Kollywood : ಖೈದಿ 2 ಗೆ ಫಿಕ್ಸಾಯ್ತಾ ಮುಹೂರ್ತ ..?? ದಿಲ್ಲಿ – ರೋಲೆಕ್ಸ್ ನಡುವೆ ಟಕ್ಕರ್ ಹೇಗಿರುತ್ತೆ..??
ಸೂಪರ್ ಹಿಟ್ ಸಿನಿಮಾ ಕಾರ್ತಿ ನಟನೆಯ ಖೈದಿಗೂ ಇತ್ತೀಚೆಗೆ ರಿಲೀಸ್ ಆದ ಲೋಕೇಶ್ ಕಾನರಾಜ್ ಹಾಗೂ ಕಮಲ್ ಹಾಸನ್ ಕಾಂಬಿನೇಷನ್ ನ ವಿಕ್ರಮ್ ಸಿನಿಮಾಗೂ ಲಿಂಕ್ ಇದೆ… ಇದೇ ಸಿನಿಮಾ ಮುಂದಿನ ಸರಣಿಗಳಿಗೂ ಲಿಂಕ್ ಗಳನ್ನ ಕನೆಕ್ಟ್ ಮಾಡುತ್ತಾ ಹೋಗುವ ಪ್ಲಾನ್ ನಲ್ಲಿ ನಿರ್ದೇಶಕರಿದ್ದಾರೆ..
ಖೈದಿಯಲ್ಲಿ ದಿಲ್ಲಿಯಾಗಿ ನಟಿಸಿದ್ದ ಕಾರ್ತಿ ಜೊತೆಗೆ ವಿಕ್ರಮ್ ನಲ್ಲಿ ರೋಲೆಕ್ಸ್ ಅವತಾರದಲ್ಲಿ ಕಾಣಿಸಿಕೊಂಡ ಸೂರ್ಯ ಖೈದಿ 2 ನಲ್ಲಿ ಮುಖಾಮುಖಿಯಾಗಲಿದ್ದಾರೆ.. ಫ್ಯಾನ್ಸ್ ರಿಯಲ್ ಲೈಫ್ ಅಣ್ಣ ತಮ್ಮಂದಿರು ರೀಲ್ ನಲ್ಲಿ ಮುಖಾಮುಖಿಯಾದಾಗ ವರಿಬ್ಬರ ನಡುವಿನ ರೋಚಕ ಟಕ್ಕರ್ ನೋಡೋದಕ್ಕೆ ಸಖತ್ ಕ್ಯೂರಿಯಸ್ ಆಗಿದ್ಧಾರೆ..
ಅಂದ್ಹಾಗೆ ಕೊನೆಗೂ ಖೈದಿ 2 ಗೆ ಮುಹೂರ್ತ ಫಿಕ್ಸ್ ಆಗಿದೆ.. ಹೀಗೊಂದು ಸುದ್ದಿ ಕಾಲಿವುಡ್ ನಲ್ಲಿ ಹರಿದಾಡ್ತಿದೆ… ಅದಕ್ಕೆ ಕಾರಣ ಲೋಕೇಶ್ ಅವರು ನೀಡಿರುವ ದು ಚಿಕ್ಕ ಸುಳಿವು.. ಈ ಬಗ್ಗೆ ಸಂದರ್ಶನವೊಂದರಲ್ಲಿ ಅವರು ಆಡಿರುವ ಮಾತು.. ಸಂದರ್ಶನವೊಂದರಲ್ಲಿ ಈ ಸಿನಿಮಾ ಶೀಘ್ರವೇ ಶುರುವಾಗುವ ಬಗ್ಗೆ ಪಮಾತನಾಡಿದ್ದಾರೆ ಲೋಕೇಶ್ ಕಾನಗರಾಜ್.