕಿ ಭಾಯ್ ಎಂಟ್ರಿಯಾಗಲಿದ್ಯಂತೆ..
ಹೌದು..! ಸಲಾರ್ ಸಿನಿಮಾದಲ್ಲಿ ನಟ ಯಶ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಸಲಾರ್ ಸಿನಿಮಾದಲ್ಲಿ ಯಶ್ ಅತಿಥಿ ಪಾತ್ರದಲ್ಲಿ ಯಶ್ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಸಲಾರ್ ಸಿನಿಮಾದಲ್ಲಿ ಯಶ್ ಪಾತ್ರ 10 ನಿಮಿಷಗಳ ಕಾಲ ಇರಲಿದೆ ಎನ್ನಲಾಗ್ತಿದೆ. ಈ ಪಾತ್ರದ ಚಿತ್ರೀಕರಣ ಸದ್ಯದಲ್ಲಿಯೇ ಆರಂಭವಾಗಲಿದೆ ಎನ್ನಲಾಗುತ್ತಿದೆ. ಇದೇ ಆಗಸ್ಟ್ ತಿಂಗಳ ಕೊನೆಯ ವಾರದಲ್ಲಿ ನಟ ಯಶ್ ಸಲಾರ್ ಶೂಟಿಂಗ್ ಆರಂಭಿಸಲಿದ್ದಾರೆಂಬ ಗಾಳಿ ಸುದ್ದಿ ತೆಲುಗು ಸಿನಿಮಾ ನಗರ್ ನಲ್ಲಿ ಭಾರೀ ಸೌಂಡ್ ಮಾಡ್ತಿದೆ…