BiggBoss Kannada Ott ಸೀಸನ್ ನ ಮೊದಲ ವಾರದಲ್ಲೇ ಸಾಕಷ್ಟು ಮನೆಯ ವಾತಾವರಣ ಬದಲಾಗಿದೆ.. ಬಿಗ್ ಬಾಸ್ ಮನೆಯಲ್ಲಿ ಭಿನ್ನ ವಿಭಿನ್ನ ವ್ಯಕ್ತಿತ್ವದ ಕಂಟೆಸ್ಟೆಂಟ್ ಗಳು ಎಂಟ್ರಿಕೊಟ್ಟಿದ್ದಾರೆ.. ಅದ್ರಲ್ಲಿ ಲೋಕೇಶ್ ಒಬ್ಬರು.. ಅವರು ಪಟ್ಟಿರುವ ಕಷ್ಟವನ್ನ ಆ ರಂಭದಲ್ಲಿ ಮನೆಯಲ್ಲಿ ಹೇಳಿಕೊಂಡಾಗ ಸ್ಪರ್ಧಿಗಳು ಹಾಗೂ ಪ್ರೇಕ್ಷಕರ ಕಣ್ತುಂಬಿಕೊಂಡಿತ್ತು.. ಅಂದ್ಹಾಗೆ ಲೋಕೇಶ್ ಅವರು ಕಾಣೆಯಾಗಿಬಿಟ್ಟಿದ್ದಾರೆ.. ಹೀಗಾಗಿ ನೆಟ್ಟಿಗರು ಲೋಕೇಶ್ ಬಗ್ಗೆ ಪ್ರಶ್ನೆಗಳನ್ನ ಮಾಡ್ತಾಯಿದ್ದಾರೆ..
16 ಜನ ಸ್ಪರ್ಧಿಗಳಿರುವ ಮನೆಯಲ್ಲಿ ಈಗ ಲೋಕೇಶ್ ಕಾಣೆಯಾಗಿದ್ದಾರೆ. ಆಗಸ್ಟ್ 12 ರಂದು ಪ್ರಸಾರವಾದ ಎಪಿಸೋಡ್ ನಲ್ಲಿ ಅವರು ಕಾಣಿಸಿಕೊಂಡಿಲ್ಲ.. ಸಹಜವಾಗಿ ಪ್ರೇಕ್ಷಕರಲ್ಲಿ ಗೊಂದಲ ಮೂಡಿದೆ..
ಅಂದ್ಹಾಗೆ ಇತ್ತೀಚೆಗಿನ ಎಪಿಸೋಡ್‌ನಲ್ಲಿ ಲೋಕೇಶ್ ಅವರಿಗೆ ಕಾಲಿಗೆ ಏಟಾಗಿತ್ತು. ಇದ್ರಿಂದ ಕಾಲು ಕೂಡ ಊದಿಕೊಂಡಿತ್ತು. ಈ ಬೆನ್ನಲ್ಲೇ ಲೋಕೇಶ್ ಬಿಗ್ ಬಾಸ್ ಮನೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗುತ್ತಿದೆ.
ಒಂದೆಡೆ ಕಂಟೆಸ್ಟೆಂಟ್ ಗಳ ನಡುವೆ ಅಸಮಾಧಾನ , ಸ್ಪೂರ್ತಿ ಸೋನು ಗೌಡ ನಡುವೆ ಕೋಲ್ಡ್ ವಾರ ನಡೆಯುತ್ತಿದೆ.. ಅಲ್ದೇ ಇವರಿಬ್ಬರೂ ರಾಕೇಶ್ ಅಡಿಗನಿಗಾಗಿ ಕಿತ್ತಾಡ್ತಿದ್ದಾರೆ.. ಈ ಮೂವರ ನಡುವೆ ಟ್ರಯಾಂಗಲ್ ಲವ್ ಸ್ಟೋರಿ ದೆಯಾ ಹೀಗೆಲ್ಲಾ ಚರ್ಚೆಗಳು ಆರಂಭವಾಗಿದೆ..
ಆಗಸ್ಟ್ 12 ರ ಪಿಸೋಡ್ ನಲ್ಲಿ ಬೆಳಿಗ್ಗಿನಿಂದಲೇ ಲೋಕೇಶ್ ಅವರು ಕಾಣೆಯಾಗಿದ್ದ ವಿಚಾರ ಗಮನಕ್ಕೆ ಬಂದಿದೆ.. ಟಾಸ್ಕ್ ಮಾಡುವಾಗ ತೀವ್ರವಾಗಿ ಏಟಾಗಿರುವ ಹಿನ್ನೆಲೆ ನಟ ಲೋಕೇಶ್ ಆಸ್ಪತ್ರೆಗೆ ದಾಖಲಿಸಿದ್ದಾರೆ ಎನ್ನಲಾಗ್ತಿದೆ.