Karthikeya 2 : ರಕ್ಷಾ ಬಂಧನ್ ಮುಂದೆ ಗೆದ್ದು ಬೀಗಿದ ಕಾರ್ತಿಕೇಯ 2 …!!!
ಇತ್ತೀಚೆಗೆ ಬಾಲಿವುಡ್ ನಲ್ಲಿ ಎರಡು ಬಿಗ್ ಬಜೆಟ್ ಚಿತ್ರಗಳುಯ ಬಿಡುಗಡೆಯಾಗಿದ್ದವು ಅದರೆ ಬಿಗ್ ಬಜೆಟ್ ಚಿತ್ರಗಳ ಮುಂದೆ ದಕ್ಷಿಣದ ಸ್ಮಾಲ್ ಬಜೆಟ್ ಚಿತ್ರಗಳು ಸದ್ದು ಮಾಡುತ್ತಿವೆ. ಈ ಎರಡು ಚಿತ್ರಗಳಿಗೆ ತೆಲುಗಿನ ಕಾರ್ತಿಕೇಯ 2 ಚಿತ್ರ ಪೈಪೋಟಿ ನೀಡುತ್ತಿದೆ. ಕಾರ್ತಿಕೇಯ 2 ಚಿತ್ರದ ಎದುರು ನಿಲ್ಲಲು ರಕ್ಷಾ ಬಂಧನ ಸಿನಿಮಾ ತಡಕಾ*ಡುತ್ತಿದೆ. ಈ ಮೂಲಕ ಬಾಲಿವುಡ್ ಗೆ ಮತ್ತೊಮ್ಮೆ ಪೈಪೊಟಿ ಕೊಡುತ್ತಿದೆ ಸೌತ್ ಸಿನಿಮಾ.
ಬಾಲಿವುಡ್ನ ಕಿಲಾಡಿ ಕುಮಾರ್ ಅಭಿನಯದ ‘ರಕ್ಷಾ ಬಂಧನ’ ಬಿಡುಗಡೆಯಾದ ಎರಡು ದಿನಗಳ ನಂತರ ಬಿಡುಗಡೆಯಾದ ತೆಲುಗು ನಿಖಿಲ್ ಸಿದ್ಧಾರ್ಥ್ ಅವರ ‘ಕಾರ್ತಿಕೇಯ 2’ ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ ಒಳ್ಳೆ ಕಮಾಯಿ ಮಾಡುತ್ತಿದೆ. ಕೇವಲ 53 ಸ್ಕ್ರೀನ್ ಗಳಲ್ಲಿ ಬಿಡುಗಡೆಯಾಗಿದ್ದ ಚಿತ್ರ ಇದೀಗ 1500 ಸ್ಕ್ರೀನ್ ಗಳಿಗೆ ಪ್ರದರ್ಶನವನ್ನ ಹೆಚ್ಚಿಸಿಕೊಳ್ಳುತ್ತಿದೆ.
ಒಂದೆಡೆ ಕಾರ್ತಿಕೇಯ 2 ಹಿಟ್ ಆಗುತ್ತಿದ್ದರೆ ರಕ್ಷಾ ಬಂಧನ್ ಫ್ಲಾಫ್ ನತ್ತ ಮುಖಮಾಡಿದೆ. ಕಾರ್ತಿಕೇಯ ಸ್ಕ್ರೀನ್ ಹೆಚ್ಚಿಸಿಕೊಂಡಿದ್ದು ರಕ್ಷಾಬಂಧನ ಗಳಿಕೆಯ ಮೇಲೆ ಸ್ಪಷ್ಟ ಪರಿಣಾಮ ಬೀರಿದೆ. 7 ದಿನದಲ್ಲಿ ರಕ್ಷಾ ಬಂಧನದ ಗಳಿಗೆ 38 ಕೋಟಿಯಾಗಿದ್ದರೆ, ಕಾರ್ತಿಕೇಯಾ ಚಿತ್ರ ಕೇವಲ 5 ದಿನದಲ್ಲಿ 24 ಕೊಟಿ ಗಳಿಸಿದೆ.