Liger : ವಿಜಯ್ ದೇವರಕೊಂಡ , ಅನನ್ಯಾ ಪಾಂಡೆ , ರಮ್ಯಾ ಕೃಷ್ಣನ್ ಸಂಭಾವನೆ ಎಷ್ಟು ಗೊತ್ತಾ..??
ವಿಜಯ್ ದೇವರಕೊಂಡ ಅವರ ‘ಲೈಗರ್’ ಭಾರತದ ಮುಂದಿನ ಬಹುನಿರೀಕ್ಷಿತ ಸಿನಿಮಾಗಳ ಪೈಕಿ ಒಂದು.. ಪುರಿ ಜಗನ್ನಾಥ್ ನಿರ್ದೇಶನದ ಈ ಪ್ಯಾನ್ ಇಂಡಿಯಾ ಸಿನಿಮಾ ಸಾಕಷ್ಟು ವಿಚಾರವಾಗಿ ಈಗಾಗಲೇ ಕ್ರೇಜ್ ಹುಟ್ಟುಹಾಕಿದೆ.. ಈ ಸಿನಿಮಾ ಆಗಸ್ಟ್ 25 ಕ್ಕೆ ರಿಲೀಸ್ ಆಗಲಿದ್ದು ಟ್ರೇಲರ್ ಭರ್ಜರಿ ಸೌಂಡ್ ಮಾಡಿದೆ..
ಇತ್ತೀಚೆಗೆ ರಿಲೀಸ್ ಆದ ವಾಟ್ ಲಗಾ ದೇಂಗೆ ಹಾಗೂ ರೋಮ್ಯಾಂಟಿಕ್ ಹಾಡುಗಳು ಸಹ ಭಾಋಈ ಸೌಂಡ್ ಮಾಡಿವೆ.. ‘ವಾಟ್ ಲಗಾ ದೇಂಗೆ’ ಹಾಡಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗ್ತಿದೆ.. ವಾಟ್ ಲಗಾ ದೇಂಗೆ ಲೈಗರ್ ನ ಸೂಪರ್-ಸ್ಪೆಷಲ್ ಹಾಡು. ಈ ಹಾಡನ್ನು ವಿಜಯ್ ದೇವರಕೊಂಡ ಅವರೇ ಹಾಡಿದ್ದಾರೆ ಮತ್ತು ಸುನಿಲ್ ಕಶ್ಯಪ್ ಅವರು ಸಂಯೋಜಿಸಿದ್ದಾರೆ ಮತ್ತು ನಿರ್ದೇಶಕ ಪುರಿ ಜಗನ್ನಾಥ್ ಬರೆದಿದ್ದಾರೆ.
ಲೈಗರ್ ಸಿನಿಮಾ ಪ್ರಮೋಷನ್ ನಲ್ಲಿ ವಿಜಯ್ ದೇವರಕೊಂಡ ಹಾಗೂ ನಟಿ ಅನನ್ಯಾ ಪಾಂಡೆ ಬ್ಯುಸಿಯಾಗಿದ್ದಾರೆ.. ಅಂದ್ಹಾಗೆ ಇದೀಗ ಮತ್ತೊಂದು ಹೊಸ ಲವ್ ಗಾಸಿಪ್ ಹರಿದಾಡುತ್ತಿದೆ.. ಈ ಜೋಡಿಯ ನಡುವೆ ಸಮ್ ಥಿಂಗ್ ಸಮ್ ಥಿಂಗ್ ಇದೆ.. ವಿಜಯ್ ದೇವರಕೊಂಡ ರಶ್ಮಿಕಾ ನಂತರ ಈಗ ಅನನ್ಯಾ ಜೊತೆಗೆ ಪ್ರೀತಿಯಲ್ಲಿದ್ದಾರೆ ಎನ್ನಲಾಗ್ತಿದೆ..
ಇದೆಲ್ಲದರ ನಡುವೆ ಸಿನಿಮಾದಲ್ಲಿ ತಾರೆಯರ ಸಂಭಾವನೆ ಬಗ್ಗೆ ಚರ್ಚೆ ನಡೆಯುತ್ತಿದೆ.. ಈ ಸಿನಿಮಾ ಮೂಲಕ ವಿಜಯ್ ದೇವರಕೊಂಡ ಸಂಭಾವನೆಯನ್ನ ಹೆಚ್ಚಿಸಿಕೊಂಡಿದ್ಧಾರೆ.. ಈ ಸಿನಿಮಾಗೆ ದೇವರಕೊಂಡ 35 ಕೋಟಿ ರೂ ಪಡೆದಿದ್ದಾರೆ ಎನ್ನಲಾಗ್ತಿದೆ..
ಅಂದ್ಹಾಗೆ ಇಲ್ಲಿಯವರೆಗೂ ಅವರ ಸಂಭಾವನೆ 10 ಕೋಟಿ ರೂಪಾಯಿಗಳ ಳಗೇ ಇತ್ತು ಎನ್ನಲಾಗಿದೆ.. ಜೊತೆಗೆ ಮುಂದಿನ ಸಿನಿಮಾಗೆ ಸುಮಾರು 50 ಕೋಟಿಗೂ ಅಧಿಕ ಸಂಭಾವನೆ ಪಡೆಯಲಿದ್ದಾರೆ ಎನ್ನಲಾಗುತ್ತಿದೆ..
ಇನ್ನೂ ಸಿನಿಮಾದ ನಾಯಕಿ ಅನನ್ಯಾ ಪಾಂಡೆಗೆ ಸಿನಿಮಾಗಾಗಿ 3 ಕೋಟಿ ರೂ ಸಂಭಾವನೆ ನೀಡಲಾಗಿದ್ಯಂತೆ.. ಮತ್ತೊಂದೆಡೆ ಸ್ಟಾರ್ ಹಿರಿಯ ನಟಿ , ಬಾಹುಬಲಿ ಖ್ಯಾತಿಯ ಬಹುಭಾಷಾ ನಟಿ ರಮ್ಯಾ ಕೃಷ್ಣನ್ ಅವರೂ ಕೂಡ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚಿದ್ದು , ಅವರಿಗೆ ಈ ಸಿನಿಮಾಗಾಗಿ 1 ಕೋಟಿ ರೂ ಸಂಭಾವನೆ ನೀಡಲಾಗಿದೆ ಎಂದು ಹೇಳಲಾಗ್ತಿದೆ..