Salaar : ಪ್ರಭಾಸ್ ಅಭಿನಯದ ‘ಸಲಾರ್’ ರಿಲೀಸ್ ಡೇಟ್ ಘೋಷಣೆ…!!!
ಪ್ಯಾನ್ ಇಂಡಿಯಾ ಇಂಡಿಯಾ ಸ್ಟಾರ್ ಪ್ರಭಾಸ್ ಅಭಿನಯದ ಸಲಾರ್ ಚಿತ್ರತಂಡ ಸ್ವಾತಂತ್ರ್ಯ ದಿನಾಚರಣೆಯಂದು ಅಭಿಮಾನಿಗಳಿಗೆ ಬಿಗ್ ಅಪ್ಡೇಟ್ ಕೊಟ್ಟಿದೆ. ಪ್ರಶಾಂತ್ ನೀಲ್ ನಿರ್ದೇಶನದ ಮಾಸ್ ಎಂಟರ್ ಟೈನ್ಮೆಂಟ್ ಸಿನಿಮಾ ಸೆಪ್ಟಂಬರ್ 28 2023 ರಂದು ತೆರೆಗೆ ಬರಲಿದೆ.
ರೆಬೆಲ್ ಸ್ಟಾರ್ ನ ಮಾಸ್ ಅಭಿಮಾನಿಗಳ ಈ ಚಿತ್ರದ ಅಪ್ಡೇಟ್ ಗಾಗಿ ಕಾದು ಕುಳಿತಿದ್ದರು. ಅದರಂತೆ ಚಿತ್ರತಂಡ ಇಂದು ಅಪ್ಡೇಟ್ ಕೊಟ್ಟಿದ್ದು ಮುಂದಿನ ವರ್ಷಕ್ಕೆ ಸಲಾರ್ ಬಿಡುಗಡೆ ಪಕ್ಕಾ ಆಗಿದೆ. ಈ ಕುರಿತು ಚಿತ್ರತಂಡ ಅಧಿಕೃತವಾಗಿ ಪೋಸ್ಟರ್ ಬಿಡುಗಡೆಯಾಗಿದೆ. ಚಿತ್ರದ ಪೋಸ್ಟರ್ ನಲ್ಲಿ ಪ್ರಭಾಸ್ ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಎರಡೂ ಕೈಯಲ್ಲಿ ಕತ್ತಿ ಹಿಡಿದು ರಕ್ತಸಿಕ್ತವಾಗಿ ಶತ್ರುಗಳನ್ನ ಚೆಂಡಾಡಿರುವಂತಹ ಮಾಸ್ ಪೋಸ್ಟರ್ ಬಿಡುಗಡೆಯಾಗಿದೆ.
ಕೆಜಿಎಫ್ ಎನ್ನುವಂತಹ ಬಿಗ್ ಸಿನಿಮಾದಲ್ಲಿ ಕೆಲಸ ಮಾಡಿದ್ದ ಬಹುತೇಕ ತಜ್ಞರು ಈ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ವಿಜಯ್ ಕಿರಂಗದೂರು ಬಂಡವಾಳ, ಪ್ರಶಾಂತ್ ನೀಲ್ ನಿರ್ದೇಶನ, ಭುವನ್ ಗೌಡ ಕ್ಯಾಮೆರಾ ವರ್ಕ್. ಮತ್ತೆ ಕೆಜಿಎಫ್ ನಂತಹ ಸಿನಿಮಾವನ್ನ ಸೃಷ್ಟಿಸುತ್ತಿದೆ.
ಇನ್ನೂ ಚಿತ್ರದಲ್ಲಿ ಶೃತಿ ಹಾಸನ್ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಜಗಪತಿ ಬಾಬು, ಪೃಥ್ವಿರಾಜ್ ಸುಕುಮಾರ್ ನಂತಹ ಮುಂತಾದ ಘಟಾನುಘಟಿಗಳು ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಅಂದ್ಹಾಗೆ ಇತ್ತೀಚೆಗೆ ಹರಿದಾಡಿದ ವದಂತಿಗಳ ಪ್ರಕಾರ ಈ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ಅತಿಥಿ ಪಾತ್ರವೊಂದ್ರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗ್ತಿದ್ದು , ಫ್ಯಾನ್ಸ್ ಮತ್ತಷ್ಟು ಎಕ್ಸೈಟ್ ಆಗಿದ್ದಾರೆ..