Abatara Tulu Film : ಆಗಸ್ಟ್ 18 ಕ್ಕೆ ಥಿಯೇಟರ್ ಗಳಲ್ಲಿ ‘ಅಬತರ’
ತುಳು ಸಿನಿಮಾರಂಗದ ಬಹುನಿರೀಕ್ಷೆಯ ಸಿನಿಮಾವಾಗಿರುವ ‘ಅಬತರ’ ಸಿನಿಮಾ ಆಗಸ್ಟ್ 18 ರಂದು ರಿಲೀಸ್ ಆಗುತ್ತಿದೆ.. ಬೊಳ್ಳಿ ಮೂವೀಸ್ ಮತ್ತು ಅವಿಕ ಪ್ರೊಡಕ್ಷನ್ ನಲ್ಲಿ ಸಿನಿಮಾ ಮೂಡಿ ಬಂದಿದೆ.. ಆ18 ರಂದು ಸಿನಿಮಾ ಕರಾವಳಿಯಾದ್ಯಂತ ರಿಲೀಸ್ ಆಗಲಿದೆ ಎಂದು ನಟ ಹಾಗೂ ನಿರ್ದೇಶಕರೂ ಆಗಿರುವ ದೇವದಾಸ್ ಕಾಪಿಕಾಡ್ ಅವರು ತಿಳಿಸಿದ್ದಾರೆ..
ಅಂದ್ಹಾಗೆ ಸಮಾಜಕ್ಕೆ ಒಂದೊಳ್ಳೆ ಮೆಸೇಜ್ ಕೊಡುವ ಕಂಟೆಂಟ್ ಬೇಸ್ಡ್ ಸಿನಿಮಾವಿದಾಗಿದೆ.. ಈ ಬಗ್ಗೆ ನಟ ಅರ್ಜುನ್ ಕಾಪಿಕಾಡ್ ಮಾತನಾಡಿದ್ದು , ಅಬತರ ಸಿನಿಮಾ ಮಂಗಳೂರಿನಲ್ಲಿ ರೂಪವಾಣಿ , ಭಾರತ್ ಮಾಲ್, ಸಿನಿಪೊಲಿಸ್, ಪಿವಿಆರ್, ಮೂಡಬಿದ್ರೆಯಲ್ಲಿ ಅಮರಶ್ರೀ, ಬೆಳ್ತಂಗಡಿಯಲ್ಲಿ ಭಾರತ್, ಸುರತ್ಕಲ್ನಲ್ಲಿ ನಟರಾಜ್, ಸಿನಿಗ್ಯಾಲಕ್ಸಿ, ಉಡುಪಿಯಲ್ಲಿ ಕಲ್ಪನಾ, ಮಣಿಪಾಲದಲ್ಲಿ ಭಾರತ್ ಸಿನಿಮಾಸ್, ಐನಾಕ್ಸ್, ಕಾರ್ಕಳದಲ್ಲಿ ರಾಧಿಕಾ, ಪ್ಲಾನೆಟ್, ಪುತ್ತೂರಿನಲ್ಲಿ ಅರುಣಾ, ಸುಳ್ಯದಲ್ಲಿ ಸಂತೋಷ್ ಚಿತ್ರಮಂದಿರದಲ್ಲಿ ತೆರೆ ಕಾಣಲಿದೆ ಎಂದು ತಿಳಿಸಿದ್ದಾರೆ..
ಸಿನಿಮಾ ಮುಂಬೈ, ಬೆಂಗಳೂರು, ಕಾಸರಗೋಡು, ಮುಳ್ಳೇರಿಯ, ಸಕಲೇಶಪುರ, ಶುಂಠಿಕೊಪ್ಪ, ತೀರ್ಥಹಳ್ಳಿ, ಕುಂದಾಪುರ, ಶಿವಮೊಗ್ಗದಲ್ಲಿ ಸಹ ಬಿಡುಗಡೆಗೊಳ್ಳಲಿದೆ ಎಂದು ತಿಳಿಸಿದರು.
ಅಬತರ ಹಾಸ್ಯ ಪ್ರಧಾನ ಸಿನಿಮಾಗಿದೆ.. ದೇವದಾಸ್ ಕಾಪಿಕಾಡ್ ರಚಿಸಿದ್ದು, ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಆಕ್ಷನ್ ಕಿಂಗ್ ಅರ್ಜುನ್ ಕಾಪಿಕಾಡ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ.. ಅವರ ನಿರ್ದೇಶನದ ಚೊಚ್ಚಲ ಸಿನಿಮಾ ಇದಾಗಿದೆ..
ಸಿನಿಮಾದಲ್ಲಿ ನವೀನ್ ಡಿ.ಪಡಿಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರ್, ಸಾಯಿ ಕೃಷ್ಣ, ಸನಿಲ್ ಗುರು, ಚೇತನ್ ರೈ ಮಾಣಿ, ಲಕ್ಷ್ಮೀಶ್, ಸುನಿಲ್ ಚಿತ್ರಾಪುರ , ನಟಿ ( ನಾಯಕಿ ) ಗಾನ ಭಟ್, ಕ್ರಿಸ್ಟಿನಾ ಬಣ್ಣ ಹಚ್ಚಿದ್ದಾರೆ..
ಸಿನಿಮಾಗೆ ವಿಷ್ಣು ಪ್ರಸಾದ್ ಛಾಯಾಗ್ರಾಹಣವಿದೆ.. ನಿಖಿಲ್ ಸಾಲ್ಯಾನ್ ಬಂಡವಾಳ ಹೂಡಿದ್ದಾರೆ.. ಅಂದ್ಹಾಗೆ ಕಂಟೆಂಟ್ ಬೇಸ್ಡ್ ಸಿನಿಮಾಗಳನ್ನ ಮಾಡುವುದರಲ್ಲಿ ತುಳು ಸಿನಿಮಾರಂಗ ಸದಾ ಮುಂದಿರುತ್ತೆ.. ಒಂದೊಳ್ಳೆ ಮೆಸೇಜ್ ಕೊಡುವ ಸಿನಿಮಾಗಳನ್ನ ತುಳು ಇಂಡಸ್ಟ್ರಿಯಿಂದ ನಿರೀಕ್ಷೆ ಮಾಡಬಹುದು,.,