Mollywood : ಅನೂಪ್ ಮೆನನ್ ‘ಕಿಂಗ್ ಫಿಶ್’ ಈ ದಿನ ಬರಲಿದೆ..!!!
‘ಪದ್ಮ’ ಚಿತ್ರದ ನಂತರ, ಮಾಲಿವುಡ್ ನಟ-ನಿರ್ದೇಶಕ ಅನೂಪ್ ಮೆನನ್ ತಮ್ಮ ಮುಂದಿನ ಪ್ರಾಜೆಕ್ಟ್ ‘ಕಿಂಗ್ ಫಿಶ್’ಗಾಗಿ ರಂಜಿತ್ ಮತ್ತು ದುರ್ಗಾ ಕೃಷ್ಣ ಅವರೊಂದಿಗೆ ಜೊತೆಯಾಗುತ್ತಿದ್ದಾರೆ. ಇತ್ತೀಚೆಗಷ್ಟೇ ನಿರ್ಮಾಪಕರು ಸೆಪ್ಟೆಂಬರ್ 16 ರಂದು ಚಿತ್ರದ ಬಿಡುಗಡೆಯ ದಿನಾಂಕವನ್ನು ಘೋಷಿಸಿದರು. ಅನೂಪ್ ಮೆನನ್ ತಮ್ಮ ಎರಡನೇ ನಿರ್ದೇಶನದ ಚಿತ್ರದ ಪೋಸ್ಟರ್ ಅನ್ನು ಫೇಸ್ ಬುಕ್ ನಲ್ಲಿ ಅನಾವರಣಗೊಳಿಸಿದ್ದಾರೆ.
ಸೆಪ್ಟೆಂಬರ್ 16 ರಂದು ಸಿನಿಮಾ ರಿಲೀಸ್ ಎಂದು ಬರೆದಿದ್ದಾರೆ. ‘ಕಿಂಗ್ ಫಿಶ್’ ಘೋಷಣೆಯಾದಾಗಿನಿಂದ, ಎರಡು ವರ್ಷಗಳಿಂದ ಚಿತ್ರದ ಬಗ್ಗೆ ಹೆಚ್ಚಿನ ಅಪ್ ಡೇಟ್ಸ್ ಸಿಕ್ಕಿರಲಿಲ್ಲ.. ದ್ರೆ ಈಗ ಅಭಿಮಾಣಿಗಳು ರಿಲೀಸ್ ಡೇಟ್ ತಿಳಿದು ಥ್ರಿಲ್ ಆಗಿದ್ದಾರೆ..
ಅನೂಪ್ ಮೆನನ್ ಬರೆದು ನಿರ್ದೇಶಿಸಿರುವ ‘ಕಿಂಗ್ ಫಿಶ್’ ಚಿತ್ರಕ್ಕೆ ‘ದಿ ಡಾಲ್ಫಿನ್ಸ್’ ಖ್ಯಾತಿಯ ಜಿಯಾನ್ ಶ್ರೀಕಾಂತ್ ಸಂಕಲನ ಮತ್ತು ಗಾಯತ್ರಿ ಸುರೇಶ್ ಮತ್ತು ರತೀಶ್ ವೇಗಾ ಸಂಗೀತವಿದೆ..
ಅನೂಪ್ ಮೆನನ್, ರಂಜಿತ್, ಪ್ರಶಾಂತ್ ಅಲೆಕ್ಸಾಂಡರ್, ನೆಲ್ಸನ್, ನಿರಂಜನ ಅನೂಪ್ ಮತ್ತು ಶಾಜು ಕೆಎಸ್ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.