Ashwin Gangaraju : ರಾಜಮೌಳಿ ಶಿಷ್ಯರಿಂದ “1770” ಪ್ಯಾನ್ ಇಂಡಿಯನ್ ಸಿನಿಮಾ ಘೋಷಣೆ..!!
ಇಂಡಿಯನ್ ಸಿನಿಮಾ ವೈವಿಧ್ಯ ಕಥೆಗಳಿಗಾಗಿ ಹುಡುಕುತ್ತಿದೆ. ಮುಖ್ಯವಾಗಿ ಜಾನಪದ, ಪೌರಾಣಿಕ, ಐತಿಹಾಸಿಕ ಕಥೆಗಳಿಗೆ ಜನರು ಹೆಚ್ಚು ಮಣೆ ಹಾಕುತ್ತಿದ್ದಾರೆ.
ಬಾಹುಬಲಿ, ಆರ್ ಆರ್ ಆರ್ ನಂತಹ ಸಿನಿಮಾಗಳು ದೊಡ್ಡ ಯಶಸ್ಸು ಸಾಧಿಸಿದ್ದೇ ಕಾರಣ. ಅದರಂತೆ ಎಸ್ ಎಸ್ ರಾಜಮೌಳಿ ಶಿಷ್ಯ ಅಶ್ವಿನ್ ಗಂಗರಾಜು 1770 ಅನ್ನೋ ಪಾನ್ ಇಂಡಿಯಾ ಸಿನಿಮಾವನ್ನು ಘೋಷಿಸಿದ್ದಾರೆ.
ಬಾಹುಬಲಿ ಮತ್ತು ಆರ್ಆರ್ಆರ್ ಚಿತ್ರದ ಬರಹಗಾರ ವಿಜಯೇಂದ್ರ ಪ್ರಸಾದ್ ಈ ಚಿತ್ರಕ್ಕೆ ಕಥೆ ಮತ್ತು ನಿರೂಪಣೆಯನ್ನು ಒದಗಿಸುತ್ತಿದ್ದಾರೆ, ಇದು ಖ್ಯಾತ ಬರಹಗಾರ ಬಕಿನ್ಚಂದ್ರ ಚಟರ್ಜಿ ಬರೆದ ಆನಂದಮತ್ ಕಾದಂಬರಿಯನ್ನು ಆಧರಿಸಿದೆ.
ಇದನ್ನು ಎಸ್ಎಸ್ 1 ಎಂಟರ್ಟೈನ್ಮೆಂಟ್ ಮತ್ತು ಪಿಕೆ ಎಂಟರ್ಟೈನ್ಮೆಂಟ್ ಬ್ಯಾನರ್ಗಳ ಅಡಿಯಲ್ಲಿ ಶೈಲೇಂದ್ರ ಕುವಾರ್, ಸುಜಯ್ ಕುಟ್ಟಿ, ಪಿ.ಕೃಷ್ಣಕುಮಾರ್ ಮತ್ತು ಸರಾಜ್ ಶರ್ಮಾ ನಿರ್ಮಿಸುತ್ತಿದ್ದಾರೆ.
ಈ ಸಿನಿಮಾ ತೆಲುಗು, ಕನ್ನಡ, ತಮಿಳು, ಹಿಂದಿ, ಮಲಯಾಳಂ, ಬೆಂಗಾಲಿ ಸೇರಿದಂತೆ ಹಲವು ಭಾಷೆಗಳಲ್ಲಿ ತಯಾರಾಗುತ್ತಿದೆ.
ನವರಾತ್ರಿ ಸಂದರ್ಭದಲ್ಲಿ ಈ ಸಿನಿಮಾಗೆ ಸಂಬಂಧಿಸಿದ ದೊಡ್ಡ ಅಪ್ ಡೇಟ್ ನೀಡುವುದಾಗಿ ಚಿತ್ರತಂಡ ತಿಳಿಸಿದೆ. ಅದೇ ರೀತಿ ಈ ಸಿನಿಮಾದಲ್ಲಿ ನಟಿಸಲಿರುವ ನಟ – ನಟೀಯರ ಮಾಹಿತಿ ಕೂಡ ಅಂದೇ ತಿಳಿಯಲಿದೆ.