Pippa ಟೀಸರ್ ರಿಲೀಸ್..!! ಭಾರತ ಪಾಕಿಸ್ತಾನ ನಡುವಿನ ಯುದ್ಧದ ಚಿತ್ರವಿದು..!!
ಇಂದು ದೇಶಾದ್ಯಾಂತ 75 ನೇ ಸ್ವಾತಂತ್ರ್ಯ ದಿನಾಚರಣೆಯನ್ನ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಭಾರತೀಯ ಚಿತ್ರರಂಗ ಕೂಡ ಸ್ವಾತಂತ್ರ್ಯ ದಿನದ ಪ್ರಯುಕ್ತ ಹಲವು ಹಲವು ಸಿನಿಮಾಗಳ ಅಪ್ಡೇಟ್ ಕೊಟ್ಟಿದೆ. ಈ ಶುಭ ಸಂದರ್ಭದಲ್ಲಿ ಇಶಾನ್ ಖಟ್ಟರ್ ಮತ್ತು ಮೃಣಾಲ್ ಠಾಕೂರ್ ಅಭಿನಯದ ಪಿಪ್ಪಾ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರದ ಟೀಸರ್ ಸಖತ್ ಸದ್ದು ಮಾಡಿದೆ. ದೇಶಭಕ್ತಿಯನ್ನ ಸಾರುವ ಚಿತ್ರದ ಟೀಸರ್ ವೈರಲ್ ಆಗುತ್ತಿದೆ.
ಚಿತ್ರದಲ್ಲಿ ಮೃಣಾಲ್ ಠಾಕೂರ್ ಮತ್ತು ಇಶಾನ್ ಖಟ್ಟರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 1 ನಿಮಿಷದ ಏಳು ಸೆಕೆಂಡುಗಳ ಈ ವಿಡಿಯೋದಲ್ಲಿ ಡಿಸೆಂಬರ್ 3, 1971ರ ಯುದ್ಧದ ಝಲಕ್ ಕಾಣುತ್ತಿದೆ. ಟೀಸರ್ ನಲ್ಲಿ ಇಡೀ ದೇಶವೇ ರೇಡಿಯೊದಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರ ಮಾತುಗಳನ್ನು ಆಲಿಸುತ್ತಿರುತ್ತದೆ. ಪ್ರಧಾನಿ ಹೇಳುತ್ತಾರೆ, ‘ಕೆಲವು ಗಂಟೆಗಳ ಹಿಂದೆ ಪಾಕಿಸ್ತಾನ ಭಾರತೀಯ ವಾಯುನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಿದೆ. ನಾನು, ಇಂದಿರಾ ಗಾಂಧಿ, ಭಾರತದ ಪ್ರಧಾನಿ, ಪಾಕಿಸ್ತಾನದೊಂದಿಗೆ ಯುದ್ಧ ಘೋಷಿಸುತ್ತೇನೆ. ಜೈ ಹಿಂದ್.
View this post on Instagram
ಇದೇ ಟೀಸರ್ ನಲ್ಲಿ ಟೀಸರ್‌ನಲ್ಲಿ ಮೃಣಾಲ್ ಠಾಕೂರ್ ಮತ್ತು ಇಶಾನ್ ಖಟ್ಟರ್ ಅವರ ಯುದ್ಧ ದೃಶ್ಯಗಳನ್ನ ನೋಡಬಹುದು. ಟೀಸರ್ ಜೊತೆಗೆ ಚಿತ್ರದ ಬಿಡುಗಡೆ ದಿನಾಂಕವನ್ನ ಪ್ರಕಟಿಸಲಾಗಿದೆ. ಇಶಾನ್ ಖಟ್ಟರ್ ಅವರ ಈ ಚಿತ್ರವು ಡಿಸೆಂಬರ್ 2, 2022 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ.
‘ಪಿಪ್ಪಾ’ ಒಂದು ಯುದ್ಧದ ಚಿತ್ರವಾಗಿದ್ದು, ಭಾರತ, ಬಾಂಗ್ಲಾ ವಿಮೋಚನೆಗಾಗಿ ಹೋರಾಡಿದ ಕಥೆ ಹೊಂದಿದೆ. 45 ನೇ ಕ್ಯಾವಲ್ರಿ ಟ್ಯಾಂಕ್ ಸ್ಕ್ವಾಡ್ರನ್‌ನ ಅನುಭವಿ ಬ್ರಿಗೇಡಿಯರ್ ಬಲರಾಮ್ ಸಿಂಗ್ ಮೆಹ್ತಾ ಅವರ ಶೌರ್ಯವನ್ನ ಚಿತ್ರದಲ್ಲಿ ತೋರಿಸಿಲಾಗಿದೆ. ಈ ಚಿತ್ರವು ಬ್ರಿಗೇಡಿಯರ್ ಬಲರಾಮ್ ಸಿಂಗ್ ಮೆಹ್ತಾ ಅವರ ‘ದಿ ಬರ್ನಿಂಗ್ ಚಾಫೀಸ್’ ಪುಸ್ತಕವನ್ನು ಆಧರಿಸಿದೆ. ರಾಜಾ ಕೃಷ್ಣ ಮೆನನ್ ನಿರ್ದೇಶನದ ಈ ಚಿತ್ರವ ಬಾಂಗ್ಲಾದೇಶದ ಸೃಷ್ಟಿಗೆ ಕಾರಣವಾದ ಗರೀಬ್‌ಪುರದಲ್ಲಿ ನಡೆದ 12 ದಿನಗಳ ಯುದ್ಧದ ಕಥೆಯನ್ನ ಹೇಳಲಿದೆ.