ಕನ್ನಡ ಅಷ್ಟೇ ಅಲ್ದೇ ಇತರೇ ಭಾಷೆಗಳಲ್ಲೂ ಸಿಕ್ಕಾಪಟ್ಟೆ ಜನಪ್ರಿಯತೆ ಗಳಿಸಿರುವ ರಿಯಾಲಿಟಿ ಶೋ ಅಂದ್ರೆ ಅದು ಬಿಗ್ ಬಾಸ್… ಕನ್ನಡದಲ್ಲಿ ಬಿಗ್ ಬಾಸ್ ಒಟಿಟಿ ಸೀಸನ್ 1 ಪ್ರಾರಂಭವಾಗಿದೆ.. Voot ನಲ್ಲಿ 24 /7 ಪ್ರಸಾರವಾಗ್ತಿದೆ. ಕಾಂಟ್ರವರ್ಷಿಯಲ್ ಸೋಷಿಯಲ್ ಮೀಡಿಯಾ ಸ್ಟಾರ್ ಗಳು , ಹಿರಿ ತೆರೆ ಕಿರುತೆರೆ ನಟರು , ಪತ್ರಕರ್ತರು , ಉದ್ಯಮಿಗಳು , ಗುರೂಜಿ ಸೇರಿದಂತೆ ಹಲವರು ಮನೆ ಪ್ರವೇಶ ಮಾಡಿದ್ದು ಒಂದು ವಾರವೂ ಕಳೆಯುತ್ತಾ ಬಂದಿದೆ ಶೋ ಶುರುವಾಗಿ..
ಆದ್ರೆ ಕಂಟೆಸ್ಟೆಂಟ್ ಗಳನ್ನ ರಿವೀಲ್ ಮಾಡಿದ್ದಾಗ ಅನೇಕರು ಬೇಸರಗೊಂಡಿದ್ದರು.. ಅನೇಕರು ಕಾಫಿ ನಾಡು ಚಂದು ಮನೆ ಪ್ರವೇಶಿಸಬೇಕೆಂದು ಡಿಮ್ಯಾಂಡ್ ಮಾಡಿದ್ದರು.. ಈಗಲೂ ಚಂದುಗಾಗಿ ಡಿಮ್ಯಾಂಡ್ ಮುಂದುವರೆಸಿದ್ದು ಕಾಫಿನಾಡು ಚಂದು ವೈಲ್ಡ್ ಎಂಟ್ರಿ ಪಡೆಯಲು ಕಸರತ್ತು ನಡೆಸುತ್ತಿದ್ದಾರಾ ಎಂಬ ಪ್ರಶ್ನೆ ಮೂಡತೊಡಗಿದೆ..
ಬಹುತೇಕ ನೆಟ್ಟಿಗರು ಕಾಫಿ ನಾಡು ಚಂದು ಭಾಗವಹಿಸಬಹುದೆಂದು ಅಂದಾಜಿಸಿದ್ದರು.. ಆದ್ರೆ ನಿರಾಸೆಯಾಗಿತ್ತು.. ಆದ್ರು ಚಂದು ಹೊಸ ಹೊಸ ಕಸರತ್ತು ನಡೆಸುತ್ತಿದ್ದಾರಾ ಎಂಬ ಅನುಮಾನ ಮೂಡಿದೆ..
ಚಿಕ್ಕಮಗಳೂರು ಮೂಲದ ಚಂದು ಸೋಶಿಯಲ್ ಮೀಡಿಯಾದಲ್ಲಿ ಅನೇಕ ವಿಡಿಯೋಗಳನ್ನು ಹಂಚಿಕೊಂಡು ಫೇಮಸ್ ಆಗಿದ್ದಾರೆ. ತಮ್ಮದೇ ಆದ ಶೈಲಿಯಲ್ಲಿ ಹಲವರಿಗೆ ಬರ್ತ್ಡೇ ವಿಶ್ ಮಾಡುವ ಮೂಲಕ ಅವರು ಜನರನ್ನ ಸೆಳೆದಿದ್ದಾರೆ.. ಸಾಮಾಜಿಕ ಜಾಲತಾಣದಲ್ಲಿ ಅವರ ವಿಡಿಯೋಗಳು ವೈರಲ್ ಆಗಿವೆ.
ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಕಾಫಿ ನಾಡು ಚಂದು ಬಿಗ್ ಬಾಸ್ ಪ್ರವೇಶ ಮಾಡಬಹುದಾ ಎಂದು ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ..