ಶೂಟಿಂಗ್ ವೇಳೆ ಅನಾಹುತ : ಬಾಹುಬಲಿ ಖ್ಯಾತಿಯ ನಟ ನಾಸರ್ ಗೆ ಗಾಯ
ಬಾಹುಬಲಿ ಸಿನಿಮಾದಲ್ಲಿ ಬಿಜ್ಜಳದೇವನಾಗಿ ನೆಗೆಟಿವ್ ರೋಲ್ ನಲ್ಲಿ ಮಿಂಚಿದ್ದ ಖ್ಯಾತ ನಟ ನಾಸರ್ ಶೂಟಿಂಗ್ ವೇಳೆ ಸಂಭವಿಸಿದ ಅವಘಡದಲ್ಲಿ ಗಾಯಗೊಂಡಿದ್ಧಾರೆ..
ಇವರು ಕನ್ನಡ , ತೆಲುಗು , ತಮಿಳು ಸೇರಿದತೆ ಹಲವಾರು ಭಾಷೆಗಳಲ್ಲಿ ನಟಿಸಿ ಖ್ಯಾತಿ ಪಡೆದಿದ್ದಾರೆ.. ಶೂಟಿಂಗ್ ವೇಳೆ ನಟ ನಾಸರ್ ಅವರ ಕಣ್ಣಿಗೆ ಏಟಾಗಿದೆ.. ಹೀಗಾಗಿ ಅವರನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ..
ತೆಲಂಗಾಣ ಪೊಲೀಸ್ ಅಕಾಡಮಿಯಲ್ಲಿ ನಡೆದ ಶೂಟಿಂಗ್ ವೇಳೆ ಮೆಟ್ಟಿಲಿನಿಂದ ಬಿದ್ದ ನಾಸರ್ ಅವರಿಗೆ ಕಣ್ಣಿಗೆ ಬಲವಾದ ಪೆಟ್ಟು ಬಿದ್ದಿದೆ. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೇ ಗಾಯ ಗಂಭೀರವಾಗಿದ್ದು , ಅವರನ್ನ ಶಸ್ತ್ರ ಚಿಕಿತ್ಸೆಗೆ ಒಳಪಡಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ..
ಶೂಟಿಂಗ್ ವೇಳೆ ಸುಹಾಸಿನಿ ಮಣಿರತ್ನ, ಸಯ್ಯಾಜಿ ಶಿಂಧೆ ಸೇರಿದಂತೆ ಹಲವು ಕಲಾವಿದರು ಭಾಗಿಯಾಗಿದ್ದರು ಎನ್ನಲಾಗಿದೆ. ಮೆಟ್ಟಿಲಿನಿಂದ ಇಳಿದು ಬರುವ ದೃಶ್ಯವನ್ನು ನಿರ್ದೇಶಕರು ಸೆರೆ ಹಿಡಿಯುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ ಎನ್ನಲಾಗುತ್ತಿದೆ.. ಸದ್ಯಕ್ಕೆ ಸಿಕ್ಕಿರುವ ಮಾಹಿತಿಯಂತೆ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿರೋದಾಗಿ ಗೊತ್ತಾಗಿದೆ..