Darshan : ಕ್ರಾಂತಿ ಸಿನಿಮಾದ ಶೂಟಿಂಗ್ ಮುಗಿದು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಸಿನಿಮಾದ ಪ್ರಚಾರದಲ್ಲಿ ಸಿನಿಮಾ ತಂಡ ಬ್ಯುಸಿಯಾಗಿದೆ..
ಈ ನಡುವೆ ಡಿ ಬಾಸ್ ಹಾಗೂ ಅಪ್ಪು ಅಭಿಮಾನಿಗಳ ನಡುವೆ ಕೊಂಚ ಅಸಮಾಧಾನ ಮೂಡಿದ್ದ ವಿಚಾರ ಗೊತ್ತೇ ಇದೆ.. ಇದು ಈಗ ಕೊಂಚ ತಣ್ಣಗಾಗಿದೆ.. ಆದ್ರೂ ದರ್ಶನ್ ಯಾವುದಾದರೂ ಒಂದು ವಿಚಾರವಾಗಿ ಚರ್ಚೆಯಲ್ಲೇ ಇರುತ್ತಾರೆ..
ಇದೀಗ ಬಗ್ಗೆ ಮಾತನಾಡಿರೋ ಡಿ ಬಾಸ್ ನನಗೆ ಮಾತನಾಡೋದಕ್ಕೆ ಭಯವಾಗ್ತಿದೆ. ನಾನು ಏನು ಮಾತನಾಡಿದ್ರೂ ಕಾಂಟ್ರವರ್ಸಿಯಾಗುತ್ತೆ ಎಂದಿದ್ದಾರೆ..
75ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಿನ್ನೆ(ಆಗಸ್ಟ್ 15) ಸಂಜೆ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಹೆಚ್ಎಸ್ಆರ್ ಲೇಔಟ್ ನಲ್ಲಿ ನಡೆದ ತಿರಂಗ ರಾಗಾ ಕಾರ್ಯಕ್ರಮದಲ್ಲಿ ನಟ ದರ್ಶನ್ ಭಾಗವಹಿಸಿದ್ದರು.
ಈ ವೇಳೆ ಮಾತನಾಡುತ್ತಾ , ಸ್ವಾತಂತ್ರ್ಯ ದಿನಾಚರಣೆಯ ಅಂದಾಕ್ಷಣ ನಮಗೆ ಮೊದಲಿಗೆ ಕಾಣಿಸುವುದು ಗಾಂಧೀಜಿ, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್ ರಂತಹವರು. ಮುಂಚೂಣಿಯಲ್ಲಿ ಇದ್ದವರು ಎಲ್ಲರೂ ಕಾಣಿಸುತ್ತಾರೆ, ಆದರೆ ನನಗೆ ಈಗ ಹೇಳುವುದಕ್ಕೆ ಸ್ವಲ್ಪ ಭಯ ಕೂಡ ಆಗುತ್ತದೆ, ಯಾಕಂದ್ರೆ ಕಾಂಟ್ರವರ್ಸಿ ಕೂಡ ಆಗುತ್ತದೆ. ಕಾಂಟ್ರವರ್ಸಿಯಲ್ಲೇ ನಾನಿರೋದು ಆಕ್ಯ್ಚುಲಿ. ಮಾತೇತ್ತಿದ್ರೆ ಕಾಂಟ್ರವರ್ಸಿಯಲ್ಲಿ ಇರ್ತೀನಿ. ಇದಕ್ಕೆ ಕಾಂಟ್ರವರ್ಸಿ ಅಂದುಕೊಂಡರೂ ಪರವಾಗಿಲ್ಲ. ಮುಂಚೂಣಿಯಲ್ಲಿ ಗಾಂಧಿಜಿ ಸೇರಿದಂತೆ ಸಾಕಷ್ಟು ಜನರನ್ನು ನೋಡ್ತೀವಿ. ಆದರೆ ಅವರ ಹಿಂದೆ ಸಾಕಷ್ಟು ಜನ ಇದ್ದರು, ಅವರನ್ನು ನಾವು ನೆನಪಿಸಿಕೊಳ್ಳುವುದಿಲ್ಲ, ಅವರ ಹೆಸರು ಗೊತ್ತಿಲ್ಲ. ಆದರೆ ಈ ವೇದಿಕೆ ಮೇಲೆ ಆ ರೀತಿ ಸ್ವಾತಂತ್ರ್ಯಕ್ಕಾಗಿ ಹಿಂದಿನ ಸಾಲಿನಲ್ಲಿ ನಿಂತು ಹೋರಾಡಿದವರಿಗಾಗಿ ಎರಡು ನಿಮಿಷ ಮೌನಾಚರಣೆ ಮಾಡಿದರೆ ಅವರಿಗೆ ಬೆಲೆ ಸಿಗುತ್ತದೆ ಎಂದರು.
ಅಲ್ಲದೇ ನನ್ನಂಥ ಸಣ್ಣ ಕಲಾವಿರನ್ನು ಕಾಂಟ್ರವರ್ಸಿಯಲ್ಲಿ ಇರುವವರನ್ನು ಹರಸಿ ಬೆಳೆಸಿ. ವೇದಿಕೆ ಮುಂದೆ ಕೂಡ ನನ್ನ ಸೆಲೆಬ್ರೆಟಿಗಳು ಕ್ರಾಂತಿ ಪೋಸ್ಟರ್ ಹಿಡಿದುಕೊಂಡಿದ್ದೀರಾ ತುಂಬಾ ಥ್ಯಾಂಕ್ಸ್. ಕ್ರಾಂತಿ ಸಿನಿಮಾಗೆ ನಿಮ್ಮ ಬೆಂಬಲ ಜೀವನದಲ್ಲಿ ಯಾವತ್ತೂ ಮರೆಯೋದಿಲ್ಲ.
ನೀವು ಕೊಡುತ್ತಿರುವ ಪ್ರೀತಿ , ಬೆಂಬಲ ಯಾವಾಗಲೂ ಸಿನಿಮಾ ಮಾಡಲು ಹುಮ್ಮಸ್ಸು ಕೊಡುತ್ತದೆ. ಖಂಡಿತ ಕ್ರಾಂತಿ ಸಿನಿಮಾ ಮೋಸ ಮಾಡಲ್ಲ ಎಂದು ಆಶ್ವಾಸನೆ ಕೊಡ್ತೀನಿ. ನೀವು ಕಿರುಚೋಕೆ ಅರಚೋಕೆ ಕೂಗಾಡೋಕೆ ಎಲ್ಲಾ ಇದೆ, ಜೊತೆಗೆ ಸಣ್ಣ ನೀತಿಪಾಠ ಕೂಡ ಹೇಳಿದ್ದೀವಿ. ವಿದ್ಯೆ ಅಂದರೆ ಏನು, ಸರ್ಕಾರಿ ಶಾಲೆಗಳು ಏನಾಗುತ್ತಿದೆ ಅನ್ನುವುದರ ಬಗ್ಗೆ ಸಿನಿಮಾ, ಏನೋ ಎಕ್ಸ್ಟ್ರಾಡರಿನರಿಯಾಗಿ ಮಾಡಿದ್ದೀವಿ ಅಂತ ಅಲ್ಲ. ಇವತ್ತಿನ ಪರಿಸ್ಥಿತಿ ಇಟ್ಟುಕೊಂಡು ಮಾಡಿದ್ದೀವಿ. ನಿಮ್ಮ ಪ್ರೀತಿ ಪ್ರೋತ್ಸಾಹ ಕನ್ನಡ ಸಿನಿಮಾಗಳ ಮೇಲಿರಲಿ ಎಂದು ಮನವಿ ಮಾಡಿದ್ದಾರೆ..
ಅಷ್ಟೇ ಅಲ್ಲದೇ ಈ ವೇಳೆ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ದರ್ಶನ್ ಅವರಿಗೆ ಬೆಳ್ಳಿ ಗದೆಯನ್ನು ಉಡುಗೊರೆಯಾಗಿ ನೀಡಲಾಯ್ತು. ಆದ್ರೆ ಇದನ್ನ ನಿರಾಕರಿಸಿದ ದಾಸ ಈ ಗದೆ ಹಿಡಿದುಕೊಳ್ಳುವ ಯೋಗ್ಯತೆನೂ ನಮಗಿಲ್ಲ. ಆದರೆ ಅವರು ಪ್ರೀತಿಯಿಂದ ಕೊಟ್ಟಿದ್ದಾರೆ. ಹೆಚ್ಎಸ್ಆರ್ ಲೇಔಟ್ನಲ್ಲಿ ಯಾರು ಚೆನ್ನಾಗಿ ಓದುತ್ತಾರೋ ಅವರ ಮುಂದಿನ ವಿದ್ಯಾಭ್ಯಾಸಕ್ಕೆ ಇದನ್ನು ಕೊಟ್ಟು ಬಿಡಿ ಎಂದು ನಟ ದರ್ಶನ್ ಗದೆಯನ್ನು ವಾಪಸ್ ಕೊಟ್ಟರು.