Vijay Devarakonda : ವಿಜಯ್ ದೇವರಕೊಂಡ ಮನೆಯಲ್ಲಿ ಪೂಜೆಯಲ್ಲಿ ಕಾಣಿಸಿಕೊಂಡ ಅನನ್ಯ ಪಾಂಡೆ…!!!
ಪೂರಿ ಜಗನ್ನಾಥ್ ನಿರ್ದೇಶನದಲ್ಲಿ ರೌಡಿ ಹೀರೋ ವಿಜಯ್ ದೇವರಕೊಂಡ, ಬಾಲಿವುಡ್ ಬ್ಯೂಟಿ ಅನನ್ಯ ಪಾಂಡೆ ನಟಿಸಿರುವ ಪಾನ್ ಇಂಡಿಯಾ ಸಿನಿಮಾ
ಲೈಗರ್.
ಆಗಸ್ಟ್ 25 ರಂದು ಈ ಸಿನಿಮಾ ಪ್ರಪಂಚದಾದ್ಯಂತ ರಿಲೀಸ್ ಆಗಲಿದೆ.
ಸಿನಿಮಾದ ಪ್ರಚಾರದಲ್ಲಿ ಸಿನಿಮಾತಂಡ ತೊಡಗಿದೆ.. ಕೆಲ ದಿನಗಳ ಹಿಂದಷ್ಟೇ ವಿಜಯ್ ದೇವರಕೊಂಡ ಅವರ ಹಾಟ್ ಫೋಟೋ ಶೇರ್ ಮಾಡಿ ಫ್ಯಾನ್ಸ್ ನಡುವೆ ಸಂಚಲನ ಸೃಷ್ಟಿಸಿದ್ದ ಸಿನಿಮಾತಂಡ ಟ್ರೇಲರ್ ಸಹ ರಿಲೀಸ್ ರಿಲೀಸ್ ಮಾಡಿದ್ದು , ಯೂಟ್ಯೂಬ್ ನಲ್ಲಿ ಟ್ರೇಲರ್ ಧೂಳೆಬ್ಬಿಸುತ್ತಿದೆ..
ಪೋಸ್ಟರ್ ಗಳಿಂದಲೇ ನಿರೀಕ್ಷೆ ಹೆಚ್ಚಿಸಿದ್ದ ಲೈಗರ್ ಟ್ರೇಲರ್ ಈಗ ಸಿನಿಮಾ ಮೇಲಿನ ಕ್ಯೂರಿಯಾಸಿಟಿಯನ್ನು ದುಪ್ಪಟ್ಟು ಮಾಡಿದೆ.
ಮಾಸ್ ಲುಕ್ ನಲ್ಲಿ ವಿಜಯ್ ದೇವರಕೊಂಡ ಕಾಣಿಸಿಕೊಂಡಿದ್ದು, ವಿಜಯ್ ಗೆ ಜೋಡಿಯಾಗಿ ಬೋಲ್ಡ್ ಲುಕ್ ಅನನ್ಯಾ ಪಾಂಡೆ ನಟಿಸಿದ್ದಾರೆ.
ಅನನ್ಯ ಪಾಂಡೆ ಮತ್ತು ವಿಜಯ್ ದೇವರಕೊಂಡ ತಮ್ಮ ಮುಂಬರುವ ಪ್ಯಾನ್ ಇಂಡಿಯಾ ಚಿತ್ರ ಲೈಗರ್ ಪ್ರಚಾರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅಭಿಮಾನಿಗಳ ನಡುವೆ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ನಿರಂತರವಾಗಿ ಪ್ರಚಾರ ಮಾಡುತ್ತಿದ್ದಾರೆ. ಈಗ ಚಿತ್ರದ ಯಶಸ್ಸಿಗಾಗಿ ವಿಜಯ್ ದೇವರಕೊಂಡ ತಮ್ಮ ಹೈದರಾಬಾದ್ ಮನೆಯಲ್ಲಿ ಪೂಜೆ ನಡೆಸಿದ್ದಾರೆ. ಇದರಲ್ಲಿ ಅನನ್ಯ ಪಾಂಡೆ ಸಹ ಭಾಗವಹಿಸಿ ವಿಜಯ್ ತಾಯಿಯ ಆಶೀರ್ವಾದ ಪಡೆದಿದ್ದಾರೆ. ಈ ಚಿತ್ರಗಳನ್ನ ನಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ..
ಅನನ್ಯಾ ಪಾಂಡೆ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಕೆಲವು ಚಿತ್ರಗಳನ್ನ ಹಂಚಿಕೊಂಡಿದ್ದು, ವಿಜಯ್ ದೇವರಕೊಂಡ ಅವರೊಂದಿಗೆ ಅವರ ಮನೆಯಲ್ಲಿ ಕುಳಿತಿರುವುದನ್ ಕಾಣಬಹುದು. ಪೂಜೆಯ ನಂತರ ವಿಜಯ್ ದೇವರಕೊಂಡ ಅವರ ತಾಯಿ ಇಬ್ಬರಿಗೂ ಮಣಿಕಟ್ಟಿನ ಮೇಲೆ ರಕ್ಷಾ ಸೂತ್ರ ಕಟ್ಟಿದ್ದಾರೆ. ಈ ಪೋಸ್ಟ್ನಲ್ಲಿ ಗಮನಿಸಬೇಕಾದ ಅಂಶವೆಂದರೆ ಅನನ್ಯ ಪಾಂಡೆ ತಮ್ಮ ಪೋಸ್ಟ್ನಲ್ಲಿ ವಿಜಯ್ ದೇವರಕೊಂಡ ಅವರ ಫೇಕ್ ಇನ್ಸ್ಟಾ ಐಡಿಯನ್ನ ಟ್ಯಾಗ್ ಮಾಡಿದ್ದಾರೆ.
ಪುರಿ ಜಗನ್ನಾಥ್ ನಿರ್ದೇಶನದ ಲೈಗರ್ ಚಿತ್ರದಲ್ಲಿ ವಿಜಯ್ ಮತ್ತು ಅನನ್ಯಾ ಜೊತೆಗೆ ಹಿರಿಯ ನಟಿ ರಮ್ಯಾ ಕೃಷ್ಣನ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ ಮೈಕ್ ಟೈಸನ್ ಕೂಡ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ವಿಶೇಷವೆಂದರೆ ಹಿಂದಿ ಮತ್ತು ತೆಲುಗು ಎರಡರಲ್ಲೂ ಏಕಕಾಲಕ್ಕೆ ಚಿತ್ರೀಕರಣ ಮಾಡಲಾಗಿದೆ. ಚಿತ್ರವನ್ನು ಆಗಸ್ಟ್ 25 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.