ಬಾಲಿವುಡ್ ನ ನಸೀಬ್ ಖರಾಬ್ ಆಗಿದೆ.. ಇದು ಮತ್ತೊಮ್ಮೆ ಸಾಬೀತಾಗಿದೆ.. ಕಳೆದ 2 ವರ್ಷಗಳಲ್ಲಿ ಕಾಶ್ಮೀರ್ ಫೈಲ್ಸ್ ಬಿಟ್ರೆ ಇನ್ನೆಲ್ಲಾ ಸಿನಿಮಾಗಳು ಡಿಸಾಸ್ಟರ್ ,, ಫ್ಲಾಪ್ ಆಗಿವೆ.. ಸ್ಟಾರ್ ಗಳ ಸಿನಿಮಾಗಲೂ , ಬಿಗ್ ಬಜೆಟ್ ಸಿನಿಮಾಗಳು ಫೇಲ್ ಆಗಿವೆ… ಬಾಲಿವುಡ್ ಮುಂದೆ ಸೌತ್ ಸಿನಿಮಾಗಳು ಆರ್ಭಟಿಸುತ್ತಿವೆ.. RRR , ಪುಷ್ಪ , KGF 2 , ವಿಕ್ರಮ್ , ಚಾರ್ಲಿ , ವಿಕ್ರಾಂತ್ ರೋಣ , ಸೀತಾ ರಾಮಂ ಮುಂದೆ ಬಾಲಿವುಡ್ ಸಿನಿಮಾಗಳು ಮಕಾಡೆ ಮಲಗಿವೆ.. ಈಗೇನಿದ್ರೂ ಸೌತ್ ದೇ ಅಬ್ಬರವಾಗಿದೆ..
ಆದ್ರೂ ಒಂದಷ್ಟು ನಿರೀಕ್ಷೆ ಇಟ್ಟುಕೊಂಡು ತೆರೆಗೆ ಅಪ್ಪಳಿಸಿರುವ ಸಿನಿಮಾ ಬಾಲಿವುಡ್ ಬಹುನಿರೀಕ್ಷೆಯ ಅಮಿರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ.. ಈ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆಯಿತ್ತಾದ್ರೂ ಸಿನಿಮಾ ನೀರಸ ಪ್ರದರ್ಶನ ಕಂಡಿದೆ.. 10 ವರ್ಷಗಳಲ್ಲೇ ಅಮಿರ್ ಖಾನ್ ಅವರ ಸಿನಿಮಾವೊಂದು ಮೊದಲ ದಿನ ಇಷ್ಟು ಕಡಿಮೆ ಮಟ್ಟದ ಗಳಿಕೆ ಕಂಡಿದೆ ಎನ್ನಲಾಗ್ತಿದೆ…
ಆರಂಭಿಕ ದಿನದಲ್ಲಿ 15-20 ಶೇಕಡಾ ಆಕ್ಯುಪೆನ್ಸಿಯನ್ನು ದಾಖಲಿಸಿದೆ ಎಂದು ವರದಿಯಾಗಿದೆ. ಅಮೀರ್ ಖಾನ್-ಕರೀನಾ ಕಪೂರ್ ಅಭಿನಯದ ಚಿತ್ರವು ವಿಮರ್ಶಕರಿಂದ ಮಿಶ್ರ ವಿಮರ್ಶೆಗಳನ್ನು ಸ್ವೀಕರಿಸಿದೆ.
ಆಗಸ್ಟ್ 11 ರಂದು ಥಿಯೇಟರ್ಗಳಿಗೆ ಆಗಮಿಸಿದ ಅಮೀರ್ ಖಾನ್-ಕರೀನಾ ಕಪೂರ್ ಅಭಿನಯದ ‘ಲಾಲ್ ಸಿಂಗ್ ಚಡ್ಡಾ’ ವಿಮರ್ಶಕರಿಂದ ಮಿಶ್ರ ವಿಮರ್ಶೆಗಳನ್ನು ಸ್ವೀಕರಿಸಿದೆ. ಈ ಚಲನಚಿತ್ರವು ಟಾಮ್ ಹ್ಯಾಂಕ್ಸ್ ನಟಿಸಿದ 1994 ರ ಹಾಲಿವುಡ್ ವೈಶಿಷ್ಟ್ಯವಾದ ಫಾರೆಸ್ಟ್ ಗಂಪ್ನ ಅಧಿಕೃತ ರೀಮೇಕ್ ಆಗಿದೆ..
ಸಿನಿಮಾ ರಿಲೀಸ್ ಆಗಿ ಎರಡು ದಿನಗಳು ಕಳೆದಿದೆ. ಎರಡನೇ ದಿನದ ಗಳಿಕೆ ಶೇಕಡಾ 40ರಷ್ಟು ಕುಸಿದಿದೆ. ಎರಡನೇ ದಿನದ ಗಳಿಕೆಯಲ್ಲಿ ಮೊದಲ ದಿನದ ಗಳಿಕೆ ಗಿಂತಲೂ ಹೆಚ್ಚಿನ ಕುಸಿತಕಂಡಿದೆ..
ಎರಡನೇ ದಿನ ಒಟ್ಟಾರೆ 7 ಕೋಟಿ ರೂ. ಗಳಿಕೆ ಕಂಡಿದೆ. ಭಾರತದಾದ್ಯಂತ ‘ಲಾಲ್ ಸಿಂಗ್ ಚಡ್ಡ’ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆದರೂ ಕೂಡ ಎರಡನೇ ದಿನ ಶುಕ್ರವಾರದಂದು 7 ಕೋಟಿ ರೂ. ಗಳಿಕೆಗೆ ಸೀಮಿತವಾಗಿದೆ. ಈ ಮೂಲಕ ಚಿತ್ರದ ಎರಡು ದಿನದ ಒಟ್ಟಾರೆ ಗಳಿಕೆ ಭಾರತದಲ್ಲಿ 19 ಕೋಟಿ ರೂ. ಆಗಿದೆ. ನಿರೀಕ್ಷೆಯಂತೆ ಮೊದಲ ದಿನವೇ ಸಿನಿಮಾ 20 ಕೋಟಿ ರೂ. ತನಕ ಕಲೆ ಹಾಕಬೇಕಿತ್ತು. ಆದರೆ ಅದು ಸಾಧ್ಯವಾಗಿಲ್ಲ.
ಹೀಗಾಗಿ ಬಾಲಿವುಡ್ ಭವಿಷ್ಯ ಮುಗಿಯಿತೇ..?? ಎಂಬ ಚರ್ಚೆಗಳು ಇದೀಗ ಶುರುವಾಗಿದೆ..