Shimogga Subbanna : ಖ್ಯಾತ ಗಾಯಕ, ವಕೀಲ ಶಿವಮೊಗ್ಗ ಸುಬ್ಬಣ್ಣ ನಿಧನ
ಹಿನ್ನೆಲೆ ಗಾಯನಕ್ಕಾಗಿ ಕನ್ನಡದಲ್ಲಿ ಮೊದಲ ರಾಷ್ಟ್ರ ಪ್ರಶಸ್ತಿ ಗಳಿಸಿದ್ದ ಖ್ಯಾತ ಗಾಯಕ ಹಾಗೂ ವಕೀಲರೂ ಆದ ಶಿವಮೊಗ್ಗ ಸುಬ್ಬಣ್ಣ ಅವರು ವಿಧಿವಶರಾಗಿದ್ದಾರೆ.. ಅವರಿಗೆ 83 ವರ್ಷ ವಯಸ್ಸಾಗಿತ್ತು.. ಹೃದಯಸ್ತಂಬನದಿಂದ ಅವರು ನಿಧನ ಹೊಂದಿದ್ಧಾರೆ ಎನ್ನಲಾಗಿದೆ… ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕ ದರ್ಶನ ವ್ಯವಸ್ಥೆ ಮಾಡಲಾಗಿದ್ದು, ಸಂಜೆ ಅಂತ್ಯಕ್ರಿಯೆ ನಡೆಯಲಿದೆ.
ಶಿವಮೊಗ್ಗ ಸುಬ್ಬಣ್ಣನವರ ಮಗ ಶ್ರೀರಂಗ ಬಗ್ಗೆ ಮಾಹಿತಿ ನೀಡಿದ್ದಾರೆ. ನಿನ್ನೆ ಸಂಜೆ 5 ಗಂಟೆ ಸುಮಾರಿಗೆ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು. ಹೀಗಾಗಿ ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೆವು. ಅಲ್ಲಿಂದ ಜಯದೇವ ಆಸ್ಪತ್ರೆಗೆ ಶಿಫ್ಟ್ ಮಾಡುವಷ್ಟರಲ್ಲಿ ಹೃದಯಘಾತವಾಗಿ ನಿಧನ ಹೊಂದಿದರು ಎಂದಿದ್ಧಾರೆ.
ಅಂದ್ಹಾಗೆ ಅನೇಕ ಹಾಡುಗಳನ್ನ ಹಾಡಿರುವ ವರಿಗೆ ಕಾಡು ಕುದುರೆ ಸಿನಿಮಾದ ಕಾಡು ಕುದುರೆ ಓಡಿಬಂದಿತ್ತಾ ಹಿನ್ನೆಲೆ ಗಾಯನಕ್ಕೆ 1979ರಲ್ಲಿ ರಾಷ್ಟ್ರ ಪ್ರಶಸ್ತಿ ಸಿಕ್ಕಿತ್ತು. ಇದು ಹಿನ್ನೆಲೆ ಗಾಯನದಲ್ಲಿ ಕನ್ನಡಕ್ಕೆ ಒಲಿದ ಮೊದಲ ರಾಷ್ಟ್ರಪ್ರಶಸ್ತಿಯಾಗಿತ್ತು… ಇದರ ಹೊರತಾಗಿ ರಜತ ಕಮಲ, ಶಿಶುನಾಳ ಷರಿಫ್ ಪ್ರಶಸ್ತಿ, ರಾಜ್ಯ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನ ಗೆದ್ದಿದ್ದರು.. ಜೊತೆಗೆ ವಕೀಲರಾಗಿಯೂ ಸೇವೆ ಸಲ್ಲಿಸಿದ್ದರು.