ಕನ್ನಡ ಕಿರುತೆರೆಯಲ್ಲಿ ‘ ಅಶ್ವಿನಿ’ ನಕ್ಷತ್ರ ಧಾರಾವಾಹಿಯಲ್ಲಿ ಖಡಕ್ ಆಗಿ ಜೆಕೆ ಪಾತ್ರದಲ್ಲಿ ಮಿಂಚಿದ ಜೆಕೆ ಆ ನಂತರ ಬಿಗ್ ಬಾಸ್ ನಲ್ಲಿ ಗಮನ ಸೆಳೆದರು.. ಅಲ್ಲಿ ಫೇಮಸ್ ಆದರು.. ಆ ನಂತರ ಅವರು ಹಿಂದಿ ಇಂಡಸ್ಟ್ರಿಯಲ್ಲಿ ರಾವಣನಾಗಿ ಸಿಯಾ ಕಿ ರಾಮ್ ಧಾರಾವಾಹಿ ಮೂಲಕ ಮಿಂಚಿದರು..
ಕನ್ನಡ ಸಿನಿಮಾಗಳಲ್ಲೂ ಸಹ ನಟಿಸಿದ ಜೆಕೆ ಪ್ರಸ್ತುತ ಹಿಂದಿ ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ.. ಅಂದ್ಹಾಗೆ ಈಗ ಜೆಕೆ ಅಲಿಬಾಬಾ ಧಾರಾವಾಹಿಯಲ್ಲಿ ಖಡಕ್ ಖಳನಾಯಕನ ಪಾತ್ರದಲ್ಲಿ ಮಿಂಚಲು ಹೊರಟಿದ್ದಾರೆ.. ಹೌದು ಅಲಿಬಾಬಾದಲ್ಲಿ 40 ದರೋಡೆಕೋರರ ಗುಂಪಿನ ನಾಯಕ ಇಬ್ಲಿಸ್ ಪಾತ್ರದಲ್ಲಿ ಮಿಂಚಲು ಹೊರಟಿದ್ದು ಅವರ ಲುಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ..