ಬಿಗ್ ಬಾಸ್ ಕನ್ನಡ ಒಟಿಟಿ ಸೀಸನ್ 1 ರಲ್ಲಿನ ಕಂಟೆಸ್ಟೆಂಟ್ ಗಳು ಎಲ್ಲರೂ ವಿಭಿನ್ನ ವ್ಯಕತಿತ್ವದವರು , ವಿವಿಧ ಕ್ಷೇತ್ರಗಳಲ್ಲಿರುವವರು. ಈ ಬಾರಿ ಮನೆಯ ಹೈಲೇಟ್ ಸೋಷಿಯಲ್ ಮೀಡಿಯಾ ಸ್ಟಾರ್ ಸೋನು ಶ್ರೀನಿವಾಸ್ ಗೌಡ… ಮೊದಲನೇ ವಾರ ಮನೆಯಿಂದ ಹೊರಗೆ ಕಿರಣ್ ಹೊರ ನಡೆದಿದ್ದಾರೆ..
ಇದೀಗ 2 ನೇ ವರಾದಲ್ಲಿ ಮತ್ತಷ್ಟು ಮನೆ ವಾತಾವರಣ ಬದಲಾಗಿದೆ.. ಸೋಷಿಯಲ್ ಮೀಡಿಯಾ ಸ್ಟಾರ್ , ಟ್ರೋಲಿಗರ ಫೇವರೇಟ್ ಆಗಿರುವ ಸೋನು ಗೌಡ ಬಾರಿ ಬಿಗ್ ಬಾಸ್ ಮನೆಯ ಹೈಲೇಟ್ ಆಗಿದ್ದಾರೆ.. ಎಲ್ಲರ ಕಣ್ಗಳೂ ಅವರ ಮೇಲೆಯೇ ನೆಟ್ಟಿದೆ.. ಅಲ್ಲದೇ ಸೋನು ಗೌಡ ಸಹ ಹೇಗಾದ್ರೂ ಎಲ್ಲರ ಗಮನ ತಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ..
ರಾಕೇಶ್ ಮೇಲೆ ಫೀಲಿಂಗ್ಸ್ ಇದೆ ಎಂದು ಬಹಿರಂಗವಾಗಿ ಹೇಳಿದ್ದು , ಸ್ಪೂರ್ತಿ ಗೌಡ ಮೇಲೆ ಅಸಮಾಧಾನ ಹೀಗೆ ನಾನಾ ವಿಚಾರಗಳಿಂದ… ಇದೀಗ ಪುಟ್ಟ ಗೌರಿ ಮದುವೆ ಖ್ಯಾತಿಯ ಸಾನ್ಯಾ ಅಯ್ಯರ್ ಕಣ್ಣಲ್ಲಿ ನೀರು ತರಿಸಿದ್ದಾರೆ..
ಹೌದು..!
ಟಾಸ್ಕ್ ಆಡುವಾಗ ಸಾನ್ಯ ಜೊತೆಗೆ ಸೋನು ಕಿರಿಕ್ ಮಾಡಿದ್ದಾರೆ. ಬಿಗ್ ಬಾಸ್ ನೀಡಿದ್ದ ಲಿಪ್ ರೀಡಿಂಗ್ ಟಾಸ್ಕ್ ವೇಳೆ ಇಬ್ಬರ ನಡುವೆ ಕಿರಿಕ್ ಆಗಿದೆ..
ಎರಡು ಟೀಂ ಮಾಡಿ ಟಾಸ್ಕ್ ನೀಡಲಾಗಿತ್ತು. ಈ ಟಾಸ್ಕ್ ಪ್ರಕಾರ ಒಂದು ಟೀಂನಿಂದ ಇಬ್ಬರು ಆಟಕ್ಕೆ ಇಳಿಯಬೇಕು. ಒಬ್ಬರ ಕಿವಿಗೆ ಹೆಡ್ ಫೋನ್ ಹಾಕಿ ಸಾಂಗ್ ಹಾಕಲಾಗುತ್ತದೆ. ಎದುರು ಇದ್ದವರು ಬಿಗ್ ಬಾಸ್ ನೀಡಿದ ಲೈನ್ ನ ಜೋರಾಗಿ ಹೇಳಬೇಕು. ಹೆಡ್ ಫೋನ್ ಹಾಕಿಕೊಂಡವರು ಇದನ್ನು ಗೆಸ್ ಮಾಡಬೇಕು. ಈ ಆಟದಲ್ಲಿ ಸೋನು ಹಾಗೂ ಸಾನ್ಯಾ ಬ್ಬರೂ ಭಾಗವಹಿಸಿದ್ದರು..
ಸೋನು ಕಿವಿಗೆ ಹೆಡ್ಫೋನ್ ಹಾಕಿಕೊಂಡಿದ್ದರೆ , ಸಾನ್ಯಾ ಸಾಲುಗಳನ್ನ ಹೇಳಿದರು. ಆದರೆ ಸೋನು ಗೌಡ ಒಂದೇ ಒಂದು ವಾಕ್ಯವನ್ನು ಸಹ ಸರಿಯಾಗಿ ಹೇಳಲಿಲ್ಲ. ಹೆಡ್ ಫೋನ್ ನಲ್ಲಿ ಸಾಂಗ್ ಗಟ್ಟಿಯಾಗಿ ಕೇಳಿಸುತ್ತಿದೆ ಎಂದು ಹೇಳಿದ್ದು ಬಿಟ್ರೆ ಕನಿಷ್ಠ ಪಕ್ಷ ಗೆಸ್ ಮಾಡುವ ಪ್ರಯತ್ನವನ್ನೂ ಮಾಡಲಿಲ್ಲ.. ಇದರಿಂದ ಸಾನ್ಯಾ ಸಿಟ್ಟಾಗಿದ್ದಾರೆ..
ಇಬ್ಬರ ನಡುವೆ ಇದೇ ವಿಚಾರಕ್ಕೆ ಕಿರಿಕ್ ನಡೆದಿದೆ.. ಸೋನು ತನ್ನ ತಪ್ಪಿಲ್ಲ ಎಂದು ವಾದಿಸಿದ್ದಾರೆ.. ಅಲ್ಲದೇ ಸಾನ್ಯಾ ಮೇಲೆಯೇ ತಪ್ಪನ್ನ ತ್ತಿ ಹಾಕಿದ್ದಾರೆ.. ಸೋನು ಗೌಡ ವರ್ತನೆಯಿಂದಾಗಿ ಬೇಸರಗೊಂಡ ಸಾನ್ಯಾ ನೀನು ಲೂಸಾ ಎಂದು ಹೇಳುತ್ತಾ ಕಣ್ಣೀರಿಟ್ಟಿದ್ದಾರೆ.. ಆಗ ಇತರೇ ಸ್ಪರ್ಧಿಗಳು ಅವರನ್ನ ಸಮಾಧಾನ ಮಾಡಿದ್ದಾರೆ..