Bigboss Ott Kannada : ದೊಡ್ಮನೆಯಲ್ಲಿ ಟ್ರಯಾಂಗಲ್ ಲವ್ ಸ್ಟೋರಿ..!!
ಬಿಗ್ ಬಾಸ್ ಒಟಿಟಿ ಕನ್ನಡ ಸೀಸನ್ ಆರಂಭವಾಗಿ ಸರಿಯಾಗಿ ಇನ್ನೂ ಒಂದು ವಾರವೂ ಕಳೆದಿಲ್ಲಾ ಆಗಲೇ ಮನೆಯ ಇಡೀ ವಾತಾರವರಣವೇ ಬದಲಾಗಿಬಿಟ್ಟಿದೆ.. ಈಗಾಗಲೇ ಕಂಟೆಸ್ಟೆಂಟ್ ಗಳ ನಡುವೆ ಅಸಮಾಧಾನ ಮೂಡಿದೆ..
ಒಂದೆಡೆ ಸ್ಪೂರ್ತಿ ರಾಕೇಶ್ ನಡುವೆ ಲವ್ ಗಾಸಿಪ್ ಶುರುವಾಗಿದ್ರೆ , ಸ್ಪೂರ್ತಿ ಗೌಡ , ಸೋನು ಗೌಡ ನಡುವೆ ಕೋಲ್ಡ್ ವಾರ್ ಶುರುವಾಗಿದೆ.. ಇಬ್ಬರೂ ಕ್ಷುಲ್ಲಕ ವಿಚಾರಗಳಿಗೆ ಕಿತ್ತಾಡಿಕೊಂಡಿದ್ಧಾರೆ.. ಇದೆಲ್ಲದರ ನಡುವೆ ಇದೀಗ ಮನೆಯಲ್ಲಿ ಟ್ರಯಾಂಗಲ್ ಲವ್ ಸ್ಟೋರಿ ಹುಟ್ಟಿರುವ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಜೋರಿದೆ..
ಸ್ಪೂರ್ತಿ ರಾಕಿ ನಡುವೆ ಸೋನು ಎಂಟ್ರಿಯಾಗಿದ್ದಾರಾ , ಸೋನು ರಾಕಿನ ಲವ್ ಮಾಡ್ತಾ ಇದ್ದಾರಾ ಎಂಬ ಚರ್ಚೆ ಗಳು ನಡೆಯುತ್ತಿವೆ..
ಹೌದು.. ಇತ್ತೀಚೆಗೆ ಭವಿಷ್ಯ ಹೇಳುತ್ತಾ , ರಾಕಿ ಸೋನುಗೆ ಚಪಾತಿ ತಿನಿಸಿದ್ದು ಸಖತ್ ಸೌಂಡ್ ಮಾಡ್ತಿದೆ.. ಇವರಿಬ್ಬರ ಆತ್ಮೀಯತೆಯ ಬಗ್ಗೆ ಗಾಸಿಪ್ ಹರಿದಾಡ್ತಿದೆ.. ಇದೆಲ್ಲದರ ನಡುವೆ ಇದೀಗ ತ್ರಿಕೋನ ಪ್ರೇಮ್ ಕಹಾನಿಯ ಗಾಸಿಪ್ ಹಬ್ಬಿದೆ..
ಸೋನು ಗೌಡ ಹೇಳಿಕೆಯೇ ಇಂತಹ ಗಾಸಿಪ್ ಗೆ ಕಾರಣವಾಗಿದೆ.. ರೂಪೇಶ್ ಜೊತೆ ಮಾತನಾಡುವಾಗ ಸೋನು ಹೀಗೆಂದಿದ್ದಾರೆ.. “ ಅವಳು ರಾಕೇಶ್ ಜೊತೆ ಅಂಟಿಕೊಂಡು ಕೂತಿದ್ದಳು. ಅದಕ್ಕೆ ನಾನು ಹೇಳಿದೆ ಹೇ ಯಾಕೆ ಅವನೊಟ್ಟಿಗೆ ಹಾಗೆ ಕೂರುತ್ತೀಯ ಅವನು ನನ್ನ ಹುಡುಗ ಎಂದು ಹೇಳಿದೆ ಎಂದು ಹೇಳುತ್ತಾರೆ. ಅದಕ್ಕೆ ರೂಪೇಶ್, ನೀನು ಗಂಭೀರವಾಗಿದ್ದೀಯ ಎಂದು ಕೇಳುತ್ತಾರೆ. ಹೌದು ನಾನು ಸೀರಿಯಸ್ ಆಗಿಯೇ ಹೇಳಿದೆ. ನನಗೆ ನನ್ನ ಹುಡುಗನ ಜೊತೆ ಬೇರೆಯವರು ಸಲುಗೆಯಿಂದ ಇರೋದು ಇಷ್ಟವಿಲ್ಲ ಎಂದಿದ್ದಾರೆ” ಇದು ಈಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಹಾಟ್ ಟಾಪಿಕ್ ಆಗಿದೆ..