ಬಾಲಿವುಡ್ ನ ನಸೀಬ್ ಖರಾಬ್ ಆಗಿದೆ.. ಇದು ಮತ್ತೊಮ್ಮೆ ಸಾಬೀತಾಗಿದೆ.. ಕಳೆದ 2 ವರ್ಷಗಳಲ್ಲಿ ಕಾಶ್ಮೀರ್ ಫೈಲ್ಸ್ ಬಿಟ್ರೆ ಇನ್ನೆಲ್ಲಾ ಸಿನಿಮಾಗಳು ಡಿಸಾಸ್ಟರ್ ,, ಫ್ಲಾಪ್ ಆಗಿವೆ.. ಸ್ಟಾರ್ ಗಳ ಸಿನಿಮಾಗಲೂ , ಬಿಗ್ ಬಜೆಟ್ ಸಿನಿಮಾಗಳು ಫೇಲ್ ಆಗಿವೆ… ಬಾಲಿವುಡ್ ಮುಂದೆ ಸೌತ್ ಸಿನಿಮಾಗಳು ಆರ್ಭಟಿಸುತ್ತಿವೆ.. RRR , ಪುಷ್ಪ , KGF 2 , ವಿಕ್ರಮ್ , ಚಾರ್ಲಿ , ವಿಕ್ರಾಂತ್ ರೋಣ , ಸೀತಾ ರಾಮಂ ಮುಂದೆ ಬಾಲಿವುಡ್ ಸಿನಿಮಾಗಳು ಮಕಾಡೆ ಮಲಗಿವೆ.. ಈಗೇನಿದ್ರೂ ಸೌತ್ ದೇ ಅಬ್ಬರವಾಗಿದೆ..
ಆದ್ರೂ ಒಂದಷ್ಟು ನಿರೀಕ್ಷೆ ಇಟ್ಟುಕೊಂಡು ತೆರೆಗೆ ಅಪ್ಪಳಿಸಿರುವ ಸಿನಿಮಾ ಬಾಲಿವುಡ್ ಬಹುನಿರೀಕ್ಷೆಯ ಅಮಿರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ.. ಈ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆಯಿತ್ತಾದ್ರೂ ಸಿನಿಮಾ ನೀರಸ ಪ್ರದರ್ಶನ ಕಂಡಿದೆ.. 10 ವರ್ಷಗಳಲ್ಲೇ ಅಮಿರ್ ಖಾನ್ ಅವರ ಸಿನಿಮಾವೊಂದು ಮೊದಲ ದಿನ ಇಷ್ಟು ಕಡಿಮೆ ಮಟ್ಟದ ಗಳಿಕೆ ಕಂಡಿದೆ ಎನ್ನಲಾಗ್ತಿದೆ…
ಇದಕ್ಕೆಲ್ಲಾ ಒಂದು ಪ್ರಮುಖ ಕಾರಣ ಬಾಯ್ಕಾಟ್ ಲಾಲ್ ಸಿಂಗ್ ಚಡ್ಡಾ , ಬಾಯ್ಕಾಟ್ ಬಾಲಿವುಡ್ , ಬಾಯ್ಕಾಟ್ ಅಮಿರ್ ಖಾನ್ , ಬಾಯ್ಕಾಟ್ ಕರೀನಾ ಕಪೂರ್ ಖಾನ್ ಟ್ರೆಂಡ್ ಗಿದ್ದು… ಈ ಟ್ರೆಂಡ್ ಗೆ ಅವರದ್ದೇ ಹೇಳಿಕೆಗಳೇ ಕಾರಣ ಕೂಡ..
ಅಂದ್ಹಾಗೆ ಬಾಲಿವುಡ್ ನಲ್ಲಿ ಬಾಯ್ಕಾಟ್ ಬಿಸಿ ಸರಿಯಾಗಿಯೇ ತಟ್ಟಿದೆ.. ಯಾವ ಬಾಲಿವುಡ್ ಸಿನಿಮಾಗಳು ಬರಲಿ ಬಾಯ್ಕಾಟ್ ಗೆ ಒಳಗಾಗುತ್ತಿವೆ.,.
ಬಾಯ್ಕಾಟ್ ಗೆ ಪ್ರಮುಖವಾಗಿ ಖಾನ್ ಗಳ ಸಿನಿಮಾಗಳೇ ಟಾರ್ಗೆಟ್ ಆಗಿವೆ.. ಈ ಖಾನ್ ಗಳ ಸಿನಿಮಾಗಳನ್ನ ಬಹಿಷ್ಕರಿಸಬೇಕು ಎಂಬ ಕೂಗು ಕೇಳಿ ಬರುತ್ತಿರುವ ಬೆನ್ನಲ್ಲೇ ನಿರ್ಮಾಪಕಿ ಏಕ್ತಾ ಕಪೂರ್ ಬಾಯ್ಕಾಟ್ ಬಗ್ಗೆ ಮಾತನಾಡಿದ್ದಾರೆ.
ಸಿನಿಮಾ ಜಗತ್ತಿಗೆ ಅತ್ಯುತ್ತಮ ಸಿನಿಮಾಗಳನ್ನ ಕೊಡುಗೆ ಕೊಟ್ಟಿರುವರನ್ನು ಬಹಿಷ್ಕರಿಸುವುದು ವಿಚಿತ್ರ ಸಂಗತಿ. ಇಂಡಸ್ಟ್ರಿಯಲ್ಲಿ ಸಲ್ಮಾನ್ ಖಾನ್, ಶಾರುಖ್ ಖಾನ್, ಆಮೀರ್ ಖಾನ್ ಚಿತ್ರರಂಗದ ದಂತಕಥೆಗಳು. ನಾವು ಅವರನ್ನು ಬಹಿಷ್ಕರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಈ ಹಿಂದೆ ಬಾಯ್ಕಾಟ್ ಬಗ್ಗೆ ಮಾತನಾಡ್ತಾ ನಟ ಅರ್ಜುನ್ ಕಪೂರ್ ಕೂಡ ಸಿಡಿದೆದ್ದಿದ್ದರು.. ಬಾಯ್ಕಾಟ್ ಟ್ರೆಂಡ್ ಯಾರಿಗೂ ಒಳ್ಳೆಯದಲ್ಲ. ಇದರಿಂದ ಅದೆಷ್ಟು ಕುಟುಂಬಗಳ ನಾಶವಾಗುತ್ತವೆ ಎನ್ನುವ ಅರಿವು ಹೋರಾಟ ಮಾಡುತ್ತಿರುವವರಿಗೆ ಇಲ್ಲ. ಅಲ್ಲದೇ, ಇಂತಿಷ್ಟೇ ಜನರನ್ನೇ ಅವರು ಟಾರ್ಗೆಟ್ ಮಾಡುತ್ತಿದ್ದಾರೆ. ಹೀಗಾಗಿ ಇದನ್ನು ಚಿಗುರಿನಲ್ಲೇ ಚಿವುಟ ಬೇಕು ಎಂದು ಹೇಳಿದ್ದರು.. ಇದೀಗ ಏಕ್ತಾ ಕಪೂರ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ..