5 ನೇ ದಿನವೂ ಬಾಕ್ಸ್ ಆಫೀಸ್ ನಲ್ಲಿ ಲಾಲ್ ಸಿಂಗ್ ಚಡ್ಡಾ ಟುಸ್ …!!! KGF 2 ಗೆ ಟಕ್ಕರ್ ಕೊಡೋಕಾಗ್ತಿತ್ತಾ..??
ಬಾಲಿವುಡ್ ನ ನಸೀಬ್ ಖರಾಬ್ ಆಗಿದೆ.. ಇದು ಮತ್ತೊಮ್ಮೆ ಸಾಬೀತಾಗಿದೆ.. ಕಳೆದ 2 ವರ್ಷಗಳಲ್ಲಿ ಕಾಶ್ಮೀರ್ ಫೈಲ್ಸ್ ಬಿಟ್ರೆ ಇನ್ನೆಲ್ಲಾ ಸಿನಿಮಾಗಳು ಡಿಸಾಸ್ಟರ್ ,, ಫ್ಲಾಪ್ ಆಗಿವೆ.. ಸ್ಟಾರ್ ಗಳ ಸಿನಿಮಾಗಲೂ , ಬಿಗ್ ಬಜೆಟ್ ಸಿನಿಮಾಗಳು ಫೇಲ್ ಆಗಿವೆ… ಬಾಲಿವುಡ್ ಮುಂದೆ ಸೌತ್ ಸಿನಿಮಾಗಳು ಆರ್ಭಟಿಸುತ್ತಿವೆ.. RRR , ಪುಷ್ಪ , KGF 2 , ವಿಕ್ರಮ್ , ಚಾರ್ಲಿ , ವಿಕ್ರಾಂತ್ ರೋಣ , ಸೀತಾ ರಾಮಂ ಮುಂದೆ ಬಾಲಿವುಡ್ ಸಿನಿಮಾಗಳು ಮಕಾಡೆ ಮಲಗಿವೆ.. ಈಗೇನಿದ್ರೂ ಸೌತ್ ದೇ ಅಬ್ಬರವಾಗಿದೆ..
ಆದ್ರೂ ಒಂದಷ್ಟು ನಿರೀಕ್ಷೆ ಇಟ್ಟುಕೊಂಡು ತೆರೆಗೆ ಅಪ್ಪಳಿಸಿರುವ ಸಿನಿಮಾ ಬಾಲಿವುಡ್ ಬಹುನಿರೀಕ್ಷೆಯ ಅಮಿರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ.. ಈ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆಯಿತ್ತಾದ್ರೂ ಸಿನಿಮಾ ನೀರಸ ಪ್ರದರ್ಶನ ಕಂಡಿದೆ.. 10 ವರ್ಷಗಳಲ್ಲೇ ಅಮಿರ್ ಖಾನ್ ಅವರ ಸಿನಿಮಾವೊಂದು ಮೊದಲ ದಿನ ಇಷ್ಟು ಕಡಿಮೆ ಮಟ್ಟದ ಗಳಿಕೆ ಕಂಡಿದೆ ಎನ್ನಲಾಗ್ತಿದೆ…
ಆರಂಭಿಕ ದಿನದಲ್ಲಿ 15-20 ಶೇಕಡಾ ಆಕ್ಯುಪೆನ್ಸಿಯನ್ನು ದಾಖಲಿಸಿದೆ ಎಂದು ವರದಿಯಾಗಿದೆ.
ಸಿನಿಮಾ ರಿಲೀಸ್ ಆಗಿ 5 ದಿನಗಳಲ್ಲಿ ಕೇವಲ 45-46 ರೂ ಗಳಿಸಿದೆ.. ಇದು ಅಮೀರ್ ಅವರ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾಗಿದ್ದು ಭಾರೀ ನಿರಾಸೆ ಮೂಡಿದೆ.. ಇದರಲ್ಲಿ ಕರೀನಾ ಕಪೂರ್ ಕೂಡ ನಟಿಸಿದ್ದಾರೆ.
ಅಮೀರ್ ಖಾನ್ ಮತ್ತು ಕರೀನಾ ಕಪೂರ್ ಅಭಿನಯದ ಚಿತ್ರವು ಆಗಸ್ಟ್ 11 ರಂದು ಬಿಡುಗಡೆಯಾಯಿತು ಇದು ಟಾಮ್ ಹ್ಯಾಂಕ್ಸ್ ಅವರ 1994 ರ ಫಾರೆಸ್ಟ್ ಗಂಪ್ನ ಅಧಿಕೃತ ಹಿಂದಿ ರಿಮೇಕ್ ಆಗಿದೆ.. ಅಂದ್ಹಾಗೆ ಇದೇ ಸಿನಿಮಾ ಜೊತೆಗೆ ರಿಲೀಸ್ ಆದ ಅಕ್ಷಯ್ ಕುಮಾರ್ ನಟನೆಯ ರಕ್ಷಾಬಂಧನ ಕೂಡ ಬಾಕ್ಸ್ ಆಫೀಸ್ ನಲ್ಲಿ ಸೋತಿದೆ.. ಇನ್ನೂ ಸುಮಾರು 10 ವರ್ಷಗಳಲ್ಲಿ ಬಾಕ್ಸ್ ಆಫೀಸ್ ನಲ್ಲಿ ಅತಿ ಕಳಪೆ ಆರಂಭ ಪಡೆದ ಅಮಿರ್ ಸಿನಿಮಾ ಇದಾಗಿದೆ..
