10 ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದ ಟಾಲಿವುಡ್ ನ ಸ್ಟಾರ್ ಕಪಲ್ ಸಮಂತಾ ನಾಗಚೈತನ್ಯ ಡಿವೋರ್ಸ್ ಪಡೆದಿದ್ದು ತಮ್ಮ ನಾಲ್ಕು ವರ್ಷಗಳ ದಾಂಪತ್ಯಕ್ಕೆ ಇತಿಶ್ರೀ ಹಾಡಿದ್ದಾರೆ..
ಇವರ ಡಿವೋರ್ಸ್ ಸುದ್ದಿಯಿಂದ ಅಭಿಮಾನಿಗಳು ಸಿಕ್ಕಾಪಟ್ಟೆ ಶಾಕ್ ಆಗಿದ್ದರು.. ಇವರಿಬ್ಬರೂ ಸಹ ಈ ವಿಚಾರವಾಗಿ ಮೌನವಾಗಿದ್ರೂ ನೆಟ್ಟಿಗರು ಸೈಲೆಂಟ್ ಇರಲ್ಲ.. ಈವರೆಗೂ ಇಬ್ಬರ ಅಭಿಮಾನಿಗಳೂ ಪರಸ್ಪರರನ್ನ ಟ್ರೋಲ್ ಮಾಡ್ತಾ ಬಂದಿದ್ದಾರೆ..
ಇಬ್ಬರೂ ಸದ್ಯ ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದಾರೆ.. ಈ ಜೋಡಿ ಮತ್ತೆ ಒಂದಾಗಬೇಕೆಂಬ ಆಶಯ ಅಭಿಮಾನಿಗಳದ್ದು..
ಇತ್ತೀಚೆಗೆ ಲಾಲ್ ಸಿಂಗ್ ಪ್ರಮೋಷನ್ ವೇಳೆ ನಾಗಚೈತನ್ಯ ಸಮಂತಾ ಬಗ್ಗೆ ಮಾತನಾಡಿದ್ದಾರೆ.. ಸಂದರ್ಶನವೊಂದ್ರಲ್ಲಿ ಸಮಂತಾ ಬಗ್ಗೆ ಕೇಳಿದ ಪ್ರಶ್ನೆಗೆ ಆಶ್ಚರ್ಯಕರ ತ್ತರ ನೀಡಿದ್ದಾರೆ ನಾಗಚೈತನ್ಯ..
ಸಮಂತಾ ಅವರನ್ನು ನೀವು ಮತ್ತೆ ಭೇಟಿಯಾದ್ರೆ ಏನು ಮಾಡ್ತೀರಾ ಎಂಬ ಪ್ರಶ್ನೆಗೆ ಉತ್ತರಿಸುತ್ತಾ ಮತ್ತೆ ಸಮಂತಾ ಅವರನ್ನು ಭೇಟಿಯಾದರೆ ಹಾಯ್ ಹೇಳಿ ಒಂದು ಹಗ್ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಅವರ ಈ ಹೇಳಿಕೆ ಸಾಕಷ್ಟು ಸೌಂಡ್ ಮಾಡ್ತಿದೆ..