Kanganga Ranouth : ಸಲ್ಮಾನ್ ರಶ್ದಿ ಮೇಲಿನ ದಾಳಿ ಜಿಹಾದಿ ಕೃತ್ಯ ಎಂದ ಕಂಗನಾ..!!
ಖ್ಯಾತ ಅಂತರಾಷ್ಟ್ರೀಯ ಬರಹಗಾರರಾದ ಸಲ್ಮಾನ್ ರಶ್ದಿ ಮೇಲಿನ ದಾಳಿಯನ್ನ ಅನೇಕೆರು ತೀವ್ರವಾಗಿ ಖಂಡಿಸಿದ್ದಾರೆ.. ಬಾಲಿವುಡ್ ನ ಕ್ವೀನ್ ಕಂಗನಾ ರಣೌತ್ ಸಹ ಇದೀಗ ಈ ಬಗ್ಗೆ ಪ್ರತಿಕ್ರಿಯೆ ನೀಡಿ ಆಕ್ರೋಶ ಹೊರಹಾಕಿದ್ದಾರೆ..
ಇದೊಂದು ಜಿಹಾದಿ ದಾಳಿ ಎಂದುಕಿಡಿಕಾರಿದ್ದಾರೆ. ಅಮೆರಿಕಾದ ನ್ಯೂಯಾರ್ಕ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಉಪನ್ಯಾಸ ನೀಡಲು ತೆರಳಿದ ವೇಳೆ ಲೇಖಕ ಸಲ್ಮಾನ್ ರಶ್ದಿ ಮೇಲೆ ಅಗಂತುಕನೊಬ್ಬ ದಾಳಿ ನಡೆಸಿ ಚೂರಿ ಇರಿದಿದ್ದ, ಅವರನ್ನು ಕೂಡಲೇ ಏರ್ ಲಿಫ್ಟ್ ಮೂಲಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.. ಆದ್ರೆ ಅವರ ರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗ್ತಿದೆ..
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಂಗನಾ ಜಿಹಾದಿಗಳು ಮತ್ತೊಂದು ಭಯಾನಕ ಕೃತ್ಯ ಎಸಗಿದ್ದಾರೆ. ಸ್ಯಾಟಾನಿಕ್ ವರ್ಸಸ್ ಈ ಸಮಯದ ಶ್ರೇಷ್ಠ ಪುಸ್ತಕಗಳಲ್ಲಿ ಒಂದು. ಅಕ್ಷರಗಳಲ್ಲಿ ಹಿಡಿದಿಡಲಾರದಷ್ಟು ಈ ಘಟನೆ ನನ್ನನ್ನು ಅಲುಗಿಸಿದೆ. ಇದು ಅತ್ಯಂತ ಭಯಾನಕ ಕೃತ್ಯ ಎಂದು ಕಂಗನಾ ಕಿಡಿಕಾರಿದ್ಧಾರೆ..
ಅಂದ್ಹಾಗೆ ಬಾಲಿವುಡ್ ನಲ್ಲಿ ಹೊಸದಾಗಿ ಏನೇ ನ್ಯೂಸ್ ಆದ್ರೂ ಅಲ್ಲಿ ನಟಿ ಕಂಗನಾ ರಣಾವತ್ ಅಭಿಪ್ರಾಯ ಇದ್ದೇ ಇರುತ್ತೆ. ಕಡ್ಡಿ ತುಂಡು ಮಾಡಿದಂತೆ ಮಾತನಾಡುವ ಶೈಲಿಯಿಂದ ಮೆಚ್ಚುಗೆ, ಟೀಕೆ ಎರಡಕ್ಕೂ ಒಳಗಾಗಿದ್ದಾರೆ… ಅಂದ್ಹಾಗೆ ವಿವಾದಕ್ಕೂ ಕಂಗನಾಗೂ ಅದೇನೋ ಅವಿನಾಭಾವ ಸಂಬಂಧವಿದೆ.. ಜೊತೆಗೆ ಕೆಲವೊಮ್ಮೆ ತಮಗೆ ತಪ್ಪನಿಸಿದ್ದನ್ನ ನೇರ ನೇರವಾಗಿ ಹೇಳಿಬಿಡುತ್ತಾರೆ..