ಅಂದ್ಹಾಗೆ ಏಪ್ರಿಲ್ 14 ಅಂದ್ರೆ KGF 2 ಸಿನಿಮಾ ರಿಲೀಸ್ ಆಗುವಾಗಲೇ ಈ ಸಿನಿಮಾ ಕೂಡ ರಿಲೀಸ್ ಆಗಬೇಕಿತ್ತು.. ಅಂದೇ ಸಿನಿಮಾ ರಿಲೀಸ್ ಮಾಡೋ ಪ್ಲಾನ್ ನಲ್ಲಿದ್ದರು ಅಮಿರ್ ಖಾನ್ ಆದ್ರೆ ಆ ನಂತರ ಅವರು ತಮ್ಮ ಇರಾದೆ ಬದಲಾಯಿಸಿಕೊಂಡರು.. ಪೋಸ್ಟ್ ಪೋನ್ ಮಾಡಿದರು.. ಇಂಡಿಯನ್ ಬಾಕ್ಸ್ ಆಫೀಸ್ ಶೇಕ್ ಮಾಡಿದ KGF 2 ಜೊತೆಗೆ ಅಮಿರ್ ಖಾನ್ ರ ಲಾಲ್ ಸಿಂಗ್ ಚಡ್ಡಾ ರಿಲೀಸ್ ಆಗಿದ್ರೆ ಏನ್ ಕಥೆ ಅನ್ನೋ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿದೆ..
ಅಂದ್ನಾಹಾಗೆ ಲ್ಕು ದಿನಕ್ಕೆ ಸಿನಿಮಾ ಗಳಿಸಿರುವುದು ಕೇವಲ 40 ಕೋಟಿಯಷ್ಟೆ. ಅಲ್ಲದೇ ಸಿನಿಮಾದ ನಿರ್ಮಾಪಕರಿಗೆ (ಸಹ ನಿರ್ಮಾಕರು ಅಮಿರ್ ಖಾನ್ ) ಲಾಸ್ ಆಗಿದೆ ಎಂದೆಲ್ಲಾ ಹೇಳಲಾಗ್ತಿದೆ… ಬಾಕ್ಸ್ ಆಫೀಸ್ ನಲ್ಲಿ ಸಿನಿಮಾ ಸೋತು ಹೋಗಿದೆ ಎಂಬ ಮಾತುಗಳ ನಡುವೆ ಸಿನಿಮಾ ವಿತರಣೆ ಮಾಡಿರುವ ವಿತರಕರು ತೀವ್ರ ನಷ್ಟ ಅನುಭವಿಸಿದ್ದು, ಹಣಕ್ಕಾಗಿ ಒತ್ತಾಯಿಸುತ್ತಿದ್ದಾರೆ ಎನ್ನಲಾಗುತ್ತಿದೆ.
ಆದರೆ ಈ ಸುದ್ದಿ ಸುಳ್ಳು ಎಂದು ತಿಳಿಸಿದೆ ಸಿನಿಮಾ ನಿರ್ಮಾಣ ಸಂಸ್ಥೆ ವೈಯೋಕಾಮ್ 18.. ಅಮಿರ್ ಖಾನ್ ಜೊತೆಗೂಡಿ ಜಂಟಿಯಾಗಿ ಈ ಸಿನಿಮಾವನ್ನ ನಿರ್ಮಾಣ ಮಾಡಿದ್ದ ವೈಯೋಕಾಮ್ 18 ಈ ಸಿನಿಮಾವನ್ನ ವಿತರಣೆ ಸಹ ಮಾಡಿತ್ತು.. ಇದೀಗ ಇದೇ ಸಂಸ್ಥೆ ಈ ಬಗ್ಗೆ ಸ್ಪಷ್ಟನೆ ನೀಡಿದೆ..
ಸಿನಿಮಾದಿಂದ ವಿತರಕರು ನಷ್ಟ ಹೋಗಿರುವ ಬಗ್ಗೆ ಹಾಗೂ ಆಮಿರ್ ಖಾನ್ ವಿರುದ್ಧ ಒತ್ತಡ ಹೇರುತ್ತಿರುವ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳು ಸುಳ್ಳು ಎಂದು ವೈಯೊಕಾಮ್ 18 ಸ್ಟುಡಿಯೋಸ್ ನ CEO ಅಜಿತ್ ಅಂಧಾರೆ ಸ್ಪಷ್ಟಪಡಿಸಿದ್ದಾರೆ.. ಜೊತೆಗೆ ಈ ಸಿನಿಮಾಕ್ಕೆ ಹೊರಗಿನ ಯಾವುದೇ ವಿತರಕರು ಇಲ್ಲ. ಈ ಸಿನಿಮಾವನ್ನು ಭಾರತ ಹಾಗೂ ವಿದೇಶದಲ್ಲಿ ವೈಯೋಕಾಮ್ 18 ಸ್ಟುಡಿಯೋಸ್ನವರೇ ವಿತರಣೆ ಮಾಡಿದ್ದಾರೆ. ಹಾಗಾಗಿ ವಿತರಕರು ಹಣ ವಾಪಸ್ಸಾತಿಗೆ ಒತ್ತಾಯಿಸುತ್ತಿದ್ದಾರೆ ಎಂಬ ಸುದ್ದಿ ಸುಳ್ಳು ಎಂದಿದ್ದಾರೆ.