KGF 2 : ಗ್ರ್ಯಾಂಡ್ ಆಗಿ ಟಿವಿಗೆ ಎಂಟ್ರಿ ಕೊಡ್ತಿದ್ದಾರೆ ರಾಖಿ ಭಾಯ್ , ದಿನಾಂಕ ಕೂಡ ಫಿಕ್ಸ್..!!
ಯಶ್ ಅವರ ಕೆಜಿಎಫ್ 2 ಬಾಕ್ಸ್ ಆಫೀಸ್ನಲ್ಲಿ ಎಬ್ಬಿಸಿದ ತೂಫಾನ್ ಪ್ರಭಾವ ಕಡಿಮೆಯಾಗಿರಬಹುದು.. ಆದ್ರೆ ಕ್ರೇಜ್ ಇನ್ನೂ ಇದೆ.. ಹೀಗಾಗಿಯೇ KGF 3 ಅಪ್ ಡೇಟ್ಸ್ ಗಾಗಿ ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ಡಿಮ್ಯಾಂಡ್ ಮಾಡ್ತಲೇ ಇರುತ್ತಾರೆ.. ಕೆಜಿಎಫ್ 3 ಗಾಗಿ ಕಾಯ್ತಿರುವುದೇ ಸಾಕ್ಷಿ.. ಸಿನಿಮಾ ಒಟಿಟಿಯಲ್ಲೂ ಭರ್ಜರಿ ಸೌಂಡ್ ಮಾಡಿದೆ..
ವಿಶ್ವಾದ್ಯಂತ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಭಾರತೀಯ ಸಿನಿಮಾವೆಂಬ ಹೆಗ್ಗಳಿಕೆ ನಮ್ಮ ಕನ್ನಡದ KGF 2 ಸಿನಿಮಾದ್ದು.. ದಾಖಲೆಗಳ ಮೇಲೆ ದಾಖಲೆ ಬರೆದು ಬಿಗ್ ಬಜೆಟ್ ಸಿನಿಮಾಗಳ ರೆಕಾರ್ಡ್ ಧೂಳಿಪಟ ಮಾಡಿದ್ದ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ 1000 ಕೋಟಿ ಕಲೆಕ್ಷನ್ ದಾಟಿತ್ತು..
ಅಂದ್ಹಾಗೆ ರಾಕಿ ಭಾಯ್ ಇದೀಗ ಟಿವಿಯಲ್ಲಿ ಅಬ್ಬರಿಸೋದಕ್ಕೆ ಸಜ್ಜಾಗ್ತಿದ್ದಾರೆ..
ಹೌದು..! KGF 2 ಶೀಘ್ರವೇ ಟಿವಿಯಲ್ಲಿ ಪ್ರಸಾರವಾಗಲಿದೆ.. ಭರ್ಜರಿಯಾಗಿ ಪ್ರಚಾರವವನ್ನ ಸಹ ಮಾಡಲಾಗ್ತಾಯಿದೆ.. ಅಂದ್ಹಾಗೆ ಸಿನಿಮಾ ಟಿವಿಗೆ ಬರೋ ದಿನಾಂಕವನ್ನೂ ಬಹಳ ದ್ಧೂರಿಯಾಗಿಯೇ ಘೋಷಣೆ ಮಾಡಿದೆ ವಾಹಿನಿ.. ಜೀ ಕನ್ನಡ ವಾಹಿನಿ ಕೆಜಿಎಫ್ 2 ಸಿನಿಮಾದ ಹಕ್ಕುಗಳನ್ನು ಪಡೆದಿದೆ..ಅವನು ಬರ್ತಿದ್ದಾನೆ, ಅದೂ ಒನ್ ವೇ ನಲ್ಲಿ ಎಂದು ಕ್ಯಾಪ್ಸನ್ ಕೊಟ್ಟು ಪ್ರೋಮೋ ಹಾಕುತ್ತಾ ಪ್ರಚಾರ ಮಾಡಲು ಶುರು ಮಾಡಿಬಿಟ್ಟಿದೆ..
ಇದೇ ಆಗಸ್ಟ್ 20 ರಂದು ಸಂಜೆ 7 ಗಂಟೆಗೆ ಜೀ ಕನ್ನಡ ‘ಕೆಜಿಎಫ್ 2’ ಸಿನಿಮಾವನ್ನು ಪ್ರಸಾರ ಮಾಡುತ್ತಿದೆ.