Puneeth Raj kumar : ಅಪ್ಪು ನಟಿಸಬೇಕಿದ್ದ ಪಾತ್ರಕ್ಕೆ ಫಹಾದ್ ಫಿಕ್ಸ್..!!
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಿಧನರಾಗಿ ಹಲವು ತಿಂಗಳು ಕಳೆದಿವೆ. ಆದರೂ ಅವರ ಮೇಲೆ ಜನರು ಇಟ್ಟ ಅಭಿಮಾನ ಒಂದಿಂಚು ಕಮ್ಮಿ ಆಗುವುದಿಲ್ಲ. ಅದಕ್ಕೆ ಸಾಕ್ಷಿ ಎಂಬಂತೆ ಅನೇಕ ಉದಾಹರಣೆಗಳು ಸಿಗುತ್ತಲೇ ಇವೆ.
ಅಂದ್ಹಾಗೆ ಅಪ್ಪು ಅವರು ಪವನ್ ಕುಮಾರ್ ಜೊತೆಗೆ ದ್ವಿತ್ವ ಸಿನಿಮಾ ಮಾಡಬೇಕಿತ್ತು.. ಈ ನಡುವೆ ವಿಧಿ ಕ್ರೂರ ಆಟವಾಡಿದೆ.. ಅಪ್ಪು ಅವರು ಮಾಡಬೇಕಿದ್ದ ಈ ಸಿನಿಮಾದಲ್ಲಿ ಅವರ ಪಾತ್ರ ಯಾರು ನಿಭಾಯಿಸುತ್ತಾರೆ ಅನ್ನೋ ಸಾಕಷ್ಟು ಚರ್ಚೆಗಳ ನಡುವೆ ಇದೀಗ ದು ಹೆಸರು ರಿವೀಲ್ ಆಗಿದೆ..
ಅದೇ ಮಲಯಾಳಂನ ಖ್ಯಾತ ನಟ ಫಹಾದ್ ಫಾಸಿಲ್ ಅವರದ್ದು.. ವಿಕ್ರಮ್ , ಪುಷ್ಪದಂತಹ ಸಿನಿಮಾಗಳ ಮೂಲಕ ಅತಿ ಹೆಚ್ಚು ಫೇಮಸ್ ಆದ ಫಹಾದ್ ಮಲಯಾಳಂನ ವರ್ಸಟೈಲ್ ನಟ.. ಸ್ಟಾರ್ ನಟ ಈಗ ಅಪ್ಪು ಅವರು ನಟಿಸಬೇಕಿದ್ದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗ್ತುದೆ..
ಸಿನಿಮಾಗೆ ಹೊಂಬಾಳೆ ಫಿಲಮ್ಸ್ ಬಂಡವಾಳ ಹೂಡುತ್ತಿದೆ.. ಈ ಮೂಲಕ ಈಗಾಗಲೇ ಕನ್ನಡದಲ್ಲಿ ಸಕ್ಸಸ್ ಕಂಡು ಟಾಲಿವುಡ್ ಗೆ ಎಂಟ್ರಿಕೊಟ್ಟು , ತಮಿಳಿನಲ್ಲೂ ಸಿನಿಮಾ ಮಾಡುವತ್ತ ಗಮನ ಹರಿಸುತ್ತಿರುವ ಹೊಂಬಾಳೆ ಫಿಲಮ್ಸ್ ಮಲಯಾಳಿ ನಟನನ್ನ ಯ್ಕೆ ಮಾಡುವ ಮೂಲಕ ಮಲಯಾಳಂ ಇಂಡಸ್ಟ್ರಿಯಲ್ಲೂ ನೆಲೆ ಕಂಡುಕೊಳ್ಳುವ ಯೋಜನೆಯಲ್ಲಿದೆ ಎಂದೇ ನೆಟ್ಟಿಗರು ಚರ್ಚೆ ಮಾಡಿಕೊಳ್ತಿದ್ದಾರೆ..