ಬಾಲಿವುಡ್ ನ ನಸೀಬ್ ಖರಾಬ್ ಆಗಿದೆ.. ಇದು ಮತ್ತೊಮ್ಮೆ ಸಾಬೀತಾಗಿದೆ.. ಕಳೆದ 2 ವರ್ಷಗಳಲ್ಲಿ ಕಾಶ್ಮೀರ್ ಫೈಲ್ಸ್ ಬಿಟ್ರೆ ಇನ್ನೆಲ್ಲಾ ಸಿನಿಮಾಗಳು ಡಿಸಾಸ್ಟರ್ ,, ಫ್ಲಾಪ್ ಆಗಿವೆ.. ಸ್ಟಾರ್ ಗಳ ಸಿನಿಮಾಗಲೂ , ಬಿಗ್ ಬಜೆಟ್ ಸಿನಿಮಾಗಳು ಫೇಲ್ ಆಗಿವೆ… ಬಾಲಿವುಡ್ ಮುಂದೆ ಸೌತ್ ಸಿನಿಮಾಗಳು ಆರ್ಭಟಿಸುತ್ತಿವೆ.. RRR , ಪುಷ್ಪ , KGF 2 , ವಿಕ್ರಮ್ , ಚಾರ್ಲಿ , ವಿಕ್ರಾಂತ್ ರೋಣ , ಸೀತಾ ರಾಮಂ ಮುಂದೆ ಬಾಲಿವುಡ್ ಸಿನಿಮಾಗಳು ಮಕಾಡೆ ಮಲಗಿವೆ.. ಈಗೇನಿದ್ರೂ ಸೌತ್ ದೇ ಅಬ್ಬರವಾಗಿದೆ..
ಆದ್ರೂ ಒಂದಷ್ಟು ನಿರೀಕ್ಷೆ ಇಟ್ಟುಕೊಂಡು ತೆರೆಗೆ ಅಪ್ಪಳಿಸಿರುವ ಸಿನಿಮಾ ಬಾಲಿವುಡ್ ಬಹುನಿರೀಕ್ಷೆಯ ಅಮಿರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ.. ಈ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆಯಿತ್ತಾದ್ರೂ ಸಿನಿಮಾ ನೀರಸ ಪ್ರದರ್ಶನ ಕಂಡಿದೆ.. ಇದರ ಜೊತೆ ಜೊತೆಗೆ ರಿಲೀಸ್ ಆಗಿದ್ದ ಮತ್ತೊಂದು ಸಿನಿಮಾ… ಮತ್ತೊಬ್ಬ ಸ್ಟಾರ್ ನಟನ ಸಿನಿಮಾ , ಅಕ್ಷಯ್ ಕುಮಾರ್ ನಟನೆಯ ರಕ್ಷಾ ಬಂಧನ ಸಿನಿಮಾ ಸಹ ನೀರಸ ಪ್ರದರ್ಶನ ಕಾಣ್ತಿದೆ..
ರಕ್ಷಾ ಬಂಧನ ಬಾಕ್ಸ್ ಆಫೀಸ್ ದಿನ 1 ಸಂಗ್ರಹ: ಅಕ್ಷಯ್ ಕುಮಾರ್-ನಟನೆಯ ರಕ್ಷಾ ಬಂಧನದ ಹಬ್ಬದಂದು ಬಿಡುಗಡೆಯಾದರೂ ಕಡಿಮೆ ಓಪನಿಂಗ್ ದಾಖಲಿಸಿದೆ.ರಕ್ಷಾ ಬಂಧನ್, ರಕ್ಷಾ ಬಂಧನ ಹಬ್ಬದಂದು ಬಿಡುಗಡೆಯಾಗಿದ್ದರೂ, ಇದು ಭಾರತದ ಕೆಲವು ಭಾಗಗಳಲ್ಲಿ ರಜಾದಿನವಾಗಿತ್ತು, ಚಿತ್ರಮಂದಿರಗಳಲ್ಲಿ ಕಡಿಮೆ ಓಪನಿಂಗ್ ದಾಖಲಿಸಿದೆ. ಗುರುವಾರ ಬಿಡುಗಡೆಯಾದ ಮೊದಲ ದಿನವೇ ಅಕ್ಷಯ್ ಕುಮಾರ್ ಅಭಿನಯದ ಚಿತ್ರ ಸುಮಾರು 8 ಕೋಟಿ ರೂ ಕಲೆಕ್ಷನ್ ಮಾಡಿದೆ.
ಅಮೀರ್ ಖಾನ್ ಚಿತ್ರ ನಿರಾಶಾದಾಯಕ 11 ಕೋಟಿ ಕಲೆಕ್ಷನ್ ಮಾಡಿದೆ..
ಚಿತ್ರದ ಆರಂಭಿಕ ಅಂದಾಜಿನ ಪ್ರಕಾರ ದಿನದ ಮೊದಲ ಸಂಗ್ರಹ ಸುಮಾರು 7.5 – 8 ಕೋಟಿ ರೂ. ದಿನ ಕಳೆದಂತೆ ಚಿತ್ರವು ಲಾಲ್ ಸಿಂಗ್ ಚಡ್ಡಾಕ್ಕಿಂತ ಹೆಚ್ಚು ಸುಧಾರಣೆಯನ್ನು ತೋರಿಸಿದೆ ಎಂದು ಹೇಳಲಾಗುತ್ತಿದೆ..