Sandalwood : ಗಾಳಿಪಟ 2 Vs ರವಿ ಬೋಪಣ್ಣ , ಬಾಕ್ಸ್ ಆಫೀಸ್ ನಲ್ಲಿ ಗೆಲ್ಲೋದ್ಯಾರು..??
ಈ ವಾರ ಸ್ಯಾಂಡಲ್ ವುಡ್ , ಕಾಲಿವುಡ್ , ಮಾಲಿವುಡ್ , ಬಾಲಿವುಡ್ , ಟಾಲಿವುಡ್ ನಲ್ಲಿ ಅನೇಕ ಹೊಸ ಸಿನಿಮಾಗಳು ರಿಲೀಸ್ ಆಗಿದ್ದು , ಒಂದು ಹಂತದಲ್ಲಿ ಎಲ್ಲಾ ಭಾಷೆಗಳ ಸಿನಿಮಾಗಳು ಸಹ ಟಫ್ ಕಾಂಪಿಟೇಷನ್ ಎದುರಿಸುತ್ತಿವೆ..
ಅಂದ್ಹಾಗೆ ಇಂದು ( ಆಗಸ್ಟ್ 12 ) ಸ್ಯಾಂಡಲ್ ವುಡ್ ನ ಬಹುನಿರೀಕ್ಷೆಯ ಯೋಗರಾಜ್ ಭಟ್ ಗಣೇಶ್ ಕಾಂಬಿನೇಷನ್ ನ ‘ಗಾಳಿಪಟ 2’ ಸಿನಿಮಾ ರಿಲೀಸ್ ಆಗಿದೆ..
ಈ ಸಿನಿಮಾಗೆ ಒಳ್ಳೆ ರೆಸ್ಪಾನ್ಸ್ ಸಿಗ್ತಿದೆ.. ಥಿಯೇಟರ್ ಗಳಲ್ಲಿ ಉತ್ತಮ ಓಪನಿಂಗ್ ಪಡೆದುಕೊಂಡಿದೆ.. 2008 ರಲ್ಲಿ ತೆರೆಕಂಡಿದ್ದ ಗಾಳಿಪಟ ಸೂಪರ್ ಸಕ್ಸಸ್ ಕಂಡಿತ್ತು.. ಸಿನಿಮಾದ ಹಾಡುಗಳು ಹಿಟ್ ಆಗಿದ್ದವು..
ಇದೀಗ ಸಿನಿಮಾ ತಂಡ ಅದೇ ಮಾದರಿಯ ಮತ್ತೊಂದು ಸಿನಿಮಾ ಮಾಡಿದೆ.. ಆ ಸಿನಿಮಾದಲ್ಲಿ ಗಣೇಶ್ , ರಾಜೇಶ್ ಕೃಷ್ಣನ್ , ದಿಗಂತ್ ನಟಿಸಿದ್ದರು.. ಈ ಸಿನಿಮಾದಲ್ಲಿ ರಾಜೇಶ್ ಬದಲಾಗಿ ಗಣೀ ದಿಗಂತ್ ಜೊತೆಗೆ ಲೂಸಿಯಾ ಪವನ್ ಕಾಣಸಿಕೊಂಡಿದ್ದಾರೆ..
ಆದ್ರೆ ಇಂದೇ ( ಆಗಸ್ಟ್ 12 ) ಮತ್ತೊಂದು ಪ್ರಮುಖ ಸಿನಿಮಾ ಸಹ ರಿಲೀಸ್ ಆಗಿದೆ.. ರವಿಚಂದ್ರನ್ ಅಭಿನಯದ ‘ರವಿ ಬೋಪಣ್ಣ’ ಸಿನಿಮಾ ಸಹ ರಿಲೀಸ್ ಆಗಿದೆ.. ಇತ್ತೀಚೆಗಷ್ಟೇ ಸಿನಿಮಾತಂಡ 7 ನಿಮಿಷಗಳ ಟ್ರೇಲರ್ ರಿಲೀಸ್ ಮಾಡಿತ್ತು.. ಈ ಸಿನಿಮಾದಲ್ಲಿ ರವಿಮಾಮ ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.. ಅಷ್ಟೇ ಅಲ್ಲದೇ ಇದು ಅವರದ್ದೇ ನಿರ್ದೇಶನದ ಸಿನಿಮಾವಾಗಿದೆ..
ಎರೆಡೂ ಸಿನಿಮಾಗಳಲ್ಲಿ ಯಾವ ಸಿನಿಮಾಗೆ ಪ್ರೇಕ್ಷಕರ ಪ್ರೀತಿ ಸಿಗುತ್ತೆ.. ಬಾಕ್ಸ್ ಆಫೀಸ್ ನಲ್ಲಿ ಯಾವ ಸಿನಿಮಾ ಗೆಲ್ಲುತ್ತೆ ಅನ್ನೋದನ್ನ ಕಾದು ನೋಡ್ಬೇಕಿದೆ..