ಒಂದು ಕಾಲದಲ್ಲಿ ಕನ್ನಡ ಸಿನಿಮಾರಂಗವನ್ನ ಅಸಡ್ಡೆಯಾಗಿ ಕಾಣ್ತಿದ್ದ ಬಾಲಿವುಡ್ ಆಗ್ಲೇ ಇತರೇ ಇಂಡಸ್ಟ್ರಿಗಳಿಗಾಗಲಿ ,,, ಕನ್ನಡ ಸಿನಿಮಾ ಇಂಡಸ್ಟ್ರಿಯ ಪವರ್ ಏನು ಅನ್ನಮೋದು ಈಗಾಗಲೇ KGF , ಚಾರ್ಲಿ , ವಿಕ್ರಾಂತ್ ರೋಣದಂತಹ ಸಿನಿಮಾಗಳ ಮೂಲಕ ಗೊತ್ತಾಗಿದೆ..
ಇದೀಗ ಗಾಳಿಪಟ ಸಿನಿಮಾ ತ್ತಮ ಪ್ರದರ್ಶನ ಕಾಣ್ತಿದೆ… ಸಿನಿಮಾ ಹೌಸ್ ಫುಲ್ ಆಗಿ ಡುತ್ತಿದೆ.. ಹೀಗೆ ಹಿಟ್ ಮೇಲೆ ಹಿಟ್ ನೀಡ್ತಿದ್ರೂ ಈಗಲೂ ಕನ್ನಡ ಸಿನಿಮಾಗಳನ್ನ ಕಡೆಗಣನೆ ಮಾಡಲಾಗ್ತಿದೆ ಎಂದು ಹಲವರು ಆರೋಪಿಸುತ್ತಿದ್ದಾರೆ.,. ಇದೇ ನಡುವೆ ಲಾಲ್ ಸಿಂಗ್ ಚಡ್ಡಾ ಫ್ಲಾಪ್ ಆಗಿದೆ. ಆದ್ರೆ ಈ ಸಿನಿಮಾ ಪ್ಲಾಪ್ ಆಗಿರುವುದನ್ನ ಲ್ಲೇಖಿಸುತ್ತಾ ಹಿಟ್ ತಮಿಳು, ತೆಲುಗು ಸಿನಿಮಾಗಳ ಪಟ್ಟಿ ನೀಡಿರುವ ವಿಮರ್ಶಕ ಶ್ರೀಧರ್ ಪಿಳ್ಳೈಗೆ ಕನ್ನಡ ನಿರ್ಮಾಪಕ ಕಾರ್ತಿಕ್ ಗೌಡ ತಿರುಗೇಟು ಕೊಟ್ಟಿದ್ದಾರೆ.
ಹೌದು ಲಾಲ್ ಸಿಂಗ್ ರಿಲೀಸ್ ಆದಾಗಲೇ ರಿಲೀಸ್ ಆದ ದಕ್ಷಿಣ ಸಿನಿಮಾಗಳ ಬಗ್ಗೆ ಉಲ್ಲೇಖಿಸಿರುವ ಪಿಳ್ಳೈ ಅದೇ ದಿನ ರಿಲೀಸ್ ಆಗಿ ಭರ್ಜರಿ ಕಲೆಕ್ಷನ್ ಮಾಡ್ತಿರುವ ಗಣೇಶ್ ನಟನೆಯ ಗಾಳಿಪಟ 2 ಬಗ್ಗೆ ಲ್ಲೇಖ ಮಾಡದೇ ಇರೋದೆ ಅಸಮಾಧಾನಕ್ಕೆ ಕಾರಣವಾಗಿದೆ..
ಕಾರ್ತಿಕ್ ಗೌಡ ಶ್ರೀಧರ್ ಪಿಳ್ಳೈ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ನಿರ್ಮಾಪಕ ಕಾರ್ತಿಕ್ ಗೌಡ ಅವರು ಗಾಳಿಪಟ 2 ಎಂಬ ಕನ್ನಡ ಸಿನಿಮಾವೂ ಇದೇ ದಿನ ಬಿಡುಗಡೆಯಾಗಿ ಭರ್ಜರಿ ಹಿಟ್ ಆಗಿದೆ. ನೀವು ಕನ್ನಡ ಸಿನಿಮಾವನ್ನು ಯಾಕೆ ಇತರ ಭಾಷೆಗಳ ಜೊತೆ ನೋಡುವುದಿಲ್ಲ, ದಕ್ಷಿಣದ ಸಿನಿಮಾಗಳ ಜೊತೆ ಕನ್ನಡ ಚಿತ್ರರಂಗವನ್ನೂ ಒಂದೇ ರೀತಿ ನೋಡಿ ಎಂದು ಕೆಂಡ ಕಾರಿದ್ದಾರೆ..