Puneeth Rajkumar – ಪವರ್ ಆಫ್ ಅಪ್ಪು : ಲಕ್ಕಿ ಮ್ಯಾನ್ ಸಿನಿಮಾ ರಿಲೀಸ್ ಗೂ ಮುನ್ನವೇ ಹೊಸ ರೆಕಾರ್ಡ್..!!
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನೆಲ್ಲ ಅಗಲಿ ತಿಂಗಳುಗಳೇ ಕಳೆದಿದೆ.. ಈಗಲೂ ಅವರ ಅಗಲಿಕೆಯ ನೋವು ಮಾಸಿಲ್ಲ.. ಅಭಿಮಾನಿಗಳ ಹೃದಯಲ್ಲಿ ಅವರ ಸಮಾಜಮುಖಿ ಕಾರ್ಯಗಳ ಮೂಲಕ ಅಪ್ಪು ಇನ್ನೂ ಜೀವಂತವಾಗಿದ್ದಾರೆ..
ಪುನೀತ್ ರಾಜ್ ಕುಮಾರ್ ಅವರನ್ನ ಅಭಿಮಾನಿಗಳು ವಿಶೇಷವಾಗಿ ನೆನಯುತ್ತಿರುತ್ತಾರೆ.. ಡಾರ್ಲಿಂಗ್ ಕೃಷ್ಣ ನಟನೆಯ ಲಕ್ಕಿ ಮ್ಯಾನ್ ಸಿನಿಮಾ ಮೂಲಕ ಅಪ್ಪು ನಟನೆಯನ್ನ ಕೊನೆಯದಾಗಿ ಕಣ್ತುಂಬಿಕೊಳ್ಳುವ ಭಾಗ್ಯ ಸಿಕ್ಕಿದೆ.. ಲಕ್ಕಿ ಮ್ಯಾನ್ ನಲ್ಲಿ ಪುನೀತ್ ರಾಜ್ ಕುಮಾರ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ… ಆದ್ರೆ ಅಪ್ಪು ಈ ಸಿನಿಮಾದಲ್ಲಿ ನಟಿಸಿರುವ ಒಂದೇ ಒಂದು ಕಾರಣಕ್ಕೆ ಈ ಸಿನಿಮಾದ ಡಿಮ್ಯಾಂಡ್ ಹೆಚ್ಚಾಗಿದೆ..
ಈ ಸಿನಿಮಾದಲ್ಲಿ ದೇವರ ರೂಪದಲ್ಲಿ ಪುನೀತ್ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಪುನೀತ್ ಅಭಿನಯದ ಕೊನೆಯ ಸಿನಿಮಾ ಇದಾಗಿದೆ.. ಇದು ಬಿಟ್ಟರೆ ಅವರ ಡಾಕ್ಯುಮೆಂಟರಿ ಸಿನಿಮಾ ಗಂಧದ ಗುಡಿ ಕೂಡ ಕನ್ನಡ ರಾಜ್ಯೋತ್ಸವದ ವೇಳೆಗೆ ಥಿಯೇಟರ್ ಗಳಲ್ಲಿ ರಿಲೀಸ್ ಆಗಲಿದೆ,.,.
ಲಕ್ಕಿ ಮ್ಯಾನ್ ಸಿನಿಮಾದ ವಿತರಣೆ ಹಕ್ಕು ಒಂದೇ ದಿನ ಸೋಲ್ಡ್ ಔಟ್ ಆಗಿರುವುದು ಅಪ್ಪು ಪವರ್ ಗೆ ಮತ್ತೊಂದು ಸಾಕ್ಷಿ.. ನಾಗೇಂದ್ರ ಪ್ರಸಾದ್ ನಿರ್ದೇಶನದ ಈ ಸಿನಿಮಾದಲ್ಲಿ ಪುನೀತ್ ಮತ್ತು ಪ್ರಭುದೇವ ಒಂದು ಹಾಡಿನಲ್ಲಿ ಜೊತೆಯಾಗಿ ಸ್ಟೆಪ್ಸ್ ಹಾಕಿದ್ದಾರೆ.