Gaalipata 2 : ಗಾಳಿಪಟ 3 ಬರಲಿದ್ಯಾ..?? ಯೋಗರಾಜ್ ಭಟ್ ಹೇಳಿದ್ದೇನು..??
ಸ್ಯಾಂಡಲ್ ವುಡ್ ನಲ್ಲಿ ಗಾಳಿಪಟ 2 ಸಿನಿಮಾ ಸಖತ್ ಸೌಂಡ್ ಮಾಡ್ತಿದೆ.. ಯೋಗರಾಜ್ ಭಟ್ ಮತ್ತೆ ಗಣಿ ಕಾಂಬಿನೇಷನ್ ಮತ್ತೊಮ್ಮೆ ಮ್ಯಾಜಿಕ್ ಮಾಡಿದ್ದು , ಸಿನಿಮಾ ಉತ್ತಮ ಪ್ರದರ್ಶನ ಕಾಣ್ತಿದೆ.. ಈ ನಡುವೆ ಗಾಳಿಪಟ 3 ಗೆ ಒತ್ತಾಯ ಕೇಳಿಬರುತ್ತಿದ್ದು , ಗಾಳಿಪಟ 3 ಬರಲಿದ್ಯಾ ಎಂಬ ಪ್ರಶ್ನೆಗಳು ಮೂಡಿದೆ..
ಇತ್ತೀಚೆಗೆ ಸಿನಿಮಾತಂಡ ಸಿನಿಮಾದ ಸಕ್ಸಸ್ ಪಾರ್ಟಿ ಆಯೋಜನೆ ಮಾಡಿತ್ತು.. ಆಗ ಗಾಳಿಪಟ 3 ಕುರಿತಾದ ಪ್ರಶ್ನೆಗೆ ಯೋಗರಾಜ್ ಭಟ್ಟರು ಉತ್ತರಿಸಿದ್ದು ಹೀಗೆ…!!
‘ಗಾಳಿಪಟ , ಗಾಳಿಪಟ 2 ಸಿನಿಮಾಗಳ ಸಕ್ಸಸ್ ನಂತರ , ಗಾಳಿಪಟ 3 ಗಾಗಿ ಒತ್ತಾಯ ಕೇಳಿಬಂದಿದೆ. ಆ ರೀತಿ ಪ್ಲ್ಯಾನ್ ನಮಗೂ ಇದೆ ಎನ್ನುವ ಮೂಲಕ ಗಾಳಿಪಟ 3 ಬರುವ ಸುಳಿವು ನೀಡಿದ್ದಾರೆ ವಿಕಟಕವಿ ಯೋಗರಾಜ್ ಭಟ್ಟರು..