ಚಿತ್ರದ ಗುಣಮಟ್ಟವೇ ಹಿಟ್ ಅಥವಾ ಫ್ಲಾಪ್ ನಿರ್ಧರಿಸುತ್ತದೆ – ಆರ್ ಮಾಧವನ್
ಲಾಲ್ ಸಿಂಗ್ ಚಡ್ಡಾ ಸಿನಿಮಾದ ನೀರಸ ಪ್ರದರ್ಶನದ ನಂತರ ಬಿ ಟೌನ್ ಸೆಲೆಬ್ರಿಟಿಗಳು ಒಬ್ಬೊಬ್ಬರಾಗಿ ಬಾಯ್ ಕಟ್ ಸಂಸ್ಕೃತಿಯ ಬಗ್ಗೆ ತಮ್ಮ ಮನಸ್ಸಿನಲ್ಲಿರುವುದನ್ನ ಹೊರ ಹಾಕುತ್ತಿದ್ದಾರೆ. ಇದೇ ವೇಳೆ ಆರ್ ಮಾಧವನ್ ಕೂಡ ಈ ವಿಚಾರವಾಗಿ ಬಹಿರಂಗವಾಗಿ ಮಾತನಾಡಿದ್ದಾರೆ. ಪ್ರೇಕ್ಷಕರಿಗೆ ಒಳ್ಳೆಯ ಚಿತ್ರ ಸಿಕ್ಕರೆ ಖಂಡಿತಾ ಥಿಯೇಟರ್ ಗೆ ಬರುತ್ತಾರೆ ಎಂದು ಮಾಧವನ್ ಮಾಧ್ಯಮಗಳ ಜೊತೆಗಿನ ಸಂದರ್ಶನಲ್ಲಿ ಹೇಳಿದ್ದಾರೆ. ಚಿತ್ರದ ಕಥೆ ಮತ್ತು ನಟನೆ ಚೆನ್ನಾಗಿದ್ದರೆ ಬಹಿಷ್ಕಾರ ಮತ್ತು ಸಾಮಾಜಿಕ ಜಾಲತಾಣಗಳ ಟ್ರೆಂಡ್ಗಳಿಂದ ಧಕ್ಕೆಯಾಗುವುದಿಲ್ಲ ಎಂದಿದ್ದಾರೆ.
ಚಿತ್ರದ ಗುಣಮಟ್ಟ ಹಿಟ್-ಫ್ಲಾಪ್ ನಿರ್ಧರಿಸುತ್ತದೆ: ಮಾಧವನ್
ಕೆಲ ದಿನಗಳಿಂದ ಸೌತ್ ಚಿತ್ರಗಳು ಬಾಲಿವುಡ್ಗೆ ಹೊಡೆತ ನೀಡುತ್ತಿರುವ ಬಗ್ಗೆ ಮಾಧವನ್ ಅವರನ್ನು ಕೇಳಿದಾಗ, ‘ಈ ಹಿಂದೆ ಬಾಲಿವುಡ್ ಚಿತ್ರಗಳಿಗಿಂತ ಸೌತ್ ಚಿತ್ರಗಳು ಉತ್ತಮ ಪ್ರದರ್ಶನ ನೀಡಿದ್ದು ನಿಜ. ಆದರೆ ಆ ಚಲನಚಿತ್ರಗಳನ್ನು ಸಹ ವಿಮರ್ಶಿಸಲಾಗುತದೆ .ಇದನ್ನ ಸ್ಪರ್ದೆಯ ಭಾಗವಾಗಿ ತೆಗೆದುಕೊಳ್ಳಬೇಕು ಎಂದಿದ್ದಾರೆ.
ಕರೋನಾ ಸಮಯದಲ್ಲಿ ಚಿತ್ರಮಂದಿರಗಳು ಮುಂಚಿದ್ದರಿಂದ ಪ್ರೇಕ್ಷಕರ ಆಯ್ಕೆಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಜನರಿಗ ಪ್ರಪಂಚದ ಕಂಟೆಂಟ್ ಗಳನ್ನೂ ನೋಡಲು ಇಷ್ಟ ಪಡುತ್ತಾರೆ. ಚಿತ್ರದ ಗುಣಮಟ್ಟವೇ ಅದನ್ನು ಹಿಟ್ ಅಥವಾ ಫ್ಲಾಪ್ ಮಾಡುತ್ತದೆ ಎನ್ನುತ್ತಾರೆ ಮಾಧವನ್.
ಇತ್ತೀಚೆಗೆ ಆರ್ ಮಾಧವನ್ ನಟನೆಯ ರಾಕೆಟ್ರಿ: ನಂಬಿ ಎಫೆಕ್ಟ್ ಚಿತ್ರ ಬಿಡುಗಡೆಯಾಗಿತ್ತು. ಬಾಯ್ ಕಟ್ ಸಂಸ್ಕೃತಿಯ ಹೊರತಾಗಿಯೂ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಪ್ರದರ್ಶನ ನೀಡಿತು. ಅಷ್ಟೇ ಅಲ್ಲದೆ ಚಿತ್ರದಲ್ಲಿ ಮಾಧವನ್ ನಟನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. 25 ಕೋಟಿ ಬಜೆಟ್ನಲ್ಲಿ ತಯಾರಾದ ಚಿತ್ರ 50 ಕೋಟಿ ಬ್ಯುಸಿನೆಸ್ ಮಾಡಿದೆ. ಪ್ರಸ್ತುತ, ಮಾಧವನ್ ತಮ್ಮ ಮುಂಬರುವ ಚಿತ್ರ ಧೋಕಾ: ದಿ ರೌಂಡ್ ಕಾರ್ನರ್ ಪ್ರಚಾರದಲ್ಲಿ ನಿರತರಾಗಿದ್ದಾರೆ. ಇದರಲ್ಲಿ ದರ್ಶನ್ ಕುಮಾರ್ ಮತ್ತು ಅಪರಶಕ್ತಿ ಖುರಾನಾ ಅವರ ಜೊತೆ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.