Biggboss kannada Ott : 7 ವರ್ಷ ಮದುವೆಯಾಗಲ್ಲ , ರಾಕಿ ಫ್ರೆಂಡ್ ಅಷ್ಟೇ : ಸೋನು ಗೌಡ
ಬಿಗ್ ಬಾಸ್ ಕನ್ನಡ ಒಟಿಟಿ ಸೀಸನ್ 1 ರಲ್ಲಿನ ಕಂಟೆಸ್ಟೆಂಟ್ ಗಳು ಎಲ್ಲರೂ ವಿಭಿನ್ನ ವ್ಯಕತಿತ್ವದವರು , ವಿವಿಧ ಕ್ಷೇತ್ರಗಳಲ್ಲಿರುವವರು. ಈ ಬಾರಿ ಮನೆಯ ಹೈಲೇಟ್ ಸೋಷಿಯಲ್ ಮೀಡಿಯಾ ಸ್ಟಾರ್ ಸೋನು ಶ್ರೀನಿವಾಸ್ ಗೌಡ… ಮೊದಲನೇ ವಾರ ಮನೆಯಿಂದ ಹೊರಗೆ ಕಿರಣ್ ಹೊರ ನಡೆದಿದ್ದಾರೆ..
ಇದೀಗ 2 ನೇ ವರಾದಲ್ಲಿ ಮತ್ತಷ್ಟು ಮನೆ ವಾತಾವರಣ ಬದಲಾಗಿದೆ.. ಸೋಷಿಯಲ್ ಮೀಡಿಯಾ ಸ್ಟಾರ್ , ಟ್ರೋಲಿಗರ ಫೇವರೇಟ್ ಆಗಿರುವ ಸೋನು ಗೌಡ ಬಾರಿ ಬಿಗ್ ಬಾಸ್ ಮನೆಯ ಹೈಲೇಟ್ ಆಗಿದ್ದಾರೆ.. ಎಲ್ಲರ ಕಣ್ಗಳೂ ಅವರ ಮೇಲೆಯೇ ನೆಟ್ಟಿದೆ.. ಅಲ್ಲದೇ ಸೋನು ಗೌಡ ಸಹ ಹೇಗಾದ್ರೂ ಎಲ್ಲರ ಗಮನ ತಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ..
ಇದೀಗ ತಾನು 7 ವರ್ಷಗಳ ಕಾಲ ಮದುವೆಯಾಗಲ್ಲ ಎಂದಿದ್ದಾರೆ ಸೋನು ಶ್ರೀನಿವಾಸ್ ಗೌಡ.. ಹೌದು, ರಾಕಿ ಮೇಲಿನ ಅವರ ಫೀಲಿಂಗ್ ಗಾಸಿಪ್ ಬೆನ್ನಲ್ಲೇ ರಾಕೇಶ್ ಮೇಲೆ ಪ್ರೀತಿ ಇದೆಯಾ ಎಂದು ಸ್ಫೂರ್ತಿ ನೇರವಾಗಿ ಸೋನುಗೆ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಸೋನು ನೇರವಾಗಿ ಉತ್ತರಿಸಿದ್ದು, ರಾಕೇಶ್ ಒಳ್ಳೆಯ ಗೆಳೆಯ. ಹಾಗಂತ ನಾನು ಅವನ ಜತೆ ಟೈಮ್ ಪಾಸ್ ಮಾಡುತ್ತಿಲ್ಲ. ನನಗೆ ಒಬ್ಬ ಫ್ರೆಂಡ್ ಇದ್ದಾನೆ. ಅವನ ರೀತಿಯೇ ರಾಕೇಶ್ ಕಾಣುತ್ತಿದ್ದಾನೆ. ಹೀಗಾಗಿ ಅವನ ಜತೆ ಕ್ಲೋಸ್ ಆಗಿದ್ದೀನಿ. ನಾನು ಇಷ್ಟು ಬೇಗ ಮದುವೆ ಆಗಲ್ಲ. ಇನ್ನೂ 7 ವರ್ಷ ಮದುವೆಯಾಗಲ್ಲ ನಾನು. ನಾನು ಸಿನಿಮಾರಂಗದಲ್ಲಿ ಬೆಳೆಯಬೇಕು ಎಂದು ಹೇಳಿಕೊಂಡಿದ್ದಾರೆ.