Liger : Mike Tyson : ಮೈಕ್ ಟೈಸನ್ ವೀಲ್ ಚೇರ್ ನಲ್ಲಿ ಕುಳಿತ ಫೋಟೋಗಳು ವೈರಲ್..!!!
ಲೆಜೆಂಡರಿ ಬಾಕ್ಸರ್ ಮೈಕ್ ಟೈಸನ್ ಕುರಿತ ಸುದ್ದಿಯೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಜಯ್ ದೇವರಕೊಂಡ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ‘ಲೈಗರ್’ನಲ್ಲಿ ಟೈಸನ್ ಪ್ರಮುಖ ಪಾತ್ರ ನಿರ್ವಹಿಸಿದ್ದು ಗೊತ್ತೇ ಇದೆ.
ಈ ಕ್ರಮದಲ್ಲಿ ಕೆಲ ದಿನಗಳ ಹಿಂದಿನವರೆಗೂ ಸಿನಿಮಾ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದ ಮೈಕ್ ಟೈಸನ್ ವೀಲ್ ಚೇರ್ ನಲ್ಲಿ ಓಡಾಡಲು ಸಾಧ್ಯವಾಗದೇ ಕುಳಿತಿರುವ ಫೋಟೋಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.
ಈ ಫೋಟೋಗಳನ್ನು ನೋಡಿದ ಅಭಿಮಾನಿಗಳು ಲೆಜೆಂಡರಿ ಬಾಕ್ಸರ್ ಗೆ ಏನಾಯಿತು ಎಂದು ಚಿಂತೆಗೀಡಾಗಿದ್ದಾರೆ. ಲೈಗರ್ ಶೂಟಿಂಗ್ ನಲ್ಲಿ ಫುಲ್ ಜೋಷ್ ನಲ್ಲಿ ಕಾಣಿಸಿಕೊಂಡಿದ್ದ ಟೈಸನ್, ಕೋಲು ಹಿಡಿದುಕೊಂಡು ವೀಲ್ ಚೇರ್ ನಲ್ಲಿ ಕುಳಿತುಕೊಂಡಿರುವುದು ಅಭಿಮಾನಿಗಳಲ್ಲಿ ಗೊಂದಲವನ್ನುಂಟು ಮಾಡಿದೆ.
ಈ ಪರಿಸ್ಥಿತಿಯ ಬಗ್ಗೆ ಟೈಸನ್ ಅವರನ್ನು ವಿಚಾರಿಸಿದಾಗ, ಅವರು ಕೆಲವು ಸಮಯದಿಂದ ಬೆನ್ನು ನೋವು ಮತ್ತು ಸಿಯಾಟಿಕಾದಿಂದ ಬಳಲುತ್ತಿದ್ದಾರೆ. ವೈದ್ಯರು ಟೈಸನ್ ಗೆ ವೀಲ್ ಚೇರ್ ಬಳಸಲು ಸಲಹೆ ನೀಡಿದ್ದಾರಂತೆ. ಹೀಗಾಗಿ ಅವರು ಕೆಲವು ದಿನಗಳ ಮಟ್ಟಿಗೆ ವೀಲ್ ಚೇರ್ ನಲ್ಲಿ ಇರಲಿದ್ದಾರೆ.