BigBoss Ott : ಸ್ಪೂರ್ತಿ – ಸೋನು ಗೌಡ ನಡುವೆ ಗಲಾಟೆ , ಗಳಗಳನೆ ಅತ್ತ ಸೋನು..!!
Big Boss Ott ಸೀಸನ್ ಒಂದರಲ್ಲಿ ಸಾಕಷ್ಟು ಹೊಸತನ ವಿಶೇಷತೆಗಳಿದೆ.. ಮನೆಗೆ ಭಿನ್ನ ಭಿನ್ನ ಅಭಿಪ್ರಾಯ ಹೊಂದಿರುವ ವ್ಯಕ್ತಿಗಳ ಎಂಟ್ರಿಯಾಗಿದೆ..
ಬಿಗ್ ಬಾಸ್ ನಲ್ಲಿ ಬಾರಿ ಸಿನಿಮಾ ನಟರು , ಕಾಂಟ್ರವರ್ಸಿ ಮಾಡಿಕೊಂಡಿದ್ದರು , ಸೋಷಿಯಲ್ ಮೀಡಿಯಾ ಸ್ಟಾರ್ ಗಳು , ಪತ್ರಕರ್ತರು , ಉದ್ಯಮಿಗಳು ಎಲ್ಲರೂ ಇದ್ದಾರೆ..
ಈ ವಾರದ ಹೈಲೇಟ್ ಅಂದ್ರೆ ಅದು ಸೋಷಿಯಲ್ ಮೀಡಿಯಾ ಸ್ಟಾರ್ ಕಾಂಟ್ರವರ್ಸಿಯಿಂದಲೇ ಫೇಮಸ್ ಆಗಿರೋ ಸೋನು ಶ್ರೀನಿವಾಸ್ ಗೌಡ..
ಅಂದ್ಹಾಗೆ ಇತ್ತೀಚೆಗೆ ಸೋನು ಗೌಡ ಸ್ಪೂರ್ತಿಗೆ ಡವ್ ರಾಣಿ ಅಂದ ಬೆನ್ನಲ್ಲೇ ಸ್ಪೂರ್ತಿ ಸೋನು ಮೇಲೆ ಸಿಟ್ಟಾಗಿದ್ದ ವಿಚಾರ ಗೊತ್ತೇ ಇದೆ..
ಇದೀಗ ಮತ್ತೆ ಸೋನು ಮತ್ತು ಸ್ಪೂರ್ತಿ ನಡುವೆ ಗಲಾಟೆ ನಡೆದಿದೆ.. ಹಿಂದೆಗಿಂತ ಕೊಂಚ ದೊಡ್ಡ ಗಲಾಟೆಯೇ ನಡೆದಿದೆ..
ಮೊದಲಿಗೆ ಸೋನು ಗೌಡ ಸ್ಪೂರ್ತಿ ಮೇಲೆ ಎರಗಿದ್ದಾರೆ.. ನೀವು ಸುಮ್ಮನೆ ನಗುತ್ತಿರುವುದು ಸರಿಯಿಲ್ಲ. ಹಿಂದಿನಿಂದ ಹೀಯಾಳಿಸುತ್ತಿರುವುದನ್ನು ನಾನು ನೋಡಿದ್ದೇನೆ ಎಂದು ಹೇಳಿದ್ದಾರೆ.. ಇದೇ ವಿಚಾರವಾಗಿ ಸ್ಪೂರ್ತಿ ಸಹ ಮಾತಿನ ವಾರ್ ಗೆ ಇಳಿದಿದ್ದಾರೆ.. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು , ಇಬ್ಬರನ್ನ ಸಮಾಧಾನ ಮಾಡಲು ರಾಕೇಶ್ ಪ್ರಯತ್ನಿಸಿದ್ದಾರೆ..
ಸೋನು ಆರೋಪಕ್ಕೆ ಕ್ಲಾರಿಟಿ ಕೊಟ್ಟಿರುವ ಸ್ಪೂರ್ತಿ ನೀವು ತಪ್ಪಾಗಿ ಅರ್ಥ ಮಾಡಿಕೊಂಡಿದ್ದೀರಾ.. ನಾನು ಯಾರನ್ನೂ ಹೀಯಾಳಿಸಿಲ್ಲ.. ನಾವಿಬ್ಬರು ತಮಾಷೆ ಮಾಡಿಕೊಂಡಿದ್ದನ್ನ ನೀನು ತಪ್ಪು ತಿಳಿದುಕೊಂಡಿದ್ದೀಯ , ಅಲ್ದೇ ನಗೋದು ಬಿಡೋದು ನನ್ನ ಎಷ್ಟ ಎಂದು ತರಾಟೆಗೆ ತೆಗೆದುಕೊಂಡಿದ್ಧಾರೆ..
ನಂತರ ಸೋನುಗೆ ಯಾರೂ ಬೆಂಬಲಿಸದೇ ಹೋದಾಗ ಸೋನು ಕಣ್ಣೀರಿಟ್ಟಿದ್ಧಾರೆ.. ಆಗ ರಾಕೇಶ್ ಸೋನು ಗೌಡರನ್ನು ಸಮಾಧಾನಪಡಿಸಲು ಪ್ರಯತ್ನಿಸಿದ್ದು ಬೆಳ್ಳಿಗ್ಗೆನೇ ಮೂಡ್ ಆಫ್ ಆಗ್ಬೇಡ ಎಂದಿದ್ದಾರೆ. ಆಗ ಸೋನು ಸಿಟ್ಟಲ್ಲಿ ನಾನು ಯಾವತ್ತೂ ಮೂಡ್ ಆಫ್ ಆಗಲ್ಲ ಎಂದು ಉತ್ತರಿಸಿದ್ದಾರೆ.
ಒಟ್ಟಿನಲ್ಲಿ ಒಂದೇ ವಾರದಲ್ಲೇ ಬಿಗ್ ಬಾಸ್ ಮನೆಯ ವಾತಾವರಣವೇ ಬದಲಾಗಿಬಿಟ್ಟಿದೆ.. ಒಂದ್ ಕಡೆ ರಾಕೇಶ್ – ಸ್ಪೂರ್ತಿ ನಡುವೆ ಪ್ರೀತಿಯ ಗುಸು ಗುಸು ಶುರುವಾಗ್ತಿದ್ದರೆ , ಇತ್ತ ಕಂಟೆಸ್ಟೆಂಟ್ ಗಳ ನಡುವೆ ಅಸಮಾಧಾನ ಶುರುವಾಗಿದೆ..
ಅಂದ್ಹಾಗೆ ಮೊದಲನೇ ವಾರದ ಕ್ಯಾಪ್ಟನ್ ಆಗಿ ಅರ್ಜುನ್ ಆಯ್ಕೆಯಾಗಿದ್ದಾರೆ..
8 ಮಂದಿ ಮೊದಲನೇ ವಾರವೇ ಎಲಿಮಿನೇಷನ್ ಗೆ ನಾಮಿನೇಟ್ ಆಗಿದ್ದಾರೆ.. ಪೈಕಿ ಸೋನು ಗೌಡ , ರ್ಯವರ್ಧನ್ ಗುರೂಜಿ ಸಹ ದ್ದು ಯಾರ ಮೊದಲನೇ ವಾರವೇ ದೊಡ್ನೆಯಿಂದ ಜಾಗ ಖಾಲಿ ಮಾಡ್ತಾರೆ ಅನ್ನೋದನ್ನ ಕಾದು ನೋಡ್ಬೇಕಿದೆ